

ನಾನು ಕೆಲಸ ಕಳೆದುಕೊಳ್ಳಬಹುದೇನೋ ಎಂದು ಹೇಳಿದಾಗ ಆತ ತಲೆಯಾಡಿಸಿ ‘ತ್ಚ್ ತ್ಚ್’ ಎಂದ.
When I told him that I might lose the job, he shook his head and clucked.
ರಮೇಶ್ನ್ನ ಕೇಳೋಣ. ನನಗಿಂತ ಅವನು ಸಿನಿಮಾಗಳ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಾನೆ.
Let’s ask Ramesh. He’s more clued up on/about films than me.
ಮಳೆ ಬರಲು ಶುರುವಾದಾಗ ಒದ್ದೆಯಾಗುವುದನ್ನು ತಪ್ಪಿಸಲು ಜನರು ಸಿಕ್ಕಿದ ಅಂಗಡಿಗಳ ಬಳಿ ಗುಂಪು ಸೇರಿದರು.
When it started to rain, people clumped at the shops to avoid getting drenched.
ವಿದ್ಯಾರ್ಥಿಗಳ ಒಂದು ಗುಂಪು ತಮ್ಮ ಫಲಿತಾಂಶ ತಿಳಿಯಲು ಸೂಚನಾ ಫಲಕದ ಎದುರು ಗುಂಪುಗೂಡಿತು / ಸೇರಿತು.
A clutch of students clustered in front of the notice board to know their results.
ಅವನು ತನ್ನ ಹೊಟ್ಟೆಯನ್ನು ಕೈಯಲ್ಲಿ ಒತ್ತಿ ಹಿಡಿದುಕೊಂಡು ನೋವಿನಿಂದ ನರಳುತ್ತಿದ್ದ.
He was wailing in pain clutching his stomach.
ಸ್ಲೇಟ್ನ್ನು ತನ್ನ ಎದೆಗೆ ಒತ್ತಿಕೊಂಡು ಹುಡುಗಿ ಹೊರಗೆ ಓಡಿದಳು.
The girl ran out clutching the slate to her chest.
ಅಡುಗೆಮನೆ ಉಳಿದ, ಹಳಸಿದ ಆಹಾರ, ತೊಳೆಯದ ಪಾತ್ರೆಗಳು ಹಾಗೂ ಕೊಳೆತ ತರಕಾರಿಗಳಿಂದ ಅಸ್ತವ್ಯಸ್ತ ಸ್ಥಿತಿಯಲ್ಲಿತ್ತು.
Her kitchen was cluttered with leftovers, stale foods, unwashed vessels & rotten veg.