

ಸೀಬೆ ಹಣ್ಣಿನ ಪಲ್ಯ ಮಾಡುವ ವಿಧಾನ ಹೀಗಿರಲಿದೆ
ಫೈಬರ್, ನಾರಿನಾಂಶ ಇರುವ ಸೀಬೆ ಬಡವರ ಸೇಬು
ಸೀಬೆ ಹಣ್ಣಿನಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
ಸೀಬೆ ಹಣ್ಣನ್ನು ಬಡವರ ಸೇಬು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ನಾರಿನಾಂಶ, ಆಂಟಿ ಆಕ್ಸಿಡೆಂಟ್, ವಿಟಮಿನ್ ಸಿ, ಕಡಿಮೆ ಕ್ಯಾಲೋರಿ ಹಾಗೂ ನಾರಿನಾಂಶ ತೂಕ ಹೆಚ್ಚಳವನ್ನು ನಮಗೆ ಅರಿಯದಂತೆ ನಿವಾರಿಸುತ್ತದೆ. ಸಾಮಾನ್ಯವಾಗಿ ನಾವು ಸೀಬೆ ಹಣ್ಣನ್ನು...ಜ್ಯೂಸ್ ಆಗಿ ಅಥವಾ ಅದಕ್ಕೆ ಉಪ್ಪುಖಾರ ಹಾಗಿ ರಸಮಯವಾಗಿ ಸೇವನೆ ಮಾಡುತ್ತೇವೆ. ಆದರೆ, ಇದರಿಂದ ರುಚಿಕರವಾಗಿ ಅಡುಗೆಯೊಂದನ್ನು ತಯಾರಿ ಮಾಡಬಹುದು ಎಂದರೆ ನಂಬುತ್ತೀರಾ?.
ಪ್ರೋಟೀನ್ ಮತ್ತು ಫೈಬರ್ನಿಂದ ಕೂಡಿರುವ ಸೀಬೆ ಹಣ್ಣಿನ ಪಲ್ಯ ಮಾಡಿ ರೊಟ್ಟಿ ಮತ್ತು ಅನ್ನದಲ್ಲಿ ತಿನ್ನಬಹುದಾಗಿದೆ. ಸದ್ಯ ಈ ಸೀಬೆ ಹಣ್ಣಿನ ಪಲ್ಯವನ್ನು ಹೇಗೆ ಮಾಡುವುದು ಎನ್ನುವುದನ್ನು ನೋಡೋಣ.
ಸೀಬೆ ಹಣ್ಣಿನ ಪಲ್ಯ ಮಾಡಲು ಬೇಕಾದ ಸಾಮಗ್ರಿಗಳು
ಸೀಬೆ ಹಣ್ಣು - 2( ಬೀಜ ತೆಗೆದುರುವಂತೆ ನೋಡಿಕೊಳ್ಳಿ)
ಸಾಸಿವೆ
ಮೆಣಸಿನಕಾಯಿ -2 ಸಣ್ಣಗೆ ಕತ್ತರಿಸಿ
ಕರಿಬೇವು, ಇಂಗು ಅಗತ್ಯಕ್ಕೆ ಬೇಕಾದಷ್ಟು
ಅರಿಶಿನ-ಒಂದು ಚಿಟಿಕೆ
ಮೆಣಸಿನ ಪುಡಿ- ಅರ್ಧ ಟೀ ಚಮಚ
ತುರಿದ ತೆಂಗಿನಕಾಯಿ ಅಥವಾ ಹುರಿದ ಕಡಲೇಕಾಯಿ ಪುಡಿ- 2 ಚಮಚ
ಎಣ್ಣೆ, ಉಪ್ಪು ಅಗತ್ಯಕ್ಕೆ ಬೇಕಾದಷ್ಟು
ತಯಾರಿ ಮಾಡುವ ವಿಧಾನ
ಒಂದು ಪ್ಯಾನ್ಗೆ ಸ್ವಲ್ಪ ಎಣ್ಣೆ ಬಿಸಿ ಮಾಡಿ ಹಾಕಿಕೊಳ್ಳಿ.
ಅದಕ್ಕೆ ಉದ್ದು ಮತ್ತು ಕಡಲೆ ಹಿಟ್ಟು ಹಾಕಿ ಕೆಂಪಾಗುಗುವವರೆಗೂ ಉರಿದುಕೊಳ್ಳಿ
ಪಲ್ಯ ಮಾಡುವುದು ಹೀಗೆ
ಈಗ ಸಣ್ಣಗೆ ಕತ್ತರಿಸಿದ ಸೀಬೆ ಹಣ್ಣಿನ ತುಂಡನ್ನು ಪ್ಯಾನ್ಗೆ ಹಾಕಿ ಉರಿದುಕೊಳ್ಳಿ. ಸೀಬೆ ಉರಿಯುವಾಗ ಅದಕ್ಕೆ ಉಪ್ಪು ಹಾಕಿ. ಅರಿಶಿನ ಹಾಕಿ ಮೂರ್ನಾಲ್ಕು ನಿಮಿಷ ಸಣ್ಣ ಉರಿಯಲ್ಲಿ ಇಡಿ.
ಸೀಬೆ ಹಣ್ಣಿನ ಸಿಪ್ಪೆ ಮೃದುವಾಗುವವರೆಗೂ ಉರಿದು ಕುರುಕಲು ತಿಂಡಿಯಂತಾಗಬೇಕು.
ಸೀಬೆ ಹಣ್ಣು ಮೃದುವಾದ ನಂತರ, ಮೆಣಸಿನ ಪುಡಿ ಮಿಶ್ರಣ ಮಾಡಿ ಅಂತಿಮವಾಗಿ ಹಸಿ ತೆಂಗಿನ ಕಾಯಿ ತುರಿ ಅಥವಾ ಕಡಲೇ ಹಿಟ್ಟನ್ನು ಸಿಂಪಡಿಸಿ ಮುಶ್ರಣ ಮಾಡಿ. ಈಗ ಸೀಬೆ ಹಣ್ಣಿನ ಪಲ್ಯ ತಿನ್ನಲು ಸಿದ್ದ.
ಈ ಸೀಬೆ ಹಣ್ಣು ಗ್ಲೈಸೆಮಿಕ್ ಅನ್ನು ಹೊಂದಿದೆ. ಇದರಲ್ಲಿ ಇರುವ ಫೈಬರ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುವಂತೆ ಮಾಡುತ್ತದೆ.
ಸೀಬೆಯಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಯನ್ನು ಸುಧಾರಿಸುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಮಲಬದ್ಧತೆ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.
ಇದರಲ್ಲಿ ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಅಂಶ ಇರುವುದರಿಂದ ತೂಕ ಇಳಿಕೆಗೆ ಕಾರಣವಾಗುತ್ತದೆ. ಅನಗತ್ಯ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತದೆ. ಈ ಸೀಬೆ ಹಣ್ಣಿನ ಪಲ್ಯವನ್ನು ನೀವು ಬಾಯ್ಲ್ಡ್ ರೈಸ್ ಹಾಗೂ ಅನ್ನ, ರೊಟ್ಟಿ, ಸೌತ್ ಇಂಡಿಯನ್ ಆಹಾರದೊಂದಿಗೆ ತಿನ್ನಲು ಚಂದ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್).