

ಬೆಂಗಳೂರು: ಸಾಮಾನ್ಯವಾಗಿ ಬ್ರೆಡ್ ಮಸಾಲಾ ಕೇರಳದ ರಸ್ತೆ ಬದಿಯ ಅಂಗಡಿಯಲ್ಲಿ ಹೆಚ್ಚಾಗಿ ಮಾರಾಟವಾಗುವುದನ್ನು ನೀವೆಲ್ಲಾ ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ನೀವೀಗ ಈ ರೆಸಿಪಿಯನ್ನು ಮನೆಯಲ್ಲಿಯೇ ಮಾಡಬಹುದು.
ಬೇಕಾಗುವ ಪದಾರ್ಥಗಳು
ಬ್ರೆಡ್ ತುಂಡುಗಳು - ಒಂದು ಕಪ್
ಈರುಳ್ಳಿ - ಒಂದು
ಜೀರಿಗೆ - 1 tbsp
ಹಸಿರು ಮೆಣಸಿನಕಾಯಿ - 1
ಬೆಳ್ಳುಳ್ಳಿ - 10 ಎಸಳು
ಕ್ಯಾರೆಟ್ - ಕಾಲು ಕಪ್
ಕೋಸು - ಅರ್ಧ ಕಪ್
ಮೆಣಸಿನಕಾಯಿ - ಕಾಲು ಕಪ್
ಟೊಮ್ಯಾಟೊ - 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಅರ್ಧ ಚಮಚ
ಚಾಟ್ ಮಸಾಲಾ - 1 tbsp
ಮೆಣಸಿನ ಪುಡಿ - ಅರ್ಧ ಟೀಚಮಚ
ಟೊಮೆಟೊ ಸಾಸ್ - 1 ಟೀಸ್ಪೂನ್
ಚಿಲ್ಲಿ ಸಾಸ್ - 1 tbsp
ಕೊತ್ತಂಬರಿ ಸೊಪ್ಪು - ಸ್ವಲ್ಪ
ಬೆಣ್ಣೆ - 1 ಟೀಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
*ಬ್ರೆಡ್ ಚೂರುಗಳನ್ನು ಸಣ್ಣ ತುಂಡುಗಳಾಗಿ ಕಟ್ ಮಾಡಿಟ್ಟುಕೊಳ್ಳಿ.
*ಈರುಳ್ಳಿ, ಮೆಣಸಿನಕಾಯಿ, ಕ್ಯಾರೆಟ್, ಎಲೆಕೋಸು, ಕೊತ್ತಂಬರಿ ಸೊಪ್ಪು ಮತ್ತು ಟೊಮೆಟೊವನ್ನು ನುಣ್ಣಗೆ ಕತ್ತರಿಸಿ.
*ಬಾಣಲೆಯಲ್ಲಿ ಬೆಣ್ಣೆಯನ್ನು ಕರಗಿಸಿ. ನಂತರ ಜೀರಿಗೆ, ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ.
*ಈಗ ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.
*ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
*ಶುಂಠಿ ಬೆಳ್ಳುಳ್ಳಿ ಪೇಸ್ಟ್‌ನ ಹಸಿರು ವಾಸನೆ ಹೋದ ನಂತರ, ಕ್ಯಾರೆಟ್, ಕೋಸು, ಮೆಣಸಿನಕಾಯಿ ಮತ್ತು ಟೊಮೆಟೊ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಚಾಟ್ ಮಸಾಲಾ, ಮೆಣಸಿನ ಪುಡಿ, ಟೊಮೆಟೊ ಸಾಸ್, ಚಿಲ್ಲಿ ಸಾಸ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಎಲ್ಲಾ ಚೆನ್ನಾಗಿ ಬೆಂದ ನಂತರ ಬ್ರೆಡ್ ತುಂಡುಗಳನ್ನು ಸೇರಿಸಿ, ನಿಧಾನವಾಗಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ಬ್ರೆಡ್ ಮಸಾಲಾ ರೆಡಿ.