ಎರಡೇ ಪದಾರ್ಥ ಬಳಸಿಕೊಂಡು ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಚಾಕಲೇಟ್ ಇದು..​

Banana Chocolate ಸಾಂದರ್ಭಿಕ ಚಿತ್ರ
Banana Chocolate ಸಾಂದರ್ಭಿಕ ಚಿತ್ರ
Published on
Banana Chocolate: ಚಾಕಲೇಟ್​ಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ರುಚಿಕರ ಚಾಕಲೇಟ್​ಗಳನ್ನು ಚಿಕ್ಕ ಮಕ್ಕಳಿನಿಂದ ಹಿಡಿದು, ವಯಸ್ಸಾದವರ ತನಕವು ಈ ಸಿಹಿತಿಂಡಿಯನ್ನು ತಿನ್ನುತ್ತಾರೆ. ಕೆಲವರು ಖುಷಿ ಸಂದರ್ಭದಲ್ಲಿ ತಿಂದರೆ, ಇನ್ನು ಕೆಲವರು ಪ್ರತಿನಿತ್ಯವು ಸೇವಿಸುತ್ತಾರೆ. ಚಾಕಲೇಟ್​ ತಿನ್ನುವುದರಿಂದ ಆರೋಗ್ಯದಲ್ಲಿ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾಗಿ ಚಾಕಲೇಟ್​ ಪ್ರಿಯರಿಗಾಗಿ ನಾವಿಂದು ಬಾಳೆಹಣ್ಣಿನ ಚಾಕಲೇಟ್​ ಮಾಡುವುದನ್ನು ಹೇಳಿಕೊಡಲಿದ್ದೇವೆ.

ಬೇಕಾಗುವ ಸಾಮಾಗ್ರಿಗಳು

* 5 ಬಾಳೆಹಣ್ಣು
* ಚಾಕಲೇಟುಗಳು
* ನೀರು

ಮಾಡುವ ವಿಧಾನ

ಮೊದಲು ಒ0ದು ಬೌಲ್​ಗೆ ಬಾಳೆಹಣ್ಣು ಹಾಕಿ ಚೆನ್ನಾಗಿ ಮೆದುಗೊಳಿಸಿ. ನಂತರ ಒಂದು ಪಾತ್ರೆಗೆ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಆ ಪಾತ್ರೆ ಒಳಗೆ ಚಾಕಲೇಟ್​ಗಳನ್ನು ಹಾಕಿ ಕರಗಿಸಿಕೊಳ್ಳಿ. ಈಗ ಮೆದುಗೊಳಿಸಿಕೊಂಡಿರುವ ಬಾಳೆಹಣ್ಣಿಗೆ ಚಾಕಲೇಟ್​ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿಕೊಳ್ಳಿ. ಒಂದು ಟ್ರೇಗೆ ಬೇಕಿಂಗ್​ ಪೇಪರ್​ ಹಾಸಿ ಅದರ ಮೇಲೆ ಮಿಶ್ರಣವನ್ನು ಸುರಿಯಿರಿ. ಇದಾದ ಬಳಿಕ 2 ಗಂಟೆಗಳ ನಂತರ ಈ ಮಿಶ್ರಣವನ್ನು ಫ್ರಿಜ್​ನಲ್ಲಿಡಿ. ನಂತರ, ಚಿಕ್ಕದಾಗಿ ಕತ್ತರಿಸಿ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net