ರಾತ್ರಿ ನಿದ್ದೆ ಬರ್ತಿಲ್ವಾ, ಥಟ್​ ಅಂತ ಎಚ್ಚರ ಆಗ್ತಿದ್ಯಾ?; ಸುಖಕರ ನಿದ್ರೆಗೆ ಹಾಸಿಗೆ ಪಕ್ಕದಲ್ಲಿರಲಿ ಈ ವಸ್ತುಗಳು..Night-time Tray

Night-time Tray, AI Image
Night-time Tray, AI Image
Published on

ಪ್ರಮುಖ ಮುಖ್ಯಾಂಶಗಳು

  • ಹಾಸಿಗೆ ಮೇಲೆ ಎಷ್ಟೇ ಹೊರಳಾಡಿದ್ರು ನಿದ್ದೆ ಬರ್ತಿಲ್ಲ, ಥಟ್ ಅಂತ ಎಚ್ಚರವಾಗುತ್ತಿದ್ದರೆ ಹೀಗೆ ಮಾಡಿ
  • ಮಲಗುವ ಮುನ್ನ ನಿತ್ಯ ಹಾಸಿಗೆ ಪಕ್ಕ ನಾಲ್ಕು ವಸ್ತುಗಳನ್ನು ಇಟ್ಟುಕೊಳ್ಳೋದು ಮರೆಯಬೇಡಿ
  • ನೀರು, ತುಪ್ಪ, ಕಲ್ಲು ಸಕ್ಕರೆ, ರವೆ ಉಂಡೆ ನಿತ್ಯವೂ ನೀವು ಮಲಗುವಾಗ ನಿಮ್ಮ ಪಕ್ಕ ಇರಲಿ
Night-time Tray: ಕೆಲವೊಮ್ಮೆ ಮಧ್ಯರಾತ್ರಿ ಥಟ್​ ಎಂದು ಎಚ್ಚರವಾಗುತ್ತದೆ. ಹಸಿವಾಗುತ್ತದೆ. ದಾಹವಾಗುತ್ತಿದೆ ಎನ್ನುವಂತೆ ಭಾಸವಾಗುತ್ತದೆ. ಹಾಸಿಗೆಗೆ ಮಲಗಿ ಒಂದು ಗಂಟೆ ಕಣ್ಣು ಮುಚ್ಚಿದರೂ ನಿದ್ದೆ ಬರೋದಿಲ್ಲ. ಇದು ಯುವ ಜನತೆಯ ಸಾಮಾನ್ಯ ಸಮಸ್ಯೆ. ಇಂತಹ ಸಮಯದಲ್ಲಿ ಮೊಬೈಲ್​ ಬಳಕೆ ಮಾಡಿ ಮುಂಜಾನೆ ಐದರ ತನಕ ಎದ್ದೇ ಇರುತ್ತೇವೆ. ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಖ್ಯಾತ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಅವರ ಕೆಲವು ಸಲಹೆಯನ್ನು ಫಾಲೋ ಮಾಡಿ..
ಮಧ್ಯರಾತ್ರಿ ಎರಡು ಅಥವಾ ಮೂರು ಗಂಟೆಗೆ ಎಚ್ಚರವಾಗುವುದು ಮರುಕಳಿಸುತ್ತಿದ್ದರೆ, Night-time Tray ಫಾಲೋ ಮಾಡಿ ಎಂದಿದ್ದಾರೆ. ಹಿಂಗಂದ್ರೆ ಮಲಗುವ ಮುನ್ನ ನಿಮ್ಮ ಹಾಸಿಗೆಯ ಪಕ್ಕದಲ್ಲಿ ಟ್ರೇನಲ್ಲಿ ನಾಲ್ಕು ಪ್ರಮುಖ ಆಹಾರ ವಸ್ತುಗಳನ್ನು ಇಟ್ಟುಕೊಳ್ಳಬೇಕು. ಇವು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಆ ನಾಲ್ಕು ಪದಾರ್ಥ ಯಾವುದು ಅದ್ರಿಂದಾಗುವ ಪ್ರಯೋಜನ ಏನು ಅನ್ನೋದು ಈ ಲೇಖನದಲ್ಲಿ ವಿವರಿಸಲಾಗಿದೆ.

ನಾಲ್ಕು ಪದಾರ್ಥ ಯಾವುದು?

