ಚಿನ್ನದ ಬೆಲೆಯ ಮಾವಿನ ಹಣ್ಣು! ಒಂದು ಕೆಜಿಗೆ ಲಕ್ಷಾಂತರ ರೂಪಾಯಿ; ಏನಿದರ ವಿಶೇಷತೆ? Most Expensive Mango

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿ ಸೀಸನ್​ನಲ್ಲೂ ಒಂದಲ್ಲಾ ಒಂದು ಹಣ್ಣು ಮಾರಾಟವಾಗುವಲ್ಲಿ ಮುಂಚೂಣಿಯಲ್ಲಿರುತ್ತವೆ
  • ಅದರಲ್ಲೂ ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ
  • ನಾವು ಪ್ರತಿ ಕೆಜಿಗೆ 100 ರಿಂದ 400 ರೂವರೆಗೆ ಹಣ್ಣನ್ನು ಮಾರಾಟ ಮಾಡುವುದನ್ನು ನೋಡಿರುತ್ತೇವೆ
  • ಆದರೆ, ನೀವು ಎಂದಾದರೂ ಲಕ್ಷ ಬೆಲೆಗೆ ಮಾವಿನ ಹಣ್ಣು ಮಾರಾಟವಾಗುದನ್ನು ನೋಡಿದ್ದೀರಾ?
Most Expensive Mango: ಪ್ರತಿ ಸೀಸನ್​ನಲ್ಲೂ ಒಂದಲ್ಲಾ ಒಂದು ಹಣ್ಣು ಮಾರಾಟವಾಗುವಲ್ಲಿ ಮುಂಚೂಣಿಯಲ್ಲಿರುತ್ತವೆ. ಅದರಲ್ಲೂ ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಆದಾಗ್ಯೂ, ನಾವು ಪ್ರತಿ ಕೆಜಿಗೆ 100 ರಿಂದ 400 ರೂವರೆಗೆ ಹಣ್ಣನ್ನು ಮಾರಾಟ ಮಾಡುವುದನ್ನು ನೋಡಿರುತ್ತೇವೆ. ಆದರೆ, ನೀವು ಎಂದಾದರೂ ಲಕ್ಷ ಬೆಲೆಗೆ ಮಾವಿನ ಹಣ್ಣು ಮಾರಾಟವಾಗುದನ್ನು ನೋಡಿದ್ದೀರಾ?
ಮಿಯಾಝಾಕಿ ಮಾವು ತನ್ನ ಸೌಂದರ್ಯ, ವಿಭಿನ್ನ ರುಚಿ ಮತ್ತು ಹೆಚ್ಚಿನ ಬೆಲೆಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಲಕ್ಷಗಳಿಗೆ ಮಾರಾಟವಾಗುತ್ತದೆ. ಹಾಗಿದ್ದರೆ, ಅವುಗಳು ಏಕೆ ಇಷ್ಟೊಂದು ದುಬಾರಿಯಾಗಿದೆ ಎಂದು ನೋಡೋಣ ಬನ್ನಿ...
ಮಿಯಾಝಾಕಿ ಮಾವಿನ ಹಣ್ಣುಗಳನ್ನು ಮುಖ್ಯವಾಗಿ ಜಪಾನ್‌ನ ಮಿಯಾಝಾಕಿಯಲ್ಲಿ ಬೆಳೆಯಲಾಗುತ್ತದೆ. ಈ ಮಾವನ್ನು ಜಪಾನಿ ಭಾಷೆಯಲ್ಲಿ 'ತೈಯೊ ನೊ ಟೊಮೊಗೊ' ಎಂದು ಕರೆಯುತ್ತಾರೆ. ಇದರ ಅರ್ಥ 'ಸೂರ್ಯನ ಮೊಟ್ಟೆ'. ಇದರ ಗಾಢ ಕೆಂಪು ಬಣ್ಣ ಮತ್ತು ಮೊಟ್ಟೆಯಂತಹ ಆಕಾರದಿಂದಾಗಿ ಈ ಹೆಸರು ಬಂದಿದೆ.
ಇದರ ಕೃಷಿ ಪ್ರಕ್ರಿಯೆ ತುಂಬಾ ಕಷ್ಟಕರವಾಗಿದೆ. ಪ್ರತಿಯೊಂದು ಮಾವಿನ ಹಣ್ಣನ್ನು ಗಿಡದ ಮೇಲೆ ಒಂದು ಸಣ್ಣ ಬಲೆಯಲ್ಲಿ ಕಟ್ಟಿಡಲಾಗುತ್ತದೆ. ಹಣ್ಣು ಪೂರ್ತಿ ಹಣ್ಣಾದಾಗ ಅದು ಕೆಳಗೆ ಬಿದ್ದು ನೆಲಕ್ಕೆ ತಾಗಿ ಪೆಟ್ಟಾಗಬಾರದು ಎಂಬುದು ಇದರ ಉದ್ದೇಶ. ಬಲೆಯಲ್ಲಿ ಬಿದ್ದ ಹಣ್ಣನ್ನು ಮಾತ್ರ 'ಪೂರ್ಣವಾಗಿ ಹಣ್ಣಾದ ಹಣ್ಣು' ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಹಣ್ಣಿನ ಎಲ್ಲಾ ಭಾಗಗಳಿಗೂ ಸಮಾನವಾಗಿ ಸೂರ್ಯನ ಬೆಳಕು ಬೀಳಲು ರೈತರು ಹಣ್ಣುಗಳನ್ನು ಆಗಾಗ ತಿರುಗಿಸುತ್ತಾರೆ. ಇದರಿಂದ ಹಣ್ಣಿಗೆ ಏಕರೂಪದ ಕೆಂಪು ಬಣ್ಣ ಬರುತ್ತದೆ.
