ಕಿಡ್ನಿ ಡ್ಯಾಮೇಜ್ ಡ್ರಿಂಕ್ಸ್​! ಇಂದೇ ಬಾಯಿಗೆ ಹಾಕೋದು ಬಂದ್ ಮಾಡಿ...Kidney Damaging drinks

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯದ ಮೇಲೆ ಜೀವನಶೈಲಿಯು ನೇರವಾಗಿ ಪರಿಣಾಮ ಬೀರುತ್ತದೆ.
  • ನಾವು ಸೇವಿಸುವಂತಹ ಒಳ್ಳೆಯ ಆಹಾರಗಳು ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ
  • ಪ್ರತಿನಿತ್ಯ ಕುಡಿಯುವ ಪಾನೀಯಗಳು ಮೂತ್ರಪಿಂಡಗಳ ಆರೋಗ್ಯವನ್ನು ಹಾಳು ಮಾಡುತ್ತದೆ
Kidney Damaging drinks : ನಮ್ಮ ಆರೋಗ್ಯದ ಮೇಲೆ ಜೀವನಶೈಲಿಯು ನೇರವಾಗಿ ಪರಿಣಾಮ ಬೀರುತ್ತದೆ. ನಾವು ಸೇವಿಸುವಂತಹ ಒಳ್ಳೆಯ ಆಹಾರಗಳು ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಜಂಕ್ ಫುಡ್, ಅನಾರೋಗ್ಯಕರ ಆಹಾರಗಳು ಮತ್ತು ಕಳಪೆ ಜೀವನಶೈಲಿಯು ದೇಹಕ್ಕೆ ಗಂಭೀರ ಆರೋಗ್ಯ ಸಮಸ್ಯೆಯನ್ನು ತರುತ್ತದೆ. ಈ ಕಾರಣಗಳಿಂದಾಗಿ ದೇಶದಲ್ಲೆಡೆ ಬೊಜ್ಜು, ಕ್ಯಾನ್ಸರ್, ಕೊಬ್ಬಿನ ಪಿತ್ತಜನಕಾಂಗ ಮತ್ತು ಮೂತ್ರಪಿಂಡ ವೈಫಲ್ಯದಂತಹ ಅಪಾಯಕಾರಿ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ.
ನೀವೇನಾದರೂ, ಮೂತ್ರಪಿಂಡಗಳ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಬಯಸಿದರೆ, ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಗಮನವಹಿಸುವುದು ಉತ್ತಮ. ನಾವು ಪ್ರತಿನಿತ್ಯ ಸೇವಿಸುವಂತಹ ಪಾನೀಯಗಳು ಮೂತ್ರಪಿಂಡಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಹೆಚ್ಚಾಗಿ ಈ ಪಾನೀಯಗಳನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳುವುದರಿಂದ ನಾವು ಮೂತ್ರಪಿಂಡಗಳ ವೈಫಲ್ಯವನ್ನು ಪಡೆದುಕೊಳ್ಳುತ್ತವೆ. ಹಾಗಾಗಿ ಈ ರೀತಿಯ ಪಾನೀಯಗಳನ್ನು ಇಂದಿನಿಂದಲೇ ನಿರ್ಬಂಧಿಸಿ.

1. ಸೋಡಾ

ಅತಿ ಹೆಚ್ಚು ಜನರು ಸೋಡಾವನ್ನು ಸಾಮಾನ್ಯವಾಗಿ ಆಹಾರ ಪದಾರ್ಥಗಳಾಗಿ ಬಳಸುತ್ತಾರೆ. ಹೆಚ್ಚಾಗಿ ಪಿಜ್ಜಾ ಮತ್ತು ಬರ್ಗರ್‌ಗಳೊಂದಿಗೆ ಆನಂದಿಸುತ್ತಾರೆ. ಸೋಡಾದಲ್ಲಿ ಹೆಚ್ಚಿನ ಮಟ್ಟದ ಫಾಸ್ಪರಿಕ್ ಆಮ್ಲವಿರುತ್ತದೆ. ಇದರ ಗಣನೀಯ ಸೇವನೆಯು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉತ್ಪತ್ತಿ ಮಾಡಿ, ಅಪಾಯವನ್ನು ಹೆಚ್ಚಿಸುತ್ತದೆ. ಹಾಗೇ ಸೋಡಾ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜು ಬರುವ ಅಪಾಯ ಹೆಚ್ಚಾಗುತ್ತದೆ.

2. ಹೆಚ್ಚು ಕಾಫಿ ಕುಡಿಯುವುದು

ಅತಿ ಹೆಚ್ಚು ಜನರು ಆಲಸ್ಯವನ್ನು ಹೋಗಲಾಡಿಸಲು ಬೆಳಿಗ್ಗೆಯಿಂದ ರಾತ್ರಿಯವರೆಗೆ ಹೆಚ್ಚು ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಈ ಅಭ್ಯಾಸವು ಮೂತ್ರಪಿಂಡಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾಫಿಯಲ್ಲಿರುವ ಕೆಫೇನ್​ ಅಂಶವು ಮೂತ್ರಪಿಂಡಗಳನ್ನು ನಿರ್ಜಲೀಕರಣಗೊಳಿಸುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಾಗಾಗಿ 2-3 ಕಪ್​ ಕಾಫಿ ಕುಡಿಯುವುದನ್ನು ಸೀಮಿತಗೊಳಿಸಬೇಕೆಂದು ವೈದ್ಯರು ತಿಳಿಸಿದ್ದಾರೆ.

3. ಎನರ್ಜಿ ಡ್ರಿಂಕ್ಸ್ (Red Bull, Monster, ಇತ್ಯಾದಿ)

ಈ ಪಾನೀಯಗಳಲ್ಲಿ ಹೆಚ್ಚಿನ ಕೆಫೇನ್​ ಇರುವುದರಿಂದ ಇದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಏರಿಸುತ್ತದೆ. ಮೂತ್ರಪಿಂಡಕ್ಕೆ ಒತ್ತಡವನ್ನು ಉಂಟು ಮಾಡುತ್ತದೆ. ಹಾಗಾಗಿ ಅಗತ್ಯವಿದ್ದರೆ, ಒಂದು ಅಥವಾ ಎರಡು ಬಾರಿ ಸೇವಿಸಬೇಕೇ ಹೊರತು ದೀರ್ಘವಾಗಿ ಸೇವಿಸುವುದರಿಂದ ಮೂತ್ರಪಿಂಡದ ರಕ್ತನಾಳಗಳಿಗೆ ಹಾನಿಯಾಗುತ್ತದೆ.

4. ಆಲ್ಕೋಹಾಲ್​

ಪ್ರತಿನಿತ್ಯ 2 ರಿಂದ 3 ಪೆಗ್​ಗಿಂತ ಹೆಚ್ಚಿಗೆ ಮದ್ಯ ಸೇವನೆಯು ಮೂತ್ರಪಿಂಡಗಳ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ. ಇದರಿಂದ ಮೂತ್ರಪಿಂಡಕ್ಕೆ ರಕ್ತ ಪೂರೈಕೆ ಕಡಿಮೆಯಾಗುತ್ತದೆ. ಹಾಗೆಯೇ ಮೂತ್ರಪಿಂಡ ವೈಫಲ್ಯ, ಕಿಡ್ನಿಸ್ಟೋನ್​ನಂತಹ ಗಂಭೀರ ಕಾಯಿಲೆಗಳು ಪ್ರಾರಂಭವಾಗುವಂತೆ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net