ಮಲಗುವ ಮುನ್ನ ಮುಖ ತೊಳೆದ್ರೆ ಸಾಲೊಲ್ಲ ಪಾದವು ಸ್ವಚ್ಛವಾಗಿರಬೇಕು; ಇಲ್ಲದಿದ್ರೆ ಈ ಕಾಯಿಲೆಗಳು ಕಾಡೋದು ಫಿಕ್ಸ್..Wash Feet

Wash Feet Before Going to Bed
Wash Feet Before Going to Bed
Published on

ಪ್ರಮುಖ ಮುಖ್ಯಾಂಶಗಳು

  • ದಿನವಿಡೀ ನೆಲದ ಮೇಲಿರುವ ಪಾದದಲ್ಲಿ ಬ್ಯಾಕ್ಟೀರಿಯಾ ಇರುವ ಕಾರಣ ಪಾದ ತೊಳೆಯಬೇಕು.
  • ಪಾದ ತೊಳೆದು ನಿದ್ರಿಸಿದರೆ ಸುಖಕರ ನಿದ್ದೆ ಬರೋದು ಗ್ಯಾರಂಟಿ.
  • ಮಧುಮೇಹಿಗಳು ಮಲಗುವ ಮುನ್ನ ಕಡ್ಡಾಯವಾಗಿ ಕಾಲು ತೊಳೆಯಲೇ ಬೇಕು.
ಇಡೀ ದೇಹದಲ್ಲಿ ನಾವು ಕಡೆಗಣಿಸುವ ಜಾಗ ಎಂದರೆ ಅದು ನಮ್ಮ ಕಾಲುಗಳು. ದೇಹದ ಭಾರವನ್ನು ದಿನಪೂರ್ತಿ ಹೊರುವ ಪಾದವನ್ನು ಇಗ್ನೋರ್​ ಮಾಡುತ್ತೇವೆ. ಕಾಲನ್ನು ಸ್ವಚ್ಛವಾಗಿಟ್ಟುಕೊಳ್ಳೋದಕ್ಕೆ ಹಿಂದೇಟು ಹಾಕುತ್ತೇವೆ. ಎಲ್ಲರಿಗೂ ಕಾಣಿಸುವ ಮುಖವನ್ನು ಮಾತ್ರ ತೊಳೆದು ಕಾಲನ್ನು ಕಡೆಗಣಿಸುತ್ತೇವೆ. ಅಂತಹ ಅಭ್ಯಾಸ ನಿಮಗೆ ಇದ್ದರೆ, ಖಂಡಿತ ಇಂದಿನಿಂದ ಬಿಟ್ಟುಬಿಡಿ ಇನ್ಮುಂದೆ ರಾತ್ರಿ ಮಲಗುವ ಮುನ್ನ ಕಾಲು ತೊಳೆದು ಮಲಗಿ ಯಾಕೆ, ಏನು, ಲಾಭವೇನು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.
ರಾತ್ರಿ ಕಾಲನ್ನು ತೊಳೆಯದೇ ಹಾಗೆಯೇ ವಿಶ್ರಮಿಸಿದರೆ ನಿತ್ಯ ಸಾಕಷ್ಟು ಸಮಸ್ಯೆ ಕಾಡುತ್ತದೆ ಎನ್ನುವುದು ವೈದ್ಯರ ಕಾಳಜಿ. ನಾವು ನಿತ್ಯ ನಡೆದಾಡುವಾ ಕಾರಣ ನೆಲದಲ್ಲಿರುವ ಸೂಕ್ಷ್ಮ ಜೀವಿಗಳ ಪಾದಕ್ಕೆ ಅಂಟಿಕೊಳ್ಳುತ್ತದೆ. ಅದನ್ನು ತೊಳೆಯದೆ ಮಲಗಿಕೊಂಡರೆ, ಅವು ಮೂಗು, ಬಾಯಿ ಹಾಗೂ ಚರ್ಮದ ಮುಖೇನ ದೇಹವನ್ನು ಸೇರುತ್ತವೆ ಎನ್ನಲಾಗಿದೆ.

ಪಾದ ತೊಳೆಯುವುದರಿಂದ ಏನಾಗುತ್ತದೆ?

ರಾತ್ರಿ ಪಾದಗಳನ್ನು ತೊಳೆದು ಮಲಗುವುದರಿಂದ ಕಾಲಲ್ಲಿರುವ ಕೊಳಕು ಬ್ಯಾಕ್ಟೀರಿಯಾ, ಬೆವರು ಶೂ ನಲ್ಲಿರುವ ಸೂಕ್ಷ್ಮ ಜೀವಿಗಳು ಪಾದಕ್ಕೆ ಅಂಟಿಕೊಂಡು ಹಾಸಿಗೆ ಮೇಲೆ ಹತ್ತದಂತೆ ನೋಡಿಕೊಳ್ಳಬಹುದು ಇದು ಆರೋಗ್ಯಕರ ಮಾರ್ಗ ಎನ್ನಲಾಗಿದೆ.

