ರಾತ್ರಿ ಮೊಸರನ್ನು ಸೇವಿಸುವುದು ಪೂರಕವೋ? ಮಾರಕವೋ? Curd@Night

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾನ್ಯವಾಗಿ ಭಾರತೀಯರ ಮನೆಗಳಲ್ಲಿ ಮೊಸರನ್ನು ರೈತಾ, ಸಲಾಡ್ ಮತ್ತು ಸಕ್ಕರೆಯೊಂದಿಗೆ ಸವಿಯುತ್ತಾರೆ.
  • ಶೀತ ಮತ್ತು ಅಜೀರ್ಣದಂತಹ ಅಪಾಯಗಳನ್ನು ಉಲ್ಲೇಖಿಸಿ ಮನೆಗಳಲ್ಲಿ ಮೊಸರಿನ ವಿರುದ್ಧ ಎಚ್ಚರಿಕೆ
  • ಮೊಸರು ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ, ನಿದ್ರೆಯನ್ನು ಸುಧಾರಿಸುತ್ತದೆ, ತೂಕವನ್ನು ಇಳಿಸುತ್ತದೆ
Curd : ಸಾಮಾನ್ಯವಾಗಿ ಭಾರತೀಯರ ಮನೆಗಳಲ್ಲಿ ಮೊಸರನ್ನು ರೈತಾ, ಸಲಾಡ್ ಮತ್ತು ಸಕ್ಕರೆಯೊಂದಿಗೆ ಸವಿಯುತ್ತಾರೆ. ಇದರ ಆರೋಗ್ಯ ಪ್ರಯೋಜನಗಳು ವ್ಯಾಪಕವಾಗಿದ್ದರೂ ಸಹ ರಾತ್ರಿಯಲ್ಲಿ ಮೊಸರು ತಿನ್ನುವುದು ನಮಗೆ ಒಳ್ಳೆಯದೇ ಅಥವಾ ಕೆಟ್ಟದ್ದೇ? ಎಂಬ ಪ್ರಶ್ನೆ ನಮ್ಮನ್ನು ಕಾಡಿರುತ್ತದೆ. ಕಾರಣ, ಮನೆಗಳಲ್ಲಿ ಹೆಚ್ಚಾಗಿ ಶೀತ ಮತ್ತು ಅಜೀರ್ಣದಂತಹ ಅಪಾಯಗಳನ್ನು ಉಲ್ಲೇಖಿಸಿ ಮೊಸರಿನ ವಿರುದ್ಧ ಎಚ್ಚರಿಕೆ ನೀಡುತ್ತಾರೆ. ಮತ್ತೊಂದೆಡೆ, ಆಧುನಿಕ ಪೌಷ್ಟಿಕತಜ್ಞರು ಮತ್ತು ವೈಜ್ಞಾನಿಕ ಅಧ್ಯಯನಗಳು ಮೊಸರು ವಾಸ್ತವವಾಗಿ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ, ನಿದ್ರೆಯನ್ನು ಸುಧಾರಿಸುತ್ತದೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಮೊಸರನ್ನು ಯಾವಾಗ ಬೇಕು ಆವಾಗ ತಿನ್ನಿ ಎನ್ನುತ್ತಾರೆ. ಹಾಗಾದರೆ ನಾವೇನು ಮಾಡಬೇಕು? ಎಂಬ ಗೊಂದಲದಲ್ಲಿ ನೀವಿದ್ದರೆ ಇಲ್ಲಿದೆ ನಿಮಗೆ ಪರಿಹಾರ.

ಮೊಸರಿನಲ್ಲಿರುವ ಪೋಷಕಾಂಶಗಳು

ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಪ್ರೋಬಯಾಟಿಕ್‌ಗಳು ಸಮೃದ್ಧವಾಗಿದ್ದು ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಪ್ರೋಬಯಾಟಿಕ್‌ಗಳು ಆರೋಗ್ಯಕರ ಸೂಕ್ಷ್ಮಜೀವಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ರಾತ್ರಿ ಮೊಸರು ತಿನ್ನುವುದರಿಂದಾಗುವ ಪ್ರಯೋಜನಗಳು

1. ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ

ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಕರುಳಿನ ಬ್ಯಾಕ್ಟೀರಿಯಾವನ್ನು ಸಮತೋಲನಗೊಳಿಸುತ್ತವೆ ಮತ್ತು ನಿದ್ರೆಯ ಸಮಯದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಮೊಸರು ಭಾರಿ ಭೋಜನದ ನಂತರ ಆಮ್ಲೀಯತೆ, ಉಬ್ಬುವುದು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

2. ನಿದ್ರೆಯನ್ನು ಉತ್ತೇಜಿಸುತ್ತದೆ

ಮೊಸರಿನಲ್ಲಿ ಟ್ರಿಪ್ಟೋಫನ್ ಎಂಬ ಅಮಿನೋ ಆಮ್ಲವು ಪ್ರಮುಖವಾಗಿದ್ದು, ಇದು ಮೆಲಟೋನಿನ್ ಮತ್ತು ಸೋನಟೋನಿನ್ ಎಂಬ ಹಾರ್ಮೋನ್‌ಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಈ ಮೆಲಟೋನಿನ್ ದೀರ್ಘವಾದ ನಿದ್ರೆ ಮಾಡಲು ಸಹಕಾರಿಯಾದರೆ, ಸೋನಟೋನಿನ್ ಮನಸ್ಸನ್ನು ಶಾಂತಗೊಳಿಸಿ, ಹಾರ್ಮೋನಲ್ ಸ್ಥಿತಿಯನ್ನು ಸಮತೋಲಿತಗೊಳಿಸುತ್ತದೆ, ಇದರಿಂದ ನಿದ್ರೆ ಉತ್ತಮವಾಗುತ್ತದೆ.

3. ಹೊಟ್ಟೆ ತುಂಬಿರುತ್ತದೆ

ಮೊಸರಿನಲ್ಲಿ ಕಡಿಮೆ ಕ್ಯಾಲೋರಿ ಇರುವ ಕಾರಣ ಇದನ್ನು ಸೇವಿಸಿದರೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ದೇಹದ ತೂಕವನ್ನು ಇಳಿಸುವಲ್ಲಿ ತುಂಬಾ ಉಪಯುಕ್ತವಾಗಿದ್ದು, ಆದ್ದರಿಂದ ಮೊಸರು ತೂಕ ಇಳಿಸುವ ಗುರಿಯನ್ನು ಹೊಂದಿರುವವರಿಗೆ ಉತ್ತಮ ಆಯ್ಕೆಯಾಗಿದೆ.

4. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನಾವು ನಿದ್ದೆ ಮಾಡುವಾಗ ನಮ್ಮ ರೋಗನಿರೋಧಕ ವ್ಯವಸ್ಥೆಯು ಪುನರುತ್ಪಾದಿಸುತ್ತದೆ ಮತ್ತು ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಈ ಪ್ರಕ್ರಿಯೆಯನ್ನು ಬೆಂಬಲಿಸುತ್ತವೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ನಡೆದ ಅಧ್ಯಯನವು ಮೊಸರು ಬಲವಾದ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.

ರಾತ್ರಿಯಲ್ಲಿ ಮೊಸರು ತಿನ್ನುವುದರ ಸಂಭಾವ್ಯ ನ್ಯೂನತೆಗಳು

ಮೊಸರು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಆಯುರ್ವೇದ ಪ್ರಕಾರ ಮೊಸರೊಂದು ಶೀತ ಪ್ರವೃತ್ತಿಯ ಪದಾರ್ಥವೆಂದು ಪರಿಗಳಿಸಲಾಅಗಿದೆ. ಇದು ಕೆಲವು ವ್ಯಕ್ತಿಗಳಲ್ಲಿ ಉಸಿರಾಟದ ಅಸ್ವಸ್ಥತೆಗೆ ಕಾರಣವಾಗಬಹುದು. ಆಸ್ತಮಾ, ಸೈನಸ್ ಸಮಸ್ಯೆಗಳು ಅಥವಾ ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಜನರು ರಾತ್ರಿಯಲ್ಲಿ ಮೊಸರನ್ನು ತಪ್ಪಿಸಿ ಮಜ್ಜಿಗೆಯನ್ನು ಮೊಸರಿನ ಪರ್ಯಾಯವಾಗಿ ಸೇವಿಸುವುದು ಉತ್ತಮ ಎಂದು ಹೇಳಲಾಗುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net