ಓಟ್ಸ್​ ಅಥವಾ ರೈಸ್​ ಯಾವುದು ಬೆಸ್ಟ್​? ಡಯಟ್​ ಮಾಡುವವರ ಗೊಂದಲಕ್ಕೆ ಇಲ್ಲಿದೆ ನೋಡಿ ಉತ್ತರ | Oats

ಓಟ್ಸ್​ ಮತ್ತು ಅನ್ನ
ಓಟ್ಸ್​ ಮತ್ತು ಅನ್ನ
Published on

ಪ್ರಮುಖ ಮುಖ್ಯಾಂಶಗಳು

  • ಓಟ್ಸ್​ ಸೇವನೆ ದೇಹದಲ್ಲಿ ಸಕ್ಕರೆ ಅಂಶವನ್ನು ತಡೆಗಟ್ಟುತ್ತದೆಯೇ?
  • ವ್ಯಾಯಾಮಕ್ಕೂ ಮುನ್ನ ಓಟ್ಸ್​ ಸೇವನೆ ಹೆಚ್ಚು ಲಾಭಕಾರಿಯೇ?
  • ಅನ್ನ, ಓಟ್ಸ್​ ಇವರೆಡರಲ್ಲಿ ಯಾವುದು ಬೆಸ್ಟ್​ ಎಂಬ ಗೊಂದಲ, ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
Oats: ಗೋಧಿ ಆರೋಗ್ಯಕ್ಕೆ ಉತ್ತಮವೇ? ರಾಗಿ, ಹಾಲು ಸೇರಿದಂತೆ ಯಾವುದನ್ನು ಯಾವ ಸಮಯದಲ್ಲಿ ಸೇವಿಸಬೇಕು ಅಥವಾ ಬೇಡ ಎಂಬ ಗೊಂದಲಗಳು ಇಂದಿಗೂ ಅನೇಕರನ್ನು ಕಾಡುತ್ತಿವೆ. ಯಾವೆಲ್ಲ ಆಹಾರಗಳನ್ನು ತಿಂದರೆ ದೇಹಕ್ಕೆ ಏನೆಲ್ಲ ಪ್ರಯೋಜನಗಳು ಲಭಿಸುತ್ತದೆ? ಎಂಬುದರ ಸಾಕಷ್ಟು ಚರ್ಚೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. 
ಒಂದೆಡೆ ಕುಚಲಕ್ಕಿ, ಬಾಸ್ಮತಿ, ಸೋನಾ ಮಸೂರಿ ಯಾವ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು ಎಂಬ ಚಿಂತೆ. ಮತ್ತೊಂದೆಡೆ, ಅನ್ನ ತಿನ್ನಬಹುದಾ ಅಥವಾ ಓಟ್ಸ್​ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಾ ಎಂಬ ಸಾವಿರಾರು ಪ್ರಶ್ನೆ ಹಲವರಲ್ಲಿದೆ. ಸದ್ಯ ಇಂತಹ ಗೊಂದಲಗಳಿಗೆ ಕ್ಯಾಲಿಫೋರ್ನಿಯಾದಲ್ಲಿರುವ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪಳನಿಯಪ್ಪನ್ ಮಾಣಿಕ್ಕಮ್ ಸಲಹೆಗಳನ್ನು ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಆಗಾಗ್ಗೆ ಡಾ. ಪಳನಿಯಪ್ಪನ್ ಮಾಣಿಕ್ಕಮ್ ಹಲವು ಆರೋಗ್ಯ ಟಿಪ್ಸ್​​ಗಳನ್ನು ನೀಡುತ್ತಿರುತ್ತಾರೆ. ಇದರಲ್ಲಿ ಅಜೀರ್ಣ ಸಮಸ್ಯೆಗೆ ಅನ್ನ ಅಥವಾ ಓಟ್ಸ್​ ಯಾವುದು ತೊಂದರೆ? ವ್ಯಾಯಮದ ಮುನ್ನ ಓಟ್ಸ್ ತಿನ್ನಬಹುದೇ ಎಂಬುದರ ಕುರಿತಾಗಿ ಕೇಳಲಾದ ಒಂದಷ್ಟು ಪ್ರಶ್ನೆಗಳಿಗೆ ಅವರು ಕೊಟ್ಟಿರುವ ಉತ್ತರಗಳು ಹೀಗಿವೆ.

ತೂಕ ಇಳಿಸುವಲ್ಲಿ ಓಟ್ಸ್​ ಎಷ್ಟು ಪರಿಣಾಮಕಾರಿ?

ಅವೆನಾ ಸಟಿವಾ ಎಂಬ ಬೀಜದಿಂದ ತಯಾರಿಸಲ್ಪಡುವ ಓಟ್ಸ್, ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ದೇಹಕ್ಕೆ ಅಗತ್ಯಕ್ಕಿಂತ ಅತಿಯಾಗಿ ಆಹಾರದ ಬೇಡಿಕೆಯನ್ನು ತಡೆಯುತ್ತದೆ. ಆ ಮೂಲಕ ಕೆಟ್ಟ ಕೊಲೆಸ್ಟ್ರಾಲ್​ ಉತ್ಪತ್ತಿಯನ್ನು ನಿಯಂತ್ರಿಸುತ್ತದೆ ಎಂದು  ಡಾ. ಪಳನಿಯಪ್ಪನ್ ಹೇಳಿದ್ದಾರೆ. 

