ತೂಕ ಇಳಿಸಬೇಕೆ? ಹಾಗಿದ್ದರೆ ನಿಮ್ಮ ಡಯಟ್‌ನಲ್ಲಿರಲಿ ಈ ಪೌಷ್ಟಿಕಾಂಶಯುಕ್ತ 'ಓಟ್ಸ್ ಖಿಚಡಿ! oats kichadi

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
oats kichadi: ಓಟ್ಸ್ ಖಿಚಡಿಯು ಅತ್ಯಂತ ಪೌಷ್ಟಿಕಯುಕ್ತ, ಜೀರ್ಣಿಸಿಕೊಳ್ಳಲು ಸುಲಭವಾದ ಮತ್ತು ತೂಕ ಇಳಿಸಲು ಬಯಸುವವರಿಗೆ ಒಂದು ಅತ್ಯುತ್ತಮವಾದ ಆಹಾರ. ಸಾಂಪ್ರದಾಯಿಕ ಅಕ್ಕಿ ಖಿಚಡಿಗೆ ಇದು ಆರೋಗ್ಯಕರ ಪರ್ಯಾಯವಾಗಿದೆ.

ಬೇಕಾಗುವ ಸಾಮಾಗ್ರಿಗಳು

* ¾ ಕಪ್ ಓಟ್ಸ್
* ¼ ಕಪ್ ಹೆಸರು ಬೇಳೆ
* 1 ಚೂರು ಬೆಳ್ಳುಳ್ಳಿ
* 1-2 ಹಸಿ ಮೆಣಸಿನಕಾಯಿ
* 1 ಈರುಳ್ಳಿ
* 1 ಟೊಮೇಟೊ
* ½ ಕಪ್​ ಮಿಕ್ಸ್​ ತರಕಾರಿ (ಕ್ಯಾರೆಟ್​, ಬೀನ್ಸ್)
* ½ ಚಮಚ ಜೀರಿಗೆ
* ¼ ಚಮಚ ಅರಿಶಿನ
* 3-4 ಕಪ್ ನೀರು
* 1 ಚಮಚ ತುಪ್ಪ/ಎಣ್ಣೆ
* ಕೊತ್ತಂಬರಿ ಸೊಪ್ಪು
* ಉಪ್ಪು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಹೆಸರು ಬೇಳೆಯನ್ನು 15-20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಕುಕ್ಕರ್​ಗೆ ತುಪ್ಪ ಬಿಸಿಮಾಡಿ. ಜೀರಿಗೆ, ಬೆಳ್ಳುಳ್ಳಿ, ಹಸಿ ಮೆಣಸು, ಈರುಳ್ಳಿ ಹಾಕಿ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಟೊಮೆಟೋ ಹಾಕಿ ಮೃದುವಾಗುವವರೆಗೂ ಬೇಯಿಸಿಕೊಳ್ಳಿ. ಇದಕ್ಕೆ ಅರಿಶಿಣ, ಮೆಣಸಿನ ಪುಡಿ, ಉಪ್ಪು ಸೇರಿಸಿ ಮಿಕ್ಸ್​ ಮಾಡಿಕೊಳ್ಳಿ.
ಈ ಮಿಶ್ರಣಕ್ಕೆ ನೆನೆಸಿದ ಹೆಸರು ಬೇಳೆ, ಮಿಕ್ಸ್ ವೆಜಿಟಬಲ್ಸ್ ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿಕೊಂಡು 3-4 ಕಪ್​ ನೀರು ಸುರಿದು ಕುಕ್ಕರ್​ ಮುಚ್ಚಳ ಮುಚ್ಚಿ 2-3 ವಿಶಲ್​ ಕೂಗಿಸಿಕೊಂಡು ನಂತರ ಸೇವಿಸಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net