ರಂಜಾನ್​ ಉಪವಾಸ ಮುರಿಯಲು ಖರ್ಜೂರವೇ ಬೆಸ್ಟ್ ಯಾಕೆ? ಇಲ್ಲಿದೆ ನೋಡಿ ಇದರ ಹಿಂದಿನ ವೈಜ್ಞಾನಿಕ ರಹಸ್ಯ! Dates Benefits

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮುಸ್ಲಿಂ ಅವರ ಪವಿತ್ರ ಹಬ್ಬ ರಂಜಾನ್​ ಫೆಬ್ರವರಿ 19 ರಿಂದ ಆರಂಭವಾಗಿದೆ
  • ಈ ಹಬ್ಬದ ಆಚರಣೆಯ ಸಂದರ್ಭದಲ್ಲಿ ಬಹುತೇಕ ಜನರು ದಿನವಿಡೀ ಉಪವಾಸ ಮಾಡುತ್ತಾರೆ
  • ಸೂರ್ಯಾಸ್ತದ ನಂತರ ಏನನ್ನಾದರೂ ತಿನ್ನುವುದು ಅವರ ಆಚರಣೆಯ ಒಂದು ಭಾಗವಾಗಿರುತ್ತದೆ
  • ಉಪವಾಸ ಮುಗಿಯುವ ಸಮಯದಲ್ಲಿ ಜನರು ಏಕೆ ಖರ್ಜೂರ ತಿನ್ನುತ್ತಾರೆ? ಎಂಬುದು ಹಲವಾರು ಜನರಿಗೆ ಕಾಡುವ ಪ್ರಶ್ನೆ
Dates Benefits: ಮುಸ್ಲಿಂ ಅವರ ಪವಿತ್ರ ಹಬ್ಬ ರಂಜಾನ್​ ಫೆಬ್ರವರಿ 19 ರಿಂದ ಆರಂಭವಾಗಿದೆ. ಈ ಹಬ್ಬದ ಆಚರಣೆಯ ಸಂದರ್ಭದಲ್ಲಿ ಬಹುತೇಕ ಜನರು ದಿನವಿಡೀ ಉಪವಾಸ ಮಾಡಿ, ಸೂರ್ಯಾಸ್ತದ ನಂತರ ಏನನ್ನಾದರೂ ತಿನ್ನುವುದು ಅವರ ಆಚರಣೆಯ ಒಂದು ಭಾಗವಾಗಿರುತ್ತದೆ. ಶತಮಾನಗಳಿಂದ, ವಿವಿಧ ದೇಶಗಳಲ್ಲಿ ರಂಜಾನ್ ಸಮಯದಲ್ಲಿ ಖರ್ಜೂರ ತಿನ್ನುವ ಪದ್ಧತಿ ಇದೆ.
ಆದರೆ, ಉಪವಾಸ ಮುಗಿಯುವ ಸಮಯದಲ್ಲಿ ಜನರು ಏಕೆ ಖರ್ಜೂರ ತಿನ್ನುತ್ತಾರೆ? ಎಂಬುದು ಹಲವಾರು ಜನರಿಗೆ ಕಾಡುವ ಪ್ರಶ್ನೆ. ಇದು ಕೇವಲ ಧಾರ್ಮಿಕ ನಂಬಿಕೆಯೇ ಅಥವಾ ಇದರಿಂದ ಆರೋಗ್ಯ ಪ್ರಯೋಜನಗಳು ಇವೆಯಾ ಎಂದು ನೋಡೋಣ ಬನ್ನಿ...
ಇಸ್ಲಾಂ ಧರ್ಮದ ಪ್ರವಾದಿ ಹಜರತ್ ಮುಹಮ್ಮದ್ ಅವರಿಗೆ ಖರ್ಜೂರ ಅತ್ಯಂತ ಪ್ರಿಯವಾದ ಹಣ್ಣಾಗಿತ್ತು. ಅವರು ಯಾವಾಗಲೂ ಉಪವಾಸವನ್ನು ಮುರಿಯುವಾಗ ಖರ್ಜೂರಗಳನ್ನು ತಿನ್ನುತ್ತಿದ್ದರು ಎಂದು ಉಲ್ಲೇಖಗಳಿವೆ. ಈ ಕಾರಣದಿಂದ ಮುಸ್ಲಿಂಮರು ಖರ್ಜೂರ ತಿನ್ನುವ ಮೂಲಕ ಉಪವಾಸವನ್ನು ಮುರಿಯುತ್ತಾರೆ.
ಮತ್ತೊಂದೆಡೆ, ದಿನವಿಡೀ ಉಪವಾಸ ಮಾಡಿದ ನಂತರ, ದೇಹವು ಶಕ್ತಿಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಈ ಸಮಯದಲ್ಲಿ ದೇಹಕ್ಕೆ ಶಕ್ತಿಯನ್ನು ಒದಗಿಸಿಕೊಳ್ಳಲು ಏನಾದರೂ ಬೇಕಾಗುತ್ತದೆ. ಅದಕ್ಕೆ ಈ ಹಣ್ಣು ಸೂಕ್ತವಾಗಿರುತ್ತದೆ. ಆದಾಗ್ಯೂ, ಖರ್ಜೂರ ಅನೇಕ ಗುಣಗಳನ್ನು ಹೊಂದಿದೆ. ಉಪವಾಸದ ಸಮಯದಲ್ಲಿ ಖರ್ಜೂರ ತಿನ್ನುವುದು ಏಕೆ ತುಂಬಾ ಪ್ರಯೋಜನಕಾರಿ ಎಂದು ತಿಳಿದುಕೊಳ್ಳಿ.