ಕಾಲು ತೊಳೆಯುವುದು ಮುಖ್ಯ ಏಕೆ?

ನಿತ್ಯ ಕಾಲು ತೊಳೆಯುವುದು ಒಳ್ಳೆಯ ಅಬ್ಯಾಸ ಹಿಂದೆ ಇದನ್ನು ಸಂಪ್ರದಾಯ ಎನ್ನುತ್ತಿದ್ದರು. ಆದರೆ, ಇಂದು ಇದಕ್ಕೆ ಸೈಂಟಿಫಿಕಲಿ ಅರ್ಥವನ್ನು ವೈದ್ಯರು ಕೊಟ್ಟಿದ್ದಾರೆ. ಕಾಲು ತೊಳೆಯಬೇಕು ಎನ್ನುವುದಕ್ಕೆ ಕಾರಣ ಏನಂದ್ರೆ, ನಿತ್ಯ ಹೊರಗೆ ಹೋಗುವ ಮುನ್ನ ಶೂ, ಚಪ್ಪಲಿ ಧರಿಸೋದು ಮಾಮೂಲಿ ಅದರಲ್ಲಿ ಬಿಟ್ಟುಕೊಳ್ಳುವ ಬೆವರು ಸೂಕ್ಷ್ಮ ಜೀವಿಗಳನ್ನು ಉತ್ಪತ್ತಿ ಮಾಡುತ್ತವೆ. ಕೊಳಕು, ಶಿಲೀಂಧ್ರಗಳು ಇರುತ್ತವೆ. ಕಾಲು ತೊಳೆದು ಮಲಗಿಕೊಂಡರೆ ಇವುಗಳ ನಿರ್ನಾಮವಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವೈದ್ಯರೊಬ್ಬರು ಹೇಳಿಕೊಂಡಿದ್ದಾರೆ.

ಕಾಲು ತೊಳೆಯದಿದ್ದರೆ ಏನಾಗುತ್ತದೆ?

ಮಲಗುವ ಮುನ್ನ ಕಾಲು ತೊಳೆಯದೆ ಮಲಗಿದರೆ, ಚರ್ಮದ ಸಮಸ್ಯೆ, ತುರಿಕೆ, ಬಿರುಕು ಬಿಟ್ಟ ಹಿಮ್ಮಡಿ ಸಮಸ್ಯೆ, ಸಿಪ್ಪೆ ಸುಲಿಯುವುದು, ಉರಿದ ಚರ್ಮ, ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ, ಕ್ರೀಡಾಪಟುಗಳು ಹೆಚ್ಚು ಗಂಟೆ ಶೂ ಧರಿಸುತ್ತಾರೆ. ಅವರು ಸುಸ್ತಾಗಿ ಬಂದು ಹಾಗೆಯೇ ಮಲಗಿಕೊಂಡರೆ ನಿದ್ರೆಯೂ ಬರೋದಿಲ್ಲ. ಗಂಭೀರ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಕಾಲು ತೊಳೆಯುವದರಿಂದಾಗುವ ಪ್ರಯೋಜನವೇನು?

ಬೆಚ್ಚಗಿನ ನೀರಲ್ಲಿ ಕಾಲು ತೊಳೆದು ವಿಶ್ರಮಿಸುವುದರಿಂದ ಒಳ್ಳೆ ನಿದ್ದೆ ಬಂದಂತಾಗುತ್ತದೆ. ಏನೋ ಒಂದು ಆರಾಮದಾಯಕ ಭಾವನೆಯನ್ನು ನೀಡುತ್ತದೆ. ಇದಿರಂದ ಒಳ್ಳೆ ನಿದ್ರೆ ಬರೋದು ಗ್ಯಾಂರಂಟಿ ಎನ್ನುತ್ತಾರೆ ವೈದ್ಯರು.

ಮಧುಮೇಹಿಗಳೇ ಎಚ್ಚರ!

ಕಾಲು ತೊಳೆಯುವ ವಿಚಾರದಲ್ಲಿ ಮಧುಮೇಹಿಗಳಂತೂ ಎಚ್ಚರಿಕೆಯಿಂದಿರಬೇಕು, ಏಕೆಂದರೆ ಸೂಕ್ಷ್ಮ ಜೀವಿಗಳು ಹೆಚ್ಚು ದೇಹ ಸೇರುವುದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಇವರು ಪಾದದ ವಿಚಾರವಾಗಿ ಹೆಚ್ಚಾಗಿ ಗಮನ ಹರಿಸಬೇಕು. ನಿತ್ಯ ಮಲಗುವ ಮುನ್ನ ಪಾದ ತೊಳೆಯಲೇ ಬೇಕು ಎಂದು ಹೇಳಿದ್ದಾರೆ, (ಏಜೆನ್ಸೀಸ್).
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net