​ಹಾಲು, ಪಾಲಕ್ ಸೊಪ್ಪು, ರಿಫೈನ್ಡ್​​ ಎಣ್ಣೆ ಬಿಟ್ಟುಬಿಡಿ; ಇಂದಿನಿಂದ ನಿಮ್ಮ ಆಹಾರದ ಲಿಸ್ಟ್​ನಲ್ಲಿ ಈ 6 ಪದಾರ್ಥಗಳಿರಲಿ...Healthy Food

Healthy food swaps
Healthy food swaps
Published on

ಪ್ರಮುಖ ಮುಖ್ಯಾಂಶಗಳು

  • ಪಾಲಾಕ್​, ಹಾಲು ಬಿಟ್ಟು ರಾಗಿ ಹಿಟ್ಟು, ನುಗ್ಗೆ ಸೊಪ್ಪು, ಗಾಣದ ಎಣ್ಣೆ, ಸಿರಿಧಾನ್ಯ ಬಳಕೆಗೆ ಸಲಹೆ
  • ​ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ 6 ಆಹಾರ ತಿನ್ಜಿ
  • ​ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಈ ಹೊಸ ಆಹಾರ ಕ್ರಮಗಳು ರೂಢಿಸಿಕೊಳ್ಳಿ
ದೇಹದ ಆರೋಗ್ಯಕ್ಕಾಗಿ ಹಾಲು, ಪಾಲಾಕ್​ ಸೊಪ್ಪು, ಪ್ಯಾಕ್​ ಮಾಡಿದ ಹಣ್ಣಿನ ರಸವನ್ನು ಸೇವಿಸುತ್ತೇವೆ. ಆದರೆ ಇವುಗಳನೊಮ್ಮೆ ಬಿಟ್ಟು ಆರು ಪೌಷ್ಠಿಕಾಂಶವುಳ್ಳ ಆಹಾರ ಕ್ರಮವನ್ನು ಮೈಗೂಡಿಸಿಕೊಂಡರೆ ದೇಹದ ಆರೋಗ್ಯಕ್ಕೆ ಸಾಕಷ್ಟು ಫಲಕಾರಿ ಎಂದು ಹೇಳುತ್ತಾರೆ ಪೌಷ್ಟಿಕತಜ್ಞರು
ಹಾಗಾದರೆ ದೈನಂದಿನ ಬದುಕಿನಲ್ಲಿ ದಿನವೂ ತಿನ್ನುವ ಯಾವ ಆಹಾರಕ್ಕೆ ಬ್ರೇಕ್​ ಹಾಕಿ, ಮತ್ಯಾವ ಆಹಾರವನ್ನು ರೂಢಿಸಿಕೊಳ್ಳಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ


ಹಾಲಿನ ಬದಲಿಗೆ ರಾಗಿ ಬಳಸಿ

ಕ್ಯಾಲ್ಶಿಯಂ ಅಂಶ ದೇಹಕ್ಕೆ ಬೇಕು ಎಂದ ಕೂಡಲೇ ನಮಗೆ ನೆನಪಾಗೋದು ಹಾಲು. ಆದರೆ, ಹಾಲುಗಿಂತ ಹೆಚ್ಚು ಕ್ಯಾಲ್ಶಿಯಂ ಅಂಶವನ್ನು ರಾಗಿ ಹೊಂದಿದೆ. ಇದರಲ್ಲಿ ಅಮೈನೋ ಆಮ್ಲಗಳು ಮತ್ತು ನಾರಿನಂಶ ಸಮೃದ್ಧವಾಗಿದೆ. ರಾಗಿಯು ಜೀರ್ಣಕ್ರಿಯೆಯ ಸಮಸ್ಯೆಯಿಂದ ಬಳಲುವವರಿಗೆ ಉತ್ತಮ ಆಹಾರ.

ಪಾಲಕ್ ಸೊಪ್ಪಿನ ಬದಲಿಗೆ ನುಗ್ಗೆ ಸೊಪ್ಪು ಬಳಸಿ

ಕಬ್ಬಿಣಾಂಶ ಮತ್ತು ರಕ್ತ ಹೀನತೆ ನಿವಾರಣೆಗೆ ಪಾಲಕ್ ಸೊಪ್ಪಿನ ಬದಲಿಗೆ ನುಗ್ಗೆ ಸೊಪ್ಪಿನ ಖಾದ್ಯ ತಯಾರಿಸಿಕೊಂಡು ತಿನ್ನಿ. ಪಾಲಕ್ ಸೊಪ್ಪಿನಲ್ಲಿರುವ 'ಆಕ್ಸಲೇಟ್ಸ್' ಕಬ್ಬಿಣಾಂಶವನ್ನು ಹೀರಿಕೊಳ್ಳದಂತೆ ತಡೆಯುತ್ತದೆ. ಆದರೆ ನುಗ್ಗೆ ಸೊಪ್ಪು ದೇಹಕ್ಕೆ ಐರನ್, ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ ನೀಡುತ್ತದೆ.

