ನೀವು ಪ್ರತಿದಿನ ಸೇವಿಸುವ ಈ 7 ರೀತಿಯ ಆಹಾರಗಳು ಕ್ಯಾನ್ಸರ್​ ಬರುವಂತೆ ಮಾಡುತ್ತವೆ ಎಚ್ಚರ | Cancer

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Cancer: ಜಂಕ್ ಫುಡ್ ತಿನ್ನುವುದರಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗುತ್ತದೆ. ಇದು ಎಷ್ಟೇ ರುಚಿಕರವಾಗಿದ್ದರೂ ಸಹ, ದೀರ್ಘಾವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆದರೆ ಜಂಕ್ ಫುಡ್‌ನಷ್ಟೇ ಕೆಟ್ಟದಾದ ಮತ್ತು ನಿಧಾನವಾಗಿ ಕ್ಯಾನ್ಸರ್‌ಗೆ ಕಾರಣವಾಗುವ ಇತರ ಆಹಾರಗಳಿವೆ. ನಾವು ಪ್ರತಿದಿನ ಸೇವಿಸುವ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ 7 ಆಹಾರಗಳ ಪಟ್ಟಿ ಇಲ್ಲಿದೆ.

1. ತಂಪು ಪಾನೀಯಗಳು

ತಂಪು ಪಾನೀಯಗಳು ಸಕ್ಕರೆಯಿಂದ ತುಂಬಿರುತ್ತವೆ. ಇದು ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ. ಇವು ಕೃತಕ ಕ್ಯಾರಮೆಲ್ ಬಣ್ಣವನ್ನು ಹೊಂದಿರುತ್ತವೆ. ಈ ಕೃತಕ ಬಣ್ಣವನ್ನು ಕ್ಯಾರಮೆಲ್ IV ಎಂದು ಕರೆಯಲಾಗುತ್ತದೆ. ಇದು 4-MEI ಎಂಬ ರಾಸಾಯನಿಕವಾಗಿದ್ದು, ಇದನ್ನು ಅಮೋನಿಯಾ ಆಧಾರಿತ ಪ್ರಕ್ರಿಯೆಯ ಮೂಲಕ ಉತ್ಪಾದಿಸಲಾಗುತ್ತದೆ.

2. ಸುಟ್ಟ ಕೆಂಪು ಮಾಂಸ

ಬೇಯಿಸಿದ ಮಾಂಸವು ರುಚಿಕರವಾಗಿರುತ್ತದೆ. ಆದರೆ ವಿಜ್ಞಾನಿಗಳು ಇದನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದಾಗ, ಇದು ಕ್ಯಾನ್ಸರ್ ಉಂಟುಮಾಡುವ ಹೈಡ್ರೋಕಾರ್ಬನ್‌ಗಳನ್ನು ಉತ್ಪಾದಿಸುತ್ತದೆ. ಇದರಿಂದ ರಾಸಾಯನಿಕ ಮತ್ತು ಆಣ್ವಿಕ ರಚನೆಯನ್ನು ಬದಲಾಯಿಸುತ್ತದೆ ಎಂದು ಕಂಡುಹಿಡಿದಿದ್ದಾರೆ.

3. ಸಾಲ್ಮನ್ ಮೀನುಗಳು

ಕಾಡು ಸಾಲ್ಮನ್‌ಗಳು ನಿಮಗೆ ಒಳ್ಳೆಯ ಪ್ರೋಟೀನ್ ಅನ್ನು ಹೇರಳವಾಗಿ ಹೊಂದಿದ್ದರೂ, US ನಲ್ಲಿ ತಿನ್ನಲಾಗುವ ಶೇ, 60 ಕ್ಕಿಂತ ಹೆಚ್ಚು ಸಾಲ್ಮನ್‌ಗಳು ಕೀಟನಾಶಕಗಳು ಮತ್ತು ಪ್ರತಿಜೀವಕಗಳನ್ನು ಸೇವಿಸುವ ಕೃಷಿ ಭೂಮಿಯಿಂದ ಬರುತ್ತವೆ. ಇವು ಅವುಗಳ ದೇಹದಲ್ಲಿ ಸಂಗ್ರಹವಾಗುತ್ತವೆ ಮತ್ತು ನಾವು ಅವುಗಳನ್ನು ತಿಂದಾಗ ನಮಗೆ ಕ್ಯಾನ್ಸ​ರ್ ರವಾನೆಯಾಗುತ್ತವೆ.

