ಈ ಏಳು ಪದಾರ್ಥಗಳನ್ನು ಸೇವಿಸಿದರೆ ಕ್ಯಾನ್ಸರ್​ ಗ್ಯಾರಂಟಿ! Cancer

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ದಿನದಲ್ಲಿ ಕ್ಯಾನ್ಸರ್​ ಕೆಮ್ಮು, ಜ್ವರದಂತೆ ಸಹಜವಾಗಿದೆ
  • ನಮ್ಮ ಕೆಟ್ಟ ಜೀವನಶೈಲಿ ಮತ್ತು ಆರೋಗ್ಯಶೈಲಿಯಿಂದ ಕ್ಯನ್ಸರ್​ ಹೆಚ್ಚಳವಾಗಿದೆ
  • ಏನು ತಿನ್ನಬೇಕು ಎನ್ನುವುದಕ್ಕಿಂತ ಏನನ್ನು ತಿನ್ನಬಾರದು ಎನ್ನುವುದು ಮುಖ್ಯ
Cancer : ಪ್ರಸ್ತುತ ದಿನಮಾನದಲ್ಲಿ ಕ್ಯಾನ್ಸರ್​ ಎಂಬ ಮಾರಣಾಂತಿಕ ಕಾಯಿಲೆ ಸಹ ಜ್ವರ, ಕೆಮ್ಮಿನಷ್ಟೆ ಸಾಧಾರಣವಾಗಿ ತಗಲುವಂತಾಗಿದೆ. ಇದಕ್ಕೆ ನಮ್ಮ ಜೀವನಶೈಲಿ ಮತ್ತು ಆರೋಗ್ಯಶೈಲಿಯೇ ಪ್ರಮುಖ ಕಾರಣವಾಗಿದೆ. ಹುಟ್ಟಿದ ಮಗುವಿಗೆ ಅಲ್ಲ, ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಕ್ಯಾನ್ಸರ್​ ತಗಲುವ ಹಂತಕ್ಕೆ ನಮ್ಮನ್ನು ನಾವು ದೂಡಿಕೊಂಡಿದ್ದೇವೆ. ಆರೋಗ್ಯದ ಬಗ್ಗೆ ಕಿಂಚ್ಚಿತ್ತು ಕಾಣಜಿ ಕೊಡದೆ ಹೊಟ್ಟೆ ಎನ್ನುವುದನ್ನು ಕಸದ ತೊಟ್ಟಿಗಿಂತ ಕೀಳಾಗಿ ಇಟ್ಟುಕೊಂಡ ಪರಿಣಾಮದಿಂದ ಈ ಕ್ಯಾನ್ಸರ್​ ಹರಡುವಿಕೆ ಇಷ್ಟು ಅಧಿಕವಾಗಲು ಕಾರಣ.
ಹಾಗಾದರೆ ಕ್ಯಾನ್ಸರ್​ ತಡೆಗೆ ನಾವೇನು ತಿನ್ನಬೇಕು ? ಎನ್ನುವುದು ನಿಮ್ಮ ಪ್ರಶ್ನೆಯಾಗಿದ್ದರೆ, ಏನು ತಿನ್ನಬೇಕು ಎನ್ನುವುದಕ್ಕಿಂತ ಏನನ್ನು ತಿನ್ನಬಾರದು ಎನ್ನುವುದನ್ನು ಮೊದಲು ತಿಳಿದುಕೊಳ್ಳುವುದು ಉತ್ತಮ.ಆದ್ದರಿಂದ ನಾವಿಂದು ಯಾವ ಯಾವ ಪದಾರ್ಥಗಳು ಕ್ಯಾನ್ಸರ್​ ಉಂಟಾಗಲು ಕಾರಣವಾಗುತ್ತವೆ ಎನ್ನುವುದರ ಕುರಿತು ತಿಳಿದುಕೊಳ್ಳೊಣ. ಹಾಗೆಯೇ ಇಲ್ಲಿ ತಿಳಿಸಿದ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವುದರಿಂದ ನೀವು ಉತ್ತಮ ಫಲಿತಾಂಶವನ್ನು ಖಂಡಿತವಾಗಿ ಕಂಡುಕೊಳ್ಳುತ್ತಿರಿ.

