

ದಿನವಿಡೀ ದಣಿದಿದ್ದರೂ ರಾತ್ರಿ ನಿದ್ರೆ ಮಾಡಲು ಸಾಕಷ್ಟು ಹರಸಾಹಸ ಪಡುವವರು ಅನೇಕರಿದ್ದಾರೆ. ಜೀವನದಲ್ಲಿ ಹೆಚ್ಚುತ್ತಿರುವ ಒತ್ತಡವು ನಮ್ಮ ನಿದ್ರೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೂ ಭಾರಿ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯು ದುರ್ಬಲ ರೋಗನಿರೋಧಕ ಶಕ್ತಿ, ಅಧಿಕ ರಕ್ತದೊತ್ತಡ, ಕಿರಿಕಿರಿ, ಆಯಾಸ ಮತ್ತು ಮೂಡ್ ಸ್ವಿಂಗ್‌ಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಸಾಕಷ್ಟು ನಿದ್ರೆ ಪಡೆಯುವುದು ಮುಖ್ಯ. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಆಹಾರ ಕ್ರಮದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದರಿಂದ ಉತ್ತಮ ನಿದ್ರೆಗೆ ಪ್ರಯೋಜನಕಾರಿಯಾಗಲಿದೆ. ಉತ್ತಮ ನಿದ್ರೆ ಪಡೆಯಲು ಯಾವ ಹಣ್ಣುಗಳು ಸಹಾಯ ಮಾಡುತ್ತವೆ ಎಂಬುದರ ವಿವರ ಇಲ್ಲಿದೆ