

ಕಡಲೆಕಾಯಿ ಕ್ಯಾಲೋರಿ, ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ಕೊಬ್ಬುಗಳು, ಫೈಬರ್, ಒಮೆಗಾ 6 ಕೊಬ್ಬಿನಾಮ್ಲಗಳು, ವಿಟಮಿನ್ಗಳು, ಪೊಟ್ಯಾಸಿಯಮ್, ರಂಜಕ, ಸತು, ಕಬ್ಬಿಣ, ಮೆಗ್ನೀಸಿಯಮ್, ಇತ್ಯಾದಿಗಳಂತಹ ವಿವಿಧ ಪೋಷಕಾಂಶಗಳನ್ನು ಹೊಂದಿವೆ. ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಅಪಾಯಕಾರಿ. ಕಡಲೆಕಾಯಿಯಿಂದ ಕೊಲೆಸ್ಟ್ರಾಲ್ ಶೇಖರಣೆ ಆಗಲ್ಲ. ಆದ್ದರಿಂದ ಕಡಲೆಕಾಯಿ ತಿನ್ನುವುದು ಒಳ್ಳೆಯದು.
ಕಡಲೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳೂ ಇದೆ. ಯಾವುದೇ ಆದ್ರೂ ಅತಿಯಾದ್ರೆ ಅಮೃತವೂ ವಿಷವೇ ಆದಂತೆ, ಹಾಗಾಗಿ ಇತಿ ಮಿತಿಯಲ್ಲಿ ಸೇವಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದು.
ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ಫೈಬರ್ ಹೊಂದಿದೆ. ಕಡಲೆಕಾಯಿ ತಿನ್ನೋದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಹಾಗಾಗಿ ಪದೇ ಪದೇ ತಿನ್ನುವುದು ತಪ್ಪುತ್ತದೆ. ಇದರಿಂದ ತೂಕ ಹೆಚ್ಚಾಗಲ್ಲ. ಜಂಕ್ ಫುಡ್ಗಳಿಗಿಂತ ಕಡಲೆಕಾಯಿ ಬೀಜಗಳನ್ನು ಆಹಾರದಲ್ಲಿ ಸೇರಿಸಿದ್ರೆ ಉತ್ತಮ.
ನಿಯಮಿತ ಕಡಲೆಕಾಯಿ ಸೇವನೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಡಲೆಕಾಯಿಯಲ್ಲಿ ಮೆಗ್ನೀಸಿಯಮ್, ತಾಮ್ರ ಮತ್ತು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು ಇವು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ. . ಕಡಲೆಕಾಯಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳು, ಫೈಬರ್ ಮತ್ತು ಪ್ರೋಟೀನ್ಗಳು ಸಮೃದ್ಧವಾಗಿವೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಪಧಮನಿಗಳ ಒಳ ಪದರದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾದರೆ.. ಹೃದಯಕ್ಕೆ ಒಳ್ಳೆಯದು.
ಕಡಲೆಕಾಯಿ ಸೇವನೆ ಚಳಿಗಾಲದಲ್ಲಿ ಬರುವ ಒಣಚರ್ಮದ ಸಮಸ್ಯೆಯೂ ದೂರವಾಗುತ್ತದೆ. ಕಡಲೆಕಾಯಿ ಎಣ್ಣೆಯನ್ನು ಚರ್ಮಕ್ಕೆ ಲೇಪನ ಮಾಡೋದರಿಂದ ಕಲೆಗಳು ಕಡಿಮೆ ಆಗುತ್ತವೆ.
ಕಡಲೆಕಾಯಿಯಲ್ಲಿ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನ ಸಂಯೋಜನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಮತ್ತು ಊಟದ ನಂತರ ಗ್ಲೂಕೋಸ್ನಲ್ಲಿ ತ್ವರಿತ ಸ್ಪೈಕ್ಗಳನ್ನು ತಡೆಯುತ್ತದೆ. ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಅಥವಾ ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯದಲ್ಲಿರುವವರಿಗೆ ಇದು ಪ್ರಯೋಜನಕಾರಿಯಾಗಿದೆ.
ಕಡಲೆಕಾಯಿಯು ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಇತರ ಖನಿಜಗಳ ಉತ್ತಮ ಮೂಲವಾಗಿದೆ, ಇದು ಬಲವಾದ ಮತ್ತು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.