ಖರ್ಜೂರ ತಿನ್ನುವುದರಿಂದಾಗುವ ಪ್ರಯೋಜನಗಳು

ಖರ್ಜೂರ ಒಂದು ಜೀರ್ಣಕ್ರಿಯೆಯನ್ನು ಹೆಚ್ಚಿಸುವಂತಹ ಹಣ್ಣಾಗಿದೆ. ದಿನವಿಡೀ ಉಪವಾಸ ಮಾಡಿದ ನಂತರ ಸಂಜೆ ಇಫ್ತಾರ್‌ ಕೂಟದಲ್ಲಿ ಒಳ್ಳೆಯ ಮತ್ತು ಕೆಟ್ಟ ಆಹಾರವನ್ನು ತಿನ್ನುವ ಪ್ರವೃತ್ತಿ ಇದೆ. ಈ ಸಮಯದಲ್ಲಿ ಆದಷ್ಟು ಜನರು ಕರಿದ ಆಹಾರ ಮತ್ತು ಹಣ್ಣುಗಳನ್ನು ಸೇವಿಸುತ್ತಾರೆ. ಖರ್ಜೂರವು ಆ ಎಲ್ಲಾ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
ಉಪವಾಸದ ಸಮಯದಲ್ಲಿ ನೀರಿನಂಶ ಕಡಿಮೆಯಾಗಿ ಮಲಬದ್ಧತೆ ಉಂಟಾಗುವ ಸಾಧ್ಯತೆ ಇರುತ್ತದೆ. ಖರ್ಜೂರದಲ್ಲಿರುವ ಹೆಚ್ಚಿನ ನಾರಿನಂಶವು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಜೊತೆಗೆ ಫೈಬರ್ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ, ಇದರಿಂದ ಉಪವಾಸದ ನಂತರ ಅತಿಯಾಗಿ ಆಹಾರ ಸೇವಿಸುವುದನ್ನು ತಡೆಯಬಹುದು.
ಉಪವಾಸ ಎಂದರೆ ದಿನವಿಡೀ ಏನನ್ನೂ ಸೇವಿಸದೇ, ದೈನಂದಿನ ಕೆಲಸವನ್ನು ಮುಂದುವರೆಸಿಕೊಂಡು ಹೋಗಬೇಕು. ಅದಕ್ಕಾಗಿ ದೇಹಕ್ಕೆ ಉತ್ತಮ ಖನಿಜಾಂಶಗಳ ಅವಶ್ಯಕತೆ ಇರುತ್ತದೆ. ಖರ್ಜೂರವು ದೇಹವನ್ನು ಸಕ್ರಿಯವಾಗಿಟ್ಟುಕೊಳ್ಳಲು ಮೆಗ್ನೀಸಿಯಮ್, ಕಬ್ಬಿಣ ಮತ್ತು ಜೀವಸತ್ವಗಳನ್ನು ದೊರಕಿಸುತ್ತದೆ.
ನಮ್ಮ ದೇಹದ ರಕ್ತವು ಸ್ವಲ್ಪ ಮಟ್ಟಿಗೆ ಕ್ಷಾರೀಯವಾಗಿರಬೇಕು. ನಾವು ಸೇವಿಸುವ ಸಂಸ್ಕರಿಸಿದ ಆಹಾರಗಳು ರಕ್ತವನ್ನು ಆಮ್ಲೀಯವನ್ನಾಗಿ ಮಾಡುತ್ತವೆ. ಆದಾಗ್ಯೂ, ಖರ್ಜೂರದಲ್ಲಿರುವ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಕ್ಷಾರೀಯ ಲವಣಗಳು ದೇಹದ pH ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ.
ಖರ್ಜೂರವು ಉತ್ತಮ ಪ್ರಮಾಣದ ನೀರನ್ನು ಹೊಂದಿರುತ್ತದೆ. ಉಪವಾಸದ ನಂತರ ದೇಹವು ನೀರಿನ ಕೊರತೆಯನ್ನು ಅನುಭವಿಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಲು ಖರ್ಜೂರ ಸಹಾಯ ಮಾಡುತ್ತದೆ.
ಖರ್ಜೂರವು ದೇಹದಲ್ಲಿ ಹಿಮೋಗ್ಲೋಬಿನ್ (Hb) ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಅವು ನಿದ್ರೆಯ ಸಮಸ್ಯೆಗಳನ್ನು ನಿವಾರಿಸಲು ಸಹ ಸಹಾಯ ಮಾಡುತ್ತವೆ.

ಉಪವಾಸದ ನಂತರ ಖರ್ಜೂರವನ್ನು ಹೇಗೆ ತಿನ್ನಬೇಕು?

ಖರ್ಜೂರವನ್ನು ನೇರವಾಗಿ ತಿನ್ನಬಹುದು ಅಥವಾ ನೀರಿನಲ್ಲಿ ನೆನಸಿ, ಹಾಲಿಗೆ ಸೇರಿಸಿ ಅಥವಾ ಸ್ಮೂಥಿಗಳಲ್ಲಿ ಬೆರೆಸಿ ಕೂಡಾ ಸೇವಿಸಬಹುದಾಗಿದೆ. ಇದರ ಸೇವನೆಯು ದೀರ್ಘಕಾಲದ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net