ಕೊಳ, ಕೆರೆ ಮೀನುಗಳಿಗಿಂತ ಸಮುದ್ರ ಮೀನು ಉತ್ತಮ; ಆರೋಗ್ಯ ತಜ್ಞರು...

fish (1)
Published on

ಬೆಂಗಳೂರು: ಸಸ್ಯಹಾರಿಗಳು, ಮಾಂಸಹಾರಿಗಳಿಗೆ ಅವರದ್ದೆ ಆಗಿರುವ ಆಹಾರ ಆಯ್ಕೆ ಇರುತ್ತದೆ. ಆದರೆ ನಾವು ಇಂದು ಮಾಂಸಹಾರದಲ್ಲಿ ಒಂದಾಗಿರುವ ಮೀನು ಆರೋಗ್ಯಕ್ಕೆ ಎಷ್ಟು ಮುಖ್ಯವಾಗಿ ಎನ್ನುವ ಕುರಿತಾಗಿ ಕೆಲವು ತಜ್ಞರ ಮಾಹಿತಿ ಅನುಸಾರವಾಗಿ ನೀಡಲಾಗಿದೆ.

ಮೀನಿನಲ್ಲಿರುವ ಪೋಷಕಾಂಶಗಳು: ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿವೆ. ಕೂದಲು, ಚರ್ಮದ ಸಮಸ್ಯೆಗಳು ಮತ್ತು ದೇಹದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಕೊಳದ ಮೀನುಗಳಿಗಿಂತ ಸಮುದ್ರದ ಮೀನುಗಳನ್ನು ತಿನ್ನುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಸಮುದ್ರ ಮೀನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಮುದ್ರ ಮೀನು ಕೂಡ ರುಚಿಕರವಾಗಿದೆ. ಈಗ ಸಮುದ್ರ ಮೀನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ.

1) ಸಮುದ್ರ ಮೀನುಗಳಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿದೆ. ಈ ಕಾರಣದಿಂದಾಗಿ, ಮೂಳೆಗಳು ಬಲವಾಗಿರುತ್ತವೆ ಮತ್ತು ದೃಢವಾಗುತ್ತವೆ.  

2) ಸಮುದ್ರದಲ್ಲಿರುವ ಮೀನು, ಸೀಗಡಿ ಮತ್ತು ಏಡಿಗಳಲ್ಲಿ ಸತುವು ಸಮೃದ್ಧವಾಗಿದೆ. ಸತುವು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

3) ಸಮುದ್ರದ ಮೀನುಗಳು ದೃಷ್ಟಿ ಸುಧಾರಿಸುವ ಶಕ್ತಿಯನ್ನು ಹೊಂದಿವೆ. ಇದರಲ್ಲಿರುವ ಒಮೆಗಾ-3 ಆಮ್ಲಗಳು ಮತ್ತು ವಿಟಮಿನ್‌ಗಳಿಂದ ದೃಷ್ಟಿ ಸುಧಾರಿಸುತ್ತದೆ.

4) ಮಾನಸಿಕ ಆತಂಕ, ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿರುವವರು ಸಿಂಗಡಿ ತಿನ್ನುವ ಮೂಲಕ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಸಮುದ್ರ ಮೀನುಗಳಲ್ಲಿರುವ ಪೋಷಕಾಂಶಗಳು ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಮರೆವು ಕಡಿಮೆಯಾಗುತ್ತದೆ.. ನೆನಪಿನ ಶಕ್ತಿ ಹೆಚ್ಚುತ್ತದೆ.

ಕೊಳದ ಮೀನುಗಳಿಗೆ ಹೋಲಿಸಿದರೆ, ಸಮುದ್ರ ಮೀನುಗಳು ಹೆಚ್ಚಿನ ಮಟ್ಟದ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಸೆಲೆನಿಯಮ್ ಅನ್ನು ಹೊಂದಿರುತ್ತವೆ. ಇವು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತವೆ. ಇದು ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಇವುಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಹೃದ್ರೋಗದ ಅಪಾಯವೂ ಕಡಿಮೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net