4. ಕೃತಕ ಸಿಹಿಕಾರಕಗಳು

ಹೆಚ್ಚಿನ ಕೃತಕ ಸಿಹಿಕಾರಕಗಳನ್ನು ರಾಸಾಯನಿಕಗಳ ಮೂಲಕ ತಯಾರಿಸಲಾಗುತ್ತದೆ. ಇವುಗಳ ಸುರಕ್ಷತೆ ತಿಳಿದಿಲ್ಲ. ಕೆಲವು ಸಂಶೋಧನೆಗಳು ಕೃತಕ ಸಿಹಿಕಾರಕಗಳು ಡಿಕೆಪಿ (ಡೈಕೆಟೊಪಿಪೆರಾಜಿನ್) ಎಂಬ ವಿಷಕಾರಿ ವಸ್ತುವನ್ನು ಬಿಡುಗಡೆ ಮಾಡುತ್ತವೆ ಎಂದು ಸೂಚಿಸುತ್ತವೆ. ಇದು ದೇಹದಲ್ಲಿ ಸಂಗ್ರಹವಾಗಬಹುದು ಮತ್ತು ಮೆದುಳಿನ ಗೆಡ್ಡೆಗಳಿಗೆ ಕಾರಣವಾಗಬಹುದು.

5. ಸಂಸ್ಕರಿಸಿದ ಮಾಂಸಗಳು

ಇವುಗಳಲ್ಲಿ ಬೇಕನ್, ಹಾಟ್ ಡಾಗ್ಸ್, ಸಾಸೇಜ್‌ಗಳು ಮತ್ತು ಡೆಲಿ ಮಾಂಸಗಳು ಸೇರಿವೆ. ಸಂಸ್ಕರಣೆಯ ಸಮಯದಲ್ಲಿ, ಆಹಾರವನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ವಿಶೇಷವಾಗಿ ನೈಟ್ರೈಟ್‌ಗಳು ಸೇರಿಸಲಾಗುತ್ತದೆ. ಆಹಾರವನ್ನು ಹೆಚ್ಚು ರುಚಿಕರವಾಗಿಸಲು ಇವುಗಳನ್ನು ಸೇರಿಸಲಾಗುತ್ತದೆ.

6 . ಆಲೂಗಡ್ಡೆ ಚಿಪ್ಸ್

ಆಲೂಗಡ್ಡೆ ಚಿಪ್ಸ್ ಹಲವಾರು ಕಾರಣಗಳಿಂದ ಹಾನಿಕಾರಕವಾಗಿದೆ. ಮೊದಲನೆಯದಾಗಿ, ಇವುಗಳನ್ನು ಟ್ರಾನ್ಸ್ ಕೊಬ್ಬಿನಲ್ಲಿ ಹುರಿಯಲಾಗುತ್ತದೆ. ಎರಡನೆಯದಾಗಿ, ಅವುಗಳಲ್ಲಿ ಬಹಳಷ್ಟು ಉಪ್ಪು ಇರುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಮಾತ್ರವಲ್ಲದೆ ಹೃದಯ ಕಾಯಿಲೆಯನ್ನೂ ಹೆಚ್ಚಿಸುತ್ತದೆ.

7. ಅತಿಯಾದ ಮದ್ಯಪಾನ

ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ನಡೆಸಿದ ಅಧ್ಯಯನಗಳು ಅತಿಯಾದ ಮದ್ಯಪಾನವು ತಲೆ, ಕುತ್ತಿಗೆ, ಗಂಟಲು, ಯಕೃತ್ತು, ಎದೆ ಮತ್ತು ಕೊಲೊನ್ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ ಎಂದು ಕಂಡು ಬಂದಿದೆ. ಅದರೆ, ಎಷ್ಟು ಮದ್ಯಪಾನ ಬೇಕು ಎಂಬ ಚರ್ಚೆ ಮುಂದುವರೆದಿದ್ದರೂ, ಮಧ್ಯಮ ಮದ್ಯಪಾನವನ್ನು ಸಾಮಾನ್ಯವಾಗಿ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net