ಊಟದ ನಂತರ 5 ನಿಮಿಷದ ನಡಿಗೆಯಿಂದ 5 ಪ್ರಯೋಜನೆಗಳನ್ನು ಪಡೆಯಿರಿ; ಇಲ್ಲಿದೆ ಉಪಯುಕ್ತ ಮಾಹಿತಿ | Walk

dk - 2025-02-24T160327.355
Published on

Walk : ಕೆಡಿಮೆ ತೀವ್ರತೆಯ ವ್ಯಾಯಾಮಗಳಲ್ಲಿ ನಡಿಗೆಯು ಅತ್ಯುತ್ತವಾಗಿದ್ದು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ನಡಗೆಯಿಂದ ಉತ್ತಮ ಪ್ರಯೋಜನೆಗಳನ್ನು ಪಡೆಯಬಹುದು. ಇದಕ್ಕೆ ಯಾವುದೇ ಉಪಕರಣಗಳು ಬೇಕಿಲ್ಲ. ಅಲ್ಲದೆ, ಎಲ್ಲಾ ವಯಸ್ಸಿವರು ಕೂಡ ಈ ನಡಿಗೆ ಮಾಡಬಹುದು. ಇದು ಸುರಕ್ಷಿತ ಅಭ್ಯಾಸವಾಗಿದ್ದು, ಆರೋಗ್ಯಕ್ಕೆ ಅಪಾಯಕ್ಕಿಂತ ಉಪಯೋಗವೇ ಜಾಸ್ತಿ ಎಂದು ತಜ್ಞರು ಹೇಳುತ್ತಾರೆ.

ಇನ್ನು ಮುಖ್ಯವಾಗಿ ಊಟದ ನಂತರ ಈ ಸರಳ ನಡಿಗೆಯಿಂದ ಅನೇಕ ಆರೋಗ್ಯ ಪ್ರಯೋಜನೆಗಳಿವೆ. ಹೀಗಾಗಿ, ಇಂದಿನಿಂದಲೇ ಊಟದ ಬಳಿಕ 5 ನಿಮಿಷದ ನಡೆಗೆ ಮಾಡೋಣ. ಇದರಿಂದ ಪ್ರಯೋಜನೆ ತಿಳಿಯೋಣ.

ಸ್ಪೋರ್ಟ್ಸ್​ ಮೆಡಿಸನ್​ನಲ್ಲಿ ಪ್ರಕಟವಾದ ವರದಿ ಪ್ರಕಾರ, ಊಟದ ನಂತರ 5 ನಿಮಿಷ ನಡೆಯುವ ನಡಿಗೆಯೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವುದ ಜತೆ ಅನೇಕ ಆರೋಗ್ಯ ಪ್ರಯೋಜನೆಗಳನ್ನು ಪಡೆಯಲಿದ್ದಾರೆ ಎಂದು ವರದಿಯ ಬಹಿರಂಗಪಡಿಸಿದೆ.

1. ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ಊಟದ ನಂತರ ಲಘುವಾಗಿ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ, ಊಟ ಮುಗಿದ ತಕ್ಷಣ ನಡಿಗೆ ಪ್ರಾರಂಭಿಸಿದಾಗ, ಇನ್ಸುಲಿನ್​ ಮಟ್ಟವು ಹೆಚ್ಚು ಸ್ಥಿರವಾಗಿರುತ್ತದೆ ಎಂದು ಅಧ್ಯಯನ ಹೇಳುತ್ತದೆ. ಏಕೆಂದರೆ, ರಕ್ತದಲ್ಲಿನ ಸಕ್ಕರೆ ಸಾಮಾನ್ಯವಾಗಿ ಊಟದ ನಂತರ 60 ರಿಂದ 90 ನಿಮಿಷಗಳ ನಡುವೆ ಹೆಚ್ಚಾಗುತ್ತದೆ.

2.ಉತ್ತಮ ಜೀರ್ಣಕ್ರಿಯೆ

ಲಘು ನಡೆಗೆಯು ಹೊಟ್ಟೆ ಮತ್ತು ಕರಳನ್ನು ಉತ್ತೇಜಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೂಲಕ ಆಹಾರದ ವೇಗದ ಚಲನೆಯನ್ನು ಸುಗಮಗೊಳಿಸುತ್ತದೆ.

3.ರಕ್ತದೊತ್ತಡ ನಿರ್ವಹಣೆ

ಪ್ರತಿದಿನ 10 ನಿಮಿಷಗಳ ನಡಿಗೆಗಳು ಪೂರ್ವ-ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಲ್ಲಿ ಡಯಾಸ್ಟೊಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ತೀವ್ರ ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ರಕ್ತದೊತ್ತಡದಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತದೆ ಎಂದು ಅಧ್ಯಯನವು ದೃಢಪಡಿಸಿದೆ.

4.ತೂಕ ಇಳಿಕೆಗೆ ಸಹಾಯ

ಊಟದ ನಂತರ 5 ನಿಮಿಷದ ನಡಿಗೆಯೂ ತೂಕ ಇಳಿಸಲು ಸಹಕಾರಿಯಾಗಲಿದೆ ಎಂದು ಅಧ್ಯಯನ ಹೇಳುತ್ತದೆ. ನಡಿಗೆಯಿಂದ ದೇಹದಲ್ಲಿನ ಕ್ಯಾಲೋರಿ ಕರಗಿಸಿ ತೂಕ ಇಳಿಸುತ್ತದೆ. ನಡೆಗೆಯನ್ನು ದಿನಾ ಮುಂದುವರೆಸಿದೆರೆ ಮಾತ್ರ ಇದು ಸಾಧ್ಯ ಎಂದು ಸಂಶೋಧಕರ ಅಭಿಪ್ರಾಯ.

5.ಒತ್ತಡ ಕಡಿಮೆ

ನೀವು ಒತ್ತಡವನ್ನು ಎದುರಿಸುತ್ತಿದ್ದರೆ ದಿನಾ 5 ನಿಮಿಷದ ನಡಿಗೆಯೂ ನಿಮ್ಮ ಒತ್ತಡ ನಿವಾರಿಸುವಲ್ಲಿ ಸಹಕಾರಿಯಾಗಲಿದೆ ಎಂದು ಸಂಶೋಧನೆ ಹೇಳುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net