​ ಬಿಳಿ ಅಕ್ಕಿ ಬದಲಿಗೆ ಕಂದು ಅಕ್ಕಿ ಅಥವಾ ಸಿರಿಧಾನ್ಯ ಬಳಸಿ

​ದಿನನಿತ್ಯ ಬಿಳಿ ಅಕ್ಕಿಯ ಅನ್ನ ತಿನ್ನುವುದರಿಂದ ದೇಹಕ್ಕೆ ಕೇವಲ ಕಾರ್ಬೋಹೈಡ್ರೇಟ್ಸ್ ಸಿಗುತ್ತದೆ ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬೇಗನೆ ಹೆಚ್ಚಿಸುತ್ತದೆ. ಇದರ ಬದಲಾಗಿ ಕಂದು ಅಕ್ಕಿ ಅಥವಾ ಕೆಂಪು ಅಕ್ಕಿ ಅಥವಾ ನವಣೆ, ಸಾಮೆಗಳಂತಹ ಸಿರಿಧಾನ್ಯಗಳನ್ನು ಬಳಸುವುದರಿಂದ ದೇಹಕ್ಕೆ ಹೆಚ್ಚಿನ ನಾರಿನಂಶ ಸಿಗುತ್ತದೆ. ಜೊತಗೆ ತೂಕ ನಿಯಂತ್ರಣಕ್ಕೆ ಸಹಕಾರಿ

ಗಾಣದ ಎಣ್ಣೆ ಬಳಸಿ

ರಿಫೈನ್ಡ್ ಎಣ್ಣೆಯಲ್ಲಿ ಕೆಮಿಕಲ್​ ಇರುತ್ತದೆ. ಹೀಗಾಗಿ ಇವು ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳುತ್ತವೆ. ಗಾಣದ ಎಣ್ಣೆಯಾದ ಕಡಲೇಕಾಯಿ, ತೆಂಗಿನ ಎಣ್ಣೆ ಬಳಕೆ ಮಾಡಿದರೆ ಹೃದಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು

ಬೆಲ್ಲ ಅಥವಾ ಜೇನುತುಪ್ಪ ಬೆಸ್ಟ್​

ಸಕ್ಕರೆ ಬದಲಿಗೆ ಬೆಲ್ಲ ಅಥವಾ ಜೇನುತುಪ್ಪ ಬಳಕೆ ಮಾಡುವುದರಿಂದ ದೇಹಕ್ಕೆ ಆಂಟಿಆಕ್ಸಿಡೆಂಟ್‌ಗಳು ಮತ್ತು ಕಬ್ಬಿಣಾಂಶ ಹಾಗೂ ರೋಗನಿರೋಧಕ ಶಕ್ತಿ ಸಮೃದ್ಧವಾಗಿ ಸಿಗುತ್ತದೆ ಎನ್ನಲಾಗಿದೆ

ಪ್ಯಾಕ್ ಮಾಡಿದ ಜ್ಯೂಸ್ ಬದಲಿಗೆ ಹಣ್ಣು ತಿನ್ನಿ

ಕಚ್ಚಾ ಹಣ್ಣನ್ನು ತಿನ್ನುವುದರಿಂದ ಸಕ್ಕರೆ ಕಾಯಿಲೆಯಂತಹ ಸಮಸ್ಯೆಯನ್ನು ತಡೆಯಬಹುದು. ಪ್ಯಾಕ್ಡ್​ ಜ್ಯೂಸ್​ಗಳಲ್ಲಿ ನಾರಿನಂಶ ಇರುವುದಿಲ್ಲ. ಅತಿಯಾದ ಸಕ್ಕರೆ ಮಧುಮೇಹಕ್ಕೆ ಕಾರಣವಾಗುತ್ತದೆ, (ಏಜೆನ್ಸೀಸ್).
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net