ಮೊದಲು ಮಿಕ್ಸಿ ಜಾರಿಗೆ ಓಟ್ಸ್ ಹಾಕಿ ತರಿ ತರಿಯಾಗಿ ಪುಡಿಮಾಡಿಕೊಳ್ಳಿ. ನಂತರ ಒಂದು ಬೌಲ್ಗೆ ಮೆದ್ದಿದ ಬಾಳೆಹಣ್ಣು, ಮಿಕ್ಸಿ ಮಾಡಿದ ಸೇಬು, ಮೊಟ್ಟೆ , ವೆನಿಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತಯಾರಿಸಿದ ಮಿಶ್ರಣಕ್ಕೆ ಓಟ್ಸ್ ಪೌಡರ್, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಏಲಕ್ಕಿ, ದಾಲ್ಚಿನ್ನಿ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಸ್ವಲ್ಪ ಹಾಲು, ಒಣದ್ರಾಕ್ಷಿ , ಬಾದಾಮಿ, ಗೋಡಂಬಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.