ಗಾತ್ರದಲ್ಲಿ ಚಿಕ್ಕದಾದರೂ ದ್ರಾಕ್ಷಿಯಲ್ಲಿ ನಾನಾ ಆರೋಗ್ಯ ಪ್ರಯೋಜನಗಳು ಅಡಗಿವೆ..!

gmix
Published on

Grapes in Daily Diet: ದ್ರಾಕ್ಷಿಯಲ್ಲಿ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯೆಂಟ್ಗಳು ಸಮೃದ್ಧವಾಗಿವೆ. ಆದ್ದರಿಂದ ರಕ್ತದೊತ್ತಡವನ್ನು ಹತೋಟಿಯಲ್ಲಿಟ್ಟುಕೊಂಡರೆ ಹೃದಯವನ್ನು ಆರೋಗ್ಯವಾಗಿಡುತ್ತದೆ.


ಗಾತ್ರದಲ್ಲಿ ಚಿಕ್ಕದಾದರೂ ದ್ರಾಕ್ಷಿಯಲ್ಲಿ ನಾನಾ ಆರೋಗ್ಯ ಪ್ರಯೋಜನಗಳು ಅಡಗಿದೆ. ಕಪ್ಪು, ಕೆಂಪು ಮತ್ತು ಹಸಿರು ಹೀಗೆ ದ್ರಾಕ್ಷಿಗಳು ಎರಡು ಮೂರು ಬಣ್ಣಗಳಲ್ಲಿ ಬರುತ್ತವೆ. ಈ ಹಣ್ಣನ್ನು ತಿನ್ನಬೇಕಾದರೆ ಸಿಪ್ಪೆ ತೆಗೆಯುವ ಅಥವಾ ಕತ್ತರಿಸುವ ತೊಂದರೆ ಇರುವುದಿಲ್ಲ. ಮಾರುಕಟ್ಟೆಯಿಂದ ತಂದು ಹಾಗೆಯೇ ತೊಳೆದು ತಿನ್ನಬಹುದು.


ಈ ರಸಭರಿತ ದ್ರಾಕ್ಷಿ ತಿನ್ನುವುದರಿಂದ ಬಾಯಿ ರುಚಿಯ ಜೊತೆಗೆ ಆರೋಗ್ಯ ವೃದ್ದಿ ಕೂಡ ಆಗುತ್ತದೆ ಎಂದು ಪೌಷ್ಟಿಕತಜ್ಞ ನಟಾಲಿ ಓಲ್ಸೆನ್ ಹೇಳುತ್ತಾರೆ.
ದ್ರಾಕ್ಷಿಯಲ್ಲಿ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯೆಂಟ್ಗಳು ಸಮೃದ್ಧವಾಗಿವೆ. ಆದ್ದರಿಂದ ರಕ್ತದೊತ್ತಡವನ್ನು ಹತೋಟಿಯಲ್ಲಿಟ್ಟುಕೊಂಡರೆ ಹೃದಯವನ್ನು ಆರೋಗ್ಯವಾಗಿಡುತ್ತದೆ.


ಸಂಶೋಧನೆಯ ಪ್ರಕಾರ, ಆಂಟಿಆಕ್ಸಿಡೆಂಟ್ಗಳಂತಹ ಅಂಶಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.


ದ್ರಾಕ್ಷಿ ನಾರು ಮಲಬದ್ಧತೆಯನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಗಮವಾಗಿರಿಸುತ್ತದೆ. ದ್ರಾಕ್ಷಿಯಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನಾಂಶ ಕಡಿಮೆ. ಹಾಗಾಗಿ ನೀವು ಡಯಟ್ ಮಾಡುತ್ತಿದ್ದರೆ ಪ್ರತಿದಿನ ದ್ರಾಕ್ಷಿಯನ್ನು ಸೇವಿಸಿ. ದ್ರಾಕ್ಷಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ತ್ವಚೆಯನ್ನು ಯೌವನಯುತವಾಗಿ ಮತ್ತು ಕಾಂತಿಯುತವಾಗಿರಿಸುತ್ತದೆ ಚರ್ಮದ ಮೇಲೆ ವಯಸ್ಸಾದ ಲಕ್ಷಣಗಳನ್ನು ತೋರಿಸುವುದಿಲ್ಲ. ವಿಟಮಿನ್ ಎ ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ.


ದ್ರಾಕ್ಷಿಯಲ್ಲಿರುವ ವಿಟಮಿನ್ ಕೆ ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿರಿಸುತ್ತದೆ. ದ್ರಾಕ್ಷಿಯಲ್ಲಿರುವ ಪಾಲಿಫಿನಾಲ್ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ದ್ರಾಕ್ಷಿಯು ನರಗಳು ಮತ್ತು ಮೆದುಳನ್ನು ತಾಜಾ ಮತ್ತು ಸಕ್ರಿಯವಾಗಿರಿಸುತ್ತದೆ. ಆತಂಕವನ್ನು ದೂರ ಮಾಡುತ್ತದೆ. ದ್ರಾಕ್ಷಿಯ ಉತ್ಕರ್ಷಣ ನಿರೋಧಕಗಳು ಆಸ್ತಮಾ ಮತ್ತು ಉಸಿರಾಟದ ಸಮಸ್ಯೆಗಳಲ್ಲಿ ಉಪಯುಕ್ತವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net