ಮಿಯಾಝಾಕಿ ಮಾವಿನಹಣ್ಣಿನ ಬಗ್ಗೆ ಹೇಳುವುದಾದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 2.5 ಲಕ್ಷದಿಂದ 3 ಲಕ್ಷ ರೂ.ಗಳವರೆಗೆ ಬೆಲೆ ಬಾಳುತ್ತದೆ. ಈ ಮೊತ್ತಕ್ಕೆ ಭಾರತದಂತಹ ರಾಷ್ಟ್ರದಲ್ಲಿ ಉತ್ತಮ ಸೆಕೆಂಡ್​ ಹ್ಯಾಂಡ್​ ಕಾರು ಅಥವಾ ಹೊಸ ಬೈಕನ್ನು ಕೂಡಾ ಸುಲಭವಾಗಿ ಖರೀದಿಸಬಹುದು.
ಈ ಮಾವಿನ ಹಣ್ಣಿನ ಬೆಲೆ ಹೆಚ್ಚಾಗಲು ಮುಖ್ಯ ಕಾರಣ ಅದರ ಸೀಮಿತ ಉತ್ಪಾದನೆ ಮತ್ತು ಗುಣಮಟ್ಟದ ಪರಿಶೀಲನೆಗಳು. ಇದು ಕನಿಷ್ಠ 350 ಗ್ರಾಂ ತೂಕವಿದ್ದು, ಶೇ. 15 ಕ್ಕಿಂತ ಹೆಚ್ಚು ಸಕ್ಕರೆ ಅಂಶ ಹೊಂದಿರುವ ಮಾವಿನ ಹಣ್ಣನ್ನು ಮಾತ್ರ ಮಿಯಾಝಾಕಿ ಎಂದು ಕರೆಯಲಾಗುತ್ತದೆ. ಯಾರಾದರೂ ಈ ಹಣ್ಣನ್ನು ಸೇವಿಸಿದರೆ ಇಲ್ಲಿ ಸಿಗುವ ಮಾವಿಗಿಂತ ಇದು ವಿಭಿನ್ನ ರುಚಿಯನ್ನು ಹೊಂದಿದೆ ಎಂದು ಹೇಳುತ್ತಾರೆ.
ಈ ಹಣ್ಣನ್ನು ಕೋಣೆಯಲ್ಲಿಟ್ಟರೆ, ಅದರ ವಿಶಿಷ್ಟವಾದ ಸುವಾಸನೆಯು ಇಡೀ ಮನೆಯನ್ನು ತುಂಬಿಕೊಳ್ಳುತ್ತದೆ. ಇದರ ಸುಗಂಧವು ಕೇವಲ ಮಾವಿನ ವಾಸನೆಯಲ್ಲದೆ, ಪೀಚ್ ಮತ್ತು ಅನಾನಸ್ ಮಿಶ್ರಿತ ಹಿತವಾದ ಸುವಾಸನೆಯನ್ನು ಹೊಂದಿರುತ್ತದೆ. ಇದರ ಸಿಪ್ಪೆಯು ತೆಳ್ಳಗಿರುವುದರಿಂದ ತಿರುಳಿನಿಂದ ಅದನ್ನು ಬೇರ್ಪಡಿಸುವುದು ತುಂಬಾ ಸುಲಭ.
ಭದ್ರತೆಗಾಗಿ ಕಾವಲುಗಾರರನ್ನು ನಿಯೋಜಿಸಲಾಗಿದೆ.
ಒಂದು ಮಾವಿನ ಹಣ್ಣು ಲಕ್ಷಾಂತರ ರೂಗಳಿಗೆ ಬೆಲೆಬಾಳುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಅವುಗಳನ್ನು ವಿಐಪಿಗಳಂತೆ ರಕ್ಷಿಸಲಾಗುತ್ತದೆ. ಈ ಹಣ್ಣುಗಳನ್ನು ಭಾರತದ ಜಬಲ್ಪುರದಲ್ಲಿಯೂ ಬೆಳೆಯಲಾಗುತ್ತದೆ ಮತ್ತು ರೈತ ತನ್ನ ತೋಟದಲ್ಲಿರುವ ಮರಗಳನ್ನು ರಕ್ಷಿಸಲು ಕಾವಲುಗಾರರು ಮತ್ತು ನಾಯಿಗಳನ್ನು ನೇಮಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net