

ಕ್ಯಾನ್ಸರ್ ಒಂದು ಗಂಭೀರ ಮತ್ತು ಅಪಾಯಕಾರಿ ಕಾಯಿಲೆಯಾಗಿದೆ. ಇದು ಹಲವು ವಿಧಗಳಲ್ಲಿದೆ. ಇವುಗಳಲ್ಲಿ ತುಟಿ ಕ್ಯಾನ್ಸರ್ ಕೂಡ ಒಂದು. ತುಟಿಗಳ ಮೇಲೆ ಕ್ಯಾನ್ಸರ್ ಬಂದಾಗ ಅದನ್ನು ಲಿಪ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.(Health Tips)
ಇದು ಒಂದು ರೀತಿಯ ಬಾಯಿಯ ಕ್ಯಾನ್ಸರ್ ಆಗಿದ್ದು, ಇದು ಹೊರ ಚರ್ಮ, ಒಳ ಭಾಗ ಅಥವಾ ತುಟಿಗಳ ಕೆಳಗಿನ ಭಾಗದಲ್ಲಿ ಸಂಭವಿಸಬಹುದು. ಸಾಮಾನ್ಯವಾಗಿ ಈ ರೋಗವು ಧೂಮಪಾನ, ತಂಬಾಕು ಸೇವನೆ ಮತ್ತು ಹಾನಿಕಾರಕ ಸೂರ್ಯನ ಬೆಳಕಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಉಂಟಾಗುತ್ತದೆ. ತುಟಿ ಕ್ಯಾನ್ಸರ್ನ ಇತರ ಕಾರಣಗಳು ಮತ್ತು ಅದರ ಆರಂಭಿಕ ಲಕ್ಷಣಗಳನ್ನು ಇಲ್ಲಿ ತಿಳಿಸಲಾಗಿದೆ.