

ಅಂದವಾಗಿ ಕಾಣಲು ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ. ಹೊಳೆಯುವ ಮತ್ತು ಮೃದು ತ್ವಚೆ ನಮ್ಮದಾಗಬೇಕು ಎಂಬ ಬಯಕೆ ಎಲ್ಲರಲ್ಲೂ ಇರುತ್ತದೆ. ಇಲ್ಲಿ ನಾವು ನಿಮಗೆ ಮನೆಯಲ್ಲೇ ಸಿದ್ಧಪಡಿಸಿ ಬಳಸಬಹುದಾದ ಫೇಸ್ಪ್ಯಾಕ್ ಕುರಿತು ಹೇಳುತ್ತಿದ್ದೇವೆ. ಕಾರ್ನ್ಫ್ಲೋರ್ ಕೇವಲ ಅಡುಗೆ ಮನೆಗೆ ಮಾತ್ರವಲ್ಲ ಈಗ ನಮ್ಮ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದು ನೈಸರ್ಗಿಕ ಎಕ್ಸ್ಫೋಲಿಯಂಟ್ ಆಗಿದ್ದು ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.(Health Tips)
ಕಾರ್ನ್ಫ್ಲೋರ್ ನೈಸರ್ಗಿಕ ಎಫ್ಫೋಲಿಯೇಟಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಹಾಗಾದ್ರೆ ಮೊದಲಿಗೆ ಕಾರ್ನ್ಫ್ಲೋರ್ ಫೇಸ್ಪ್ಯಾಕ್ನಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಕಾರ್ನ್ಫ್ಲೋರ್ ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ರೋಸ್ ವಾಟರ್ ಮತ್ತು ಜೇನುತುಪ್ಪವನ್ನು ಸೇರಿಸಿ ನಯವಾದ ಪೇಸ್ಟ್ ತಯಾರಿಸಿ. ಸಿದ್ಧಪಡಿಸಿದ ಪ್ಯಾಕ್ ಅನ್ನು ಮುಖಕ್ಕೆ ಅಪ್ಲೈ ಮಾಡಿ ಬಳಿಕ 15 ನಿಮಿಷಗಳ ಕಾಲ ಬಿಡಿ. ಸಮಯ ಮುಗಿದ ನಂತರ ನಿಮ್ಮ ಮುಖವನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ. ಒಮ್ಮೆ ಬಳಸಿದ ನಂತರ ನಿಮ್ಮ ಮುಖದ ಮೇಲೆ ಸಂಗ್ರಹವಾಗಿರುವ ಕೊಳೆಯು ಹೇಗೆ ನಿವಾರಣೆಯಾಗುತ್ತದೆ ಎಂಬುದನ್ನು ನೋಡಿ. ನೀವು ವಾರಕ್ಕೆ ಎರಡು ಬಾರಿ ಇದನ್ನು ಬಳಿಸಿ. ಒಂದು ವೇಳೆ ನಿಮ್ಮ ಸ್ಕಿನ್ ಸೂಕ್ಷ್ಮವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿದ ನಂತರ ಬಳಸಿ.