ಹಾಲುಣಿಸುವ ತಾಯಂದಿರು ಈ ವಿಷಯಗಳನ್ನು ತಪ್ಪದೆ ತಿಳಿದುಕೊಳ್ಳಿ…

feeding
Published on

ಬೆಂಗಳೂರು: ತಾಯಂದಿರು ಮಗುವಿಗೆ ಹಾಲುಣಿಸುವಾಗ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ಸಮಯದಲ್ಲಿಯೂ ಮಗುವಿಗೆ ಸೋಂಕು ತಗುಲುವ ಸಾಧ್ಯತೆಯಿರುವುದರಿಂದ ಹಾಲುಣಿಸುವ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅವಶ್ಯಕ. ಹಾಗಾದರೆ ಹಾಲುಣಿಸುವ ಸಮಯದಲ್ಲಿ ಹೇಗೆ ಕಾಳಜಿವಹಿಸಬೇಕು ಎಂದು ತಜ್ಱರು ತಿಳಿಸಿರುವ ಸಲಗೆಹಳು ಇಲ್ಲಿವೆ ನೋಡಿ...

ಶುಭ್ರವಾದ ಬಟ್ಟೆಗಳನ್ನು ಧರಿಸಿ
ತಾಯಿಯ ಹಾಲು ಮಗುವಿಗೆ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಮಗುವಿಗೆ ಹಾಲುಣಿಸುವಾಗ ಶುಚಿತ್ವದ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ. ಎದೆ ಭಾಗದ ಮೇಲೆ ಸೂಕ್ಷ್ಮಜೀವಿಗಳಿದ್ದರೆ, ಮಗುವಿಗೆ ಸೋಂಕು ತಗಲುತ್ತದೆ. ಆದ್ದರಿಂದ ಶುಭ್ರವಾದ ಬಟ್ಟೆಗಳನ್ನು ಧರಿಸಿ, ಗಾಳಿಯಾಡುವತಹ ಖಾದಿ ಬಟ್ಟೆಗಳಾದರೆ ಇನ್ನೂ ಅನುಕೂಲ.

ಎದೆ ಭಾಗ ಸ್ವಚ್ಛವಾಗಿಡಿ
ಹಾಲುಣಿಸುವ ಸಮಯದಲ್ಲಿ ಎದೆ ಭಾಗ ಸ್ವಚ್ಛವಾಗಿರಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಪ್ರತಿ ಬಾರಿ ಹಾಲುಣಿಸಿದ ನಂತರ ಸ್ವಚ್ಛಗೊಳಿಸುವ ಅಗತ್ಯವಿಲ್ಲ. ಆದರೆ ನೀವು ದಿನಕ್ಕೆ ಎರಡು ಬಾರಿ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಬಹುದು. ಮತ್ತೊಂದೆಡೆ, ಮಹಿಳೆಯು ಹೆಚ್ಚು ಬೆವರುತ್ತಿದ್ದರೆ, ಸ್ವಚ್ಛಗೊಳಿಸಿದ ನಂತರವಷ್ಟೇ ಹಾಲುಣಿಸಿ.

ಪರಿಮಳಯುಕ್ತ ಉತ್ಪನ್ನ ಬಳಸಬೇಡಿ
ಹಾಲುಣಿಸುವ ಸಮಯದಲ್ಲಿ ಮೊಲೆತೊಟ್ಟು ಬಿರುಕು ಬಿಡುವುದು ಮತ್ತು ನೋಯುವುದು ಸಹಜ. ಇದು ವಾಸಿಯಾಗಬೇಕಾದರೆ ತೆಂಗಿನೆಣ್ಣೆಯನ್ನು ಬಳಸಬಹುದು. ಅಲ್ಲದೆ ಕ್ರೀಮ್ ಅನ್ನು ಎಂದಿಗೂ ಬಳಸಬೇಡಿ. ಈ ಪರಿಮಳಯುಕ್ತ ಕ್ರೀಮ್‌ಗಳು ಮತ್ತು ಲೋಷನ್‌ಗಳು ಮಗುವಿಗೆ ಹಾನಿಕಾರಕವಾಗಿದ್ದು, ಪರಿಮಳಯುಕ್ತ ಸೋಪ್‌ಗಳನ್ನು ಸಹ ಬಳಸಬೇಡಿ.

ಸ್ತನ ಪಂಪ್ ಸ್ವಚ್ಛವಾಗಿಡಿ
ಮಹಿಳೆ ಸ್ತನ ಪಂಪ್ ಅನ್ನು ಬಳಸಿದರೆ, ಸ್ತನ ಪಂಪ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಸ್ತನ ಪಂಪ್ ಅನ್ನು ತೊಳೆಯುವಾಗ ಪಾತ್ರೆ ತೊಳೆಯುವ ಸೋಪಿನೊಂದಿಗೆ ಮಿಶ್ರಣ ಮಾಡಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net