ಇಲಿಗಳನ್ನು ತೊಡೆದುಹಾಕಲು, ಈ ಸ್ಪ್ರೇ ಅನ್ನು ನಿಮ್ಮ ಮನೆಯ ಮೂಲೆಗಳಲ್ಲಿ, ಅವು ಓಡಾಡುವ ಜಾಗದಲ್ಲಿ, ಗ್ಯಾಸ್ ಸ್ಟೌವ್ ಹಿಂಭಾಗ, ಸಿಂಕ್ ಕೆಳಗಿನ ಪೈಪ್‌ಗಳ ಸಂದಿ ಹಾಗೂ ಅಡುಗೆಮನೆಯ ಮೂಲೆ ಮೂಲೆಗಳಲ್ಲಿ ಈ ಸ್ಪ್ರೇ ಅನ್ನು ಚೆನ್ನಾಗಿ ಸಿಂಪಡಿಸಿ. ಆದಾಗ್ಯೂ, ಇಲಿಗಳಿಗೆ ಕಣ್ಣುಗಳು ಅಷ್ಟೊಂದು ಚುರುಕಾಗಿರುವುದಿಲ್ಲ, ಆದರೆ ಅವುಗಳ ಮೂಗಿನ ವಾಸನೆ ಗ್ರಹಿಸುವ ಶಕ್ತಿ ಅತಿ ತೀಕ್ಷ್ಣವಾಗಿರುತ್ತದೆ. ಈ ಸ್ಪ್ರೇನ ಕಟು ವಾಸನೆ ಅವುಗಳ ಉಸಿರಾಟಕ್ಕೆ ತೊಂದರೆ ಕೊಡುವುದರಿಂದ ಅವು ಆ ಜಾಗದಿಂದ ಓಡಿಹೋಗುತ್ತವೆ.