Junk Food: ಇಂದಿನ ವೇಗವಾಗಿ ಸಾಗುತ್ತಿರುವ ಬದುಕಿನಲ್ಲಿ ನಮಗೆ ಸುಲಭವಾಗಿ ಸಿಗುವ ಮತ್ತು ನಾಲಿಗೆಗೆ ಚಟ ಉಂಟುಮಾಡುವ ಜಂಕ್ ಫುಡ್ ನಮ್ಮ ಜೀವನದ ಭಾಗವಾಗಿಬಿಟ್ಟಿದೆ. ಅಲ್ಲದೆ, ಪಿಜ್ಜಾ, ಬರ್ಗರ್, ಸಮೋಸಾ, ಪಾನಿಪುರಿ, ನೂಡಲ್ಸ್ ಮತ್ತು ತಂಪು ಪಾನೀಯಗಳು ನೋಡಲು ಆಕರ್ಷಕವಾಗಿದ್ದರೂ, ಇವುಗಳಲ್ಲಿ ಪೋಷಕಾಂಶಗಳು ಶೂನ್ಯವಾಗಿದೆ. ಬದಲಾಗಿ ಇವುಗಳಲ್ಲಿ ಸಕ್ಕರೆ, ಉಪ್ಪು, ಮೈದಾ ಮತ್ತು ಕೆಟ್ಟ ಕೊಬ್ಬು ಹೇರಳವಾಗಿರುತ್ತವೆ.