ನೀರಿನ ಗ್ಲಾಸ್​ ಅಥವಾ ಬಾಟಲ್ ಕಡ್ಡಾಯವಾಗಿರಲಿ
ನಿದ್ರೆಯ ಮಧ್ಯೆ ನಿತ್ಯ ಎಚ್ಚರಿಕೆಯಾಗುತ್ತಿದ್ದರೆ, ಕೂಡಲೇ ನಿಮ್ಮ ಪಕ್ಕದಲ್ಲೇ ಇರುವ ಬಾಟಲ್​ ಅನ್ನು ತೆಗೆದುಕೊಂಡು ಒಂದು ಸಿಪ್​ ನೀರು ಕುಡಿಯಿರಿ, ಇದು ಮತ್ತೆ ಬೇಗನೆ ನಿದ್ರೆ ಬರುವಂತೆ ಮಾಡುತ್ತದೆ. ಕಾಲು ಸ್ನಾಯು ಸೆಳೆತ ಇದ್ದವರು ರಾತ್ರಿ ಸಮಯದಲ್ಲಿ ನಿಮ್ಮ ದೇಹವನ್ನು ಹೈಡ್ರೇಟ್​ ಆಗಿ ಇಟ್ಟುಕೊಳ್ಳೋದು ಮುಖ್ಯ ಎಂದು ಹೇಳಲಾಗಿದೆ.

ಪಾದಕ್ಕೆ ತುಪ್ಪ ಹಚ್ಚಿ, ಹಾಸಿಗೆ ಪಕ್ಕದಲ್ಲೂ ತುಪ್ಪವಿರಲಿ

ನೀವು ನಿತ್ಯ ಮಲಗುವ ಮುನ್ನ ಪಾದದ ಹಿಮ್ಮಡಿ ಭಾಗಗಕ್ಕೆ ನಿತ್ಯ ತುಪ್ಪ ಹಚ್ಚಿ ಮಸಾಜ್ ಮಾಡಿ ಹೀಗೆ ಮಾಡೋದ್ರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಅಲ್ಲದೇ, ಕಿವಿ ಮತ್ತು ಮೂಗಿನ ಬಳಿಯು ತುಪ್ಪ ಹಚ್ಚೋದ್ರಿಂದ ಮೂಗು ಕಟ್ಟೋದು ಸೀನೋ ಸಮಸ್ಯೆ ಬರೋದಿಲ್ಲ ಎನ್ನುತ್ತಾರೆ ರುಜುತಾ ದಿವೇಕರ್.

ಕಲ್ಲು ಸಕ್ಕರೆಯಿದ್ದರೆ ಏನು ಪ್ರಯೋಜನ

ಒಣ ಕೆಮ್ಮು ಅಥವಾ ಗಂಟಲಿನಲ್ಲಿ ಕಿಚ್ ಕಿಚ್​ನಿಂದಾಗಿ ರಾತ್ರಿ ನಿದ್ದೆ ಮಾಡಲು ಸಮಸ್ಯೆಯಾಗುತ್ತಿದ್ದರೆ, ಬಾಯಿಯ ಒಂದು ಬದಿ ಸಣ್ಣ ಕಲ್ಲು ಸಕ್ಕರೆ ತುಂಡನ್ನು ಇಟ್ಟುಕೊಳ್ಳಿ. ಇದು ಗಂಟಲನ್ನು ತೇವವಾಗಿ ಇರಿಸಲು ಸಹಾಯ ಮಾಡುತ್ತದೆ. ಸುಲಭವಾಗಿ ನಿದ್ರಿಸಲು ಇದು ಸಹಾಯ ಮಾಡುತ್ತದೆ.

ರವೆಯುಂಡೆ ಪಕ್ಕದಲ್ಲಿರಲಿ

ರಾತ್ರಿ ನಿದ್ರೆ ಬಾರದೆ ಹಸಿವಿನ ಅನುಭವವಾದರೆ ಅಥವಾ ಸುಸ್ತಾದಂತಿದ್ದರೆ ಲಘುವಾದ ಮತ್ತು ಪೌಷ್ಟಿಕವಾದ ರಾಜಗಿರಿ ಲಾಡು ಅಂದರೆ ರವೆ ಉಂಡೆಯನ್ನು ತಿನ್ನಬಹುದು. ಇದರಲ್ಲಿರುವ ಸಿಹಿ ಮತ್ತು ರವೆಯ ಅಂಶ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಮನಸ್ಸನ್ನು ಶಾಂತಗೊಳಿಸಿ ನಿದ್ರೆ ಬರುವಂತೆ ಮಾಡುತ್ತದೆ, (ಏಜೆನ್ಸೀಸ್​)
ಈ ಮೇಲಿನ ಮಾಹಿತಿಯನ್ನು ರುಜುತಾ ದಿವೇಕರ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​​​ ಆಧಾರದ ಮೇಲೆ ಬರೆಯಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net