ಎರಡು ಕಪ್ ಕೊಬ್ಬರಿ ಎಣ್ಣೆಗೆ ಅರ್ಧ ಕಪ್ ವೀಳ್ಯದೆಲೆ ರಸ ಮತ್ತು ಅರ್ಧ ಕಪ್ ಒಂದೆಲಗದ ರಸ ಬೆರೆಸಿ ಚೆನ್ನಾಗಿ ಕುದಿಸಿ ನಿತ್ಯ ತಲೆಗೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
ವೀಳ್ಯದೆಲೆ ರಸದಲ್ಲಿ ಲವಂಗದ ಪುಡಿ ಬೆರೆಸಿ, ಅದರಲ್ಲಿ ಅದ್ದಿದ ಹತ್ತಿಯನ್ನು ನೋವಿರುವ ಭಾಗದಲ್ಲಿ ಇರಿಸಿಕೊಂಡರೆ ತೀವ್ರ ಹಲ್ಲುನೋವಿನಿಂದ ಬಿಡುಗಡೆ ಸಿಗುತ್ತದೆ. ಕಾಚು, ಲವಂಗ, ಪಚ್ಚಕರ್ಪರದೊಂದಿಗೆ ವೀಳ್ಯದೆಲೆಯನ್ನು ಜಗಿದರೆ ಹಲ್ಲುನೋವು, ಬಾವು ಪರಿಹಾರವಾಗುತ್ತದೆ.
ಎರಡು ವೀಳ್ಯದೆಲೆಯಲ್ಲಿ ಅಡಕೆ ಚೂರು, ನಾಲ್ಕು ಏಲಕ್ಕಿ ಕಾಳುಗಳನ್ನಿಟ್ಟು ಜಗಿದು ರಸ ಹೀರಿದರೆ ಗರ್ಭಿಣಯರ ವಾಕರಿಕೆ, ಬಿಕ್ಕಳಿಕೆ ಶಮನವಾಗುತ್ತದೆ.