ಕೊಬ್ಬು ಇಳಿಸುವಲ್ಲಿ ಸಹಕಾರಿ

ಓಟ್ಸ್​ನಲ್ಲಿರುವ ಫೈಬರ್​ ಅಂಶವು ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್​ ಅನ್ನು ಕರಗಿಸಲು ಸಹಕಾರಿ. ಹೀಗಾಗಿ, ಅನ್ನಕ್ಕೆ ಹೋಲಿಸಿದರೆ ಓಟ್ಸ್​ ಉತ್ತಮ ಆಯ್ಕೆ ಎನ್ನುತ್ತಾರೆ.

ಮಧುಮೇಹಕ್ಕೆ ಲಗಾಮು 

ಇತ್ತೀಚಿನ ದಿನಗಳಲ್ಲಿ, 30ರ ವಯಸ್ಸು ದಾಟಿದವರಲ್ಲಿ ಹೆಚ್ಚಾಗಿ ಕಾಡುವ ಈ ಮಧುಮೇಹದ ಸಮಸ್ಯೆಗೆ ಹಲವರು ಭಯ ಬೀಳುತ್ತಾರೆ. ಸಕ್ಕರೆ ಅಂಶದ ಯಾವ ಪದಾರ್ಥಗಳನ್ನು ತಿನ್ನುವಂತಿಲ್ಲ. ಹೀಗಾಗಿ, ಮಧುಮೇಹದಿಂದ ಬಳಲುತ್ತಿರುವವರು ಓಟ್ಸ್ ಉತ್ತಮ ಆಯ್ಕೆ ಎಂದು ಯೋಚಿಸುತ್ತಾರೆ. ಓಟ್ಸ್​ನಲ್ಲಿ ಬೀಟಾ ಗ್ಲುಕನ್​ ಎಂಬ ಅಂಶವಿರುತ್ತದೆ. 
ಇದು ಜೀರ್ಣಕ್ರಿಯೆಯನ್ನು ಸ್ಲೋ ಮಾಡುವ ಹಿನ್ನೆಲೆ, ಸಕ್ಕರೆ ಅಂಶವೂ ನಿಮ್ಮ ರಕ್ತವನ್ನು ಸೇರುವುದು ಕಡಿಮೆಯಾಗುತ್ತದೆ. ಹಾಲು, ಜೇನುತುಪ್ಪ, ಬಾಳೆ ಹಣ್ಣು ಸೇರಿಸಿ ಓಟ್ಸ್​ ತಿನ್ನುವ ಬದಲಿಗೆ ತರಕಾರಿ ಹಾಕಿ ಉಪ್ಪಿಟ್ಟಿನ ರೀತಿ ಸೇವಿಸುವುದು ಉತ್ತಮ ಎಂದು ಹೇಳ್ತಾರೆ. ಮುಖ್ಯವಾಗಿ, ಇನ್ಸಸ್ಟಂಟ್​ ಓಟ್ಸ್​ ದೇಹಕ್ಕೆ ಅನಾರೋಗ್ಯಕರವಲ್ಲ. ಆದರೂ, ಅದು ಸಂಸ್ಕರಿಸಲ್ಪಟ್ಟಿರುವ ಕಾರಣ, ಬಳಕೆ ಮಾಡುವುದು ಅಷ್ಟು ಆರೋಗ್ಯಕರವಲ್ಲ ಎಂದು ಪಳನಿಯಪ್ಪನ್ ಸಲಹೆ ನೀಡಿದ್ದಾರೆ. 

ಓಟ್ಸ್​, ಅನ್ನ ಯಾವುದು ಬೆಸ್ಟ್?

ಪ್ರತಿದಿನವೂ ಓಟ್ಸ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯ ಆಯ್ಕೆಯೇ. ಓಟ್ಸ್​ನಲ್ಲಿರುವ ಫೈಬರ್​ ಅಂಶವೂ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ. ಅನ್ನದಲ್ಲಿ ಕಾರ್ಬೋಹೈಡ್ರೇಟ್ ಅಂಶವು ಇರುವುದರಿಂದ ಕಾಲಕ್ರಮೇಣ ಸಮಸ್ಯೆ ಕಾಡಬಹುದು. ಹಾಗಂತ, ಓಟ್ಸ್ ಅನ್ನೇ ಹೆಚ್ಚಾಗಿ ಆಹಾರದಲ್ಲಿ ಸೇರಿಸಿಕೊಳ್ಳೋದು ಸರಿಯಲ್ಲ. ಏನೇ ಸೇವಿಸಿದರೂ ನೀರು ಯಥೇಚ್ಚವಾಗಿ ಕುಡಿಯುವುದು ಒಳ್ಳೆಯ ಅಭ್ಯಾಸ ಎನ್ನುತ್ತಾರೆ. 
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net