ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುತ್ತೆ ಈ ಹೆಲ್ದೀ ವೆಜ್ ರೋಲ್; ಇಲ್ಲಿದೆ ಸುಲಭ ವಿಧಾನ! Veg roll
ಸಾಂದರ್ಭಿಕ ಚಿತ್ರ
Published on:
Copied
Follow Us
Veg roll: ವೆಜ್ ರೋಲ್ ಒಂದು ಜನಪ್ರಿಯ ಭಾರತೀಯ ಸ್ಟ್ರೀಟ್ ಫುಡ್ ಆಗಿದೆ. ಇದನ್ನು ಗೋಧಿ ರೋಟಿ ಅಥವಾ ಪರಾಠವನ್ನು ಬಳಸಿ, ಒಳಗೆ ಮಸಾಲೆ ಹುರಿದ ತರಕಾರಿ ಫಿಲ್ಲಿಂಗ್ ತುಂಬಲಾಗುತ್ತದೆ. ಇದರ ಸೇವನೆಯು ಬಾಯಿಗೆ ರುಚಿಯನ್ನು ನೀಡುವುದಲ್ಲದೇ, ದೇಹಕ್ಕೆ ಶಕ್ತಿಯನ್ನು ಕೂಡಾ ನೀಡುತ್ತದೆ. ನೀವೇನಾದರೂ ವೆಜ್ ರೋಲ್ ತಿನ್ಬೇಕು ಅಂದುಕೊಂಡಿದ್ರೆ ಇನ್ಯಾಕೆ ತಡ ಈಗ್ಲೇ ಮಾಡಿ ಸೇವಿಸಿ.
ಬೇಕಾಗುವ ಸಾಮಗ್ರಿಗಳು
* 1½ ಕಪ್ ಗೋಧಿ ಹಿಟ್ಟು
* ½ ಚಮಚ ಮೆಣಸಿನ ಪುಡಿ
* 1 ಚಮಚ ಧನಿಯ ಪುಡಿ
* 1 ಚಮಚ, ಗರಮ್ ಮಸಾಲಾ
* ½ ಚಮಚ, ಚಾಟ್ ಮಸಾಲಾ
* 1 ಕಪ್ ಕ್ಯಾರೆಟ್
* 1 ಕಪ್ ಕ್ಯಾಬೇಜ್
* 1 ಕಪ್ ಕ್ಯಾಪ್ಸಿಕಂ
* 1 ಟೊಮೇಟೊ
* ಹಸಿ ಬಟಾಣಿ
* 1 ಆಲೂಗಡ್ಡೆ
* 2 ಚಮಚ ಎಣ್ಣೆ
* ½ ಚಮಚ ಜೀರಿಗೆ
* ¼ ಚಮಚ ಅರಿಶಿಣ
* 1 ಈರುಳ್ಳಿ
* ಕೊತ್ತಂಬರಿ ಸೊಪ್ಪು
* ಸ್ವಲ್ಪ ಉಪ್ಪು
* ನೀರು
ಮಾಡುವ ವಿಧಾನ
ಮೊದಲು ಒಂದು ಬೌಲ್ಗೆ ಗೋಧಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ಎಣ್ಣೆ ಸೇರಿಸಿ ನೀರಿನಿಂದ ಮೃದುವಾದ ಹಿಟ್ಟು ಮಾಡಿ. 15- 20 ನಿಮಿಷ ನೆನೆಯಲು ಬಿಡಿ. ನಂತರ ಸಣ್ಣ ಉಂಡೆಗಳಾಗಿ ತೆಗೆದು ಅದನ್ನು ಚಪಾತಿ ಹದಕ್ಕೆ ಉದ್ದಿಕೊಂಡು ಎರಡೂ ಬದಿಯನ್ನು ಎಣ್ಣೆ ಹಚ್ಚಿಕೊಂಡು ಬೇಯಿಸಿಕೊಳ್ಳಿ.
ನಂತರ ಒಂದು ಪ್ಯಾನ್ಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಈರುಳ್ಳಿ ಹಾಕಿ ಕೆಂಪು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಅದಕ್ಕೆ ಕ್ಯಾರೆಟ್, ಕ್ಯಾಬೇಜ್, ಕ್ಯಾಪ್ಸಿಕಂ ಹಾಕಿ 4-5 ನಿಮಿಷ ಹುರಿಯಿರಿ. ಈಗ ಎಲ್ಲಾ ಮಸಾಲೆ ಪುಡಿಗಳನ್ನು ಸೇರಿಸಿ ಕೊತ್ತುಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.
ಇದಾದ ಬಳಿಕ ಬಿಸಿ ರೋಟಿಯ ಮೇಲೆ ಹಸಿರು ಚಟ್ನಿ ಅಥವಾ ಕೆಚಪ್ ಹಚ್ಚಿರಿ. ಅದರ ಮಧ್ಯದಲ್ಲಿ ತಯಾರಿಸಿದ ಮಿಶ್ರಣ ಇಟ್ಟು ಸಣ್ಣಗೆ ಕತ್ತರಿಸಿದ ಈರುಳ್ಳಿ + ನಿಂಬೆ ರಸ ಸೇರಿಸಿ ರೋಲ್ ಮಾಡಿ ಸವಿಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.