ಬ್ಯಾಚುಲರ್ಸ್‌ಗೆ ಇದು ಬೆಸ್ಟ್: ಕೇವಲ 20 ನಿಮಿಷದಲ್ಲಿ ಮಾಡಿ ಖಾರವಾದ ನಾಟಿ ಸ್ಟೈಲ್ ಪೆಪ್ಪರ್ ಚಿಕನ್ ಫ್ರೈ Pepper Chicken Fry
ಸಾಂದರ್ಭಿಕ ಚಿತ್ರ
Published on:
Copied
Follow Us
Pepper Chicken Fry: ಚಿಕನ್ ಅಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಮಾಂಸಹಾರಿಗಳು ಚಿಕನ್ನಿಂದ ಮಾಡಿದ ಎಲ್ಲಾ ಆಹಾರವನ್ನು ಸಿಕ್ಕಾ ಪಟ್ಟೆ ಇಷ್ಟ ಪಟ್ಟು ತಿನ್ನುತ್ತಾರೆ. ಆಹಾರ ಸೇವನೆಗಾಗಿ ಎಷ್ಟೋ ದೂರ ಪ್ರಯಾಣ ಬೆಳೆಸಲು ಕೂಡಾ ಮುಂದಾಗಿರುತ್ತಾರೆ. ಹಾಗಾಗಿ ನಾವಿಂದು ಚಿಕನ್ ಪ್ರಿಯರಿಗಾಗಿ ನಾಟಿ ಸ್ಟೈಲ್ ಪೆಪ್ಪರ್ ಚಿಕನ್ ಫ್ರೈ ಮಾಡುವುದನ್ನು ಹೇಳಿ ಕೊಡಲಿದ್ದೇವೆ.
ಬೇಕಾಗುವ ಸಾಮಾಗ್ರಿಗಳು
* 500 ಗ್ರಾಂ ಚಿಕನ್
* 2 ಈರುಳ್ಳಿ
* 3-4 ಹಸಿಮೆಣಸಿನಕಾಯಿ
* 2 ಚಮಚ ಕಾಳುಮೆಣಸಿನ ಪುಡಿ
* ಕರಿಬೇವು
* 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* ಪುದೀನಾ ಮತ್ತು ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಚಿಕನ್‌ಗೆ ಸ್ವಲ್ಪ ಅರಿಶಿನ, ಉಪ್ಪು ಮತ್ತು ಅರ್ಧ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 15 ನಿಮಿಷ ನೆನೆಯಲು ಬಿಡಿ. ನಂತರ ಒಂದು ಬಾಣಲೆಗೆ 3 ಚಮಚ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಕರಿಬೇವು ಚಟಪಟ ಅಂದ ಮೇಲೆ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ.
ಈಗ ಉಳಿದ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸು. ನಂತರ ಅದಕ್ಕೆ ಪುದೀನಾ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ, ನೀರು ಹಾಕದೆ ಮುಚ್ಚಳ ಮುಚ್ಚಿ 10-12 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.
ಚಿಕನ್ ಬೆಂದ ಮೇಲೆ ನೀರೆಲ್ಲಾ ಆವಿಯಾಗಿ ಎಣ್ಣೆ ಬಿಡುತ್ತದೆ. ಆಗ 2 ಚಮಚ ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ಘಾಟು ಘಾಟಾದ ಪೆಪ್ಪರ್ ಚಿಕನ್ ರೆಡಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.