1. ಸಂಸ್ಕರಿಸಿದ ಮಾಂಸಗಳು (Processed Meats)

ಧೀರ್ಘಕಾಲದ ವರೆಗೆ ಶೇಕರಿಸಿಟ್ಟ ಮಾಂಸಗಳ ಸೇವನೆ ಕ್ಯಾನ್ಸರ್​ ರೋಗಕ್ಕೆ ಮುಕ್ತ ಆಹ್ವಾನ ನೀಡಿದಂತೆ. ಬಹುಕಾಲದ ವರೆಗೆ ಮಾಂಸಗಳನ್ನು ಸಂಸ್ಕರಿಸಿಟ್ಟರೆ ಅವುಗಳಲ್ಲಿ ಇರುವ ನೈಟ್ರೇಟ್ ಮತ್ತು ನೈಟ್ರೈಟ್ ರಸಾಯನಗಳು ದೇಹದಲ್ಲಿ ನೈಟ್ರೋಸಮೈನ್ ಆಗಿ ಪರಿವರ್ತನೆಗೊಳ್ಳುತ್ತವೆ. ಇದು DNA ಗೆ ಹಾನಿ ಉಂಟುಮಾಡಿ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಆದ್ದರಿಂದ ಮಾಂಸಗಳನ್ನು ಯಾವುದೇ ಕಾರಣಕ್ಕೂ ಹೆಚ್ಚು ದಿನಗಳ ವರೆಗೆ ಪ್ರೀಜ್​ಗಳಲ್ಲಿ ಇಡಬೇಡಿ.

2. ಅತಿಯಾಗಿ ಕರಿದ ಆಹಾರಗಳು (Deep Fried Foods)

ಅತಿಯಾಗಿ ಕರಿದ ಆಹಾರಗಳಲ್ಲಿ ಅಂದರೆ ಬಜ್ಜಿ, ಬೋಂಡಾ, ಫ್ರೈಡ್ ಸ್ನ್ಯಾಕ್ಸ್, ಫ್ರೆಂಚ್ ಫ್ರೈಸ, ಚಿಪ್ಸ್ಇವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಲ್ಲ ಹಲವಾರು ಹಾನಿಕಾರಕ ಸಂಯುಕ್ತಗಳನ್ನು ಒಳಗೊಂಡಿರುತ್ತದೆ. ಬಳಸಿದ ಎಣ್ಣೆಯನ್ನೇ ಪದೇ ಪದೇ ಬಳಸುವುದರಿಂದ ಅಕ್ರೈಲಮೈಡ್ (Acrylamide) ಎಂಬ ಸಂಯುಕ್ತ ಆಹಾರ ಪದಾರ್ಥಗಳಲ್ಲಿ ಬಿಡುಗಡೆಯಾಗುತ್ತದೆ. ಇದೊಂದು ಕ್ಯಾನ್ಸರ್​ಕಾರಕ ಸಂಯುಕ್ತವಾಗಿದ್ದು ಇದು DNA ಗೆ ನಷ್ಟವನ್ನುಂಟು ಮಾಡುತ್ತದೆ.

3. ಕೆಂಪು ಮಾಂಸ (Red Meat)

ಕೆಂಪು ಮಾಂಸವನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದಾಗ ಅದರಲ್ಲಿ HCAs ಮತ್ತು PAHs ಎಂಬ ಅಪಾಯಕಾರಿ ರಸಾಯನಗಳು ರಚನೆಗೊಂಡ ಪರಿಣಾಮ ಕರಳಿನ ಕ್ಯಾನ್ಸರ್​ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲಿಯೂ ಗ್ರಿಲ್ ಹಾಗೂ ಬಾರ್ಬಿಕ್ಯೂ ಮಾಡಿದ ಕೆಂಪು ಮಾಂಸ ಗಟ್ ಮೈಕ್ರೋಬಿಯೋಟಾ ಮೇಲೆ ಪರಿಣಾಮ ಬೀರುವ ಮೂಲಕ ಕ್ಯಾನ್ಸರ್​ಗೆ ಕಾರಣವಾಗುತ್ತದೆ.

4. ಸಕ್ಕರೆ ಮತ್ತು ಸಿಹಿ ಪಾನೀಯಗಳು(Sugar and Sweet Drinks)

ಸಕ್ಕರೆ ಇನ್ಸುಲಿನ್ ಮಟ್ಟ ಮತ್ತು ಶರೀರದ ಕೊಬ್ಬನ್ನು ಹೆಚ್ಚಿಸುತ್ತದೆ. ಸಕ್ಕರೆ ಮಿಶ್ರಿತ ಪಾನೀಯಗಳ ದೀರ್ಘಕಾಲಿಕ ಸೇವನೆಯು ಸ್ತನ, ಯಕೃತ್ ಮತ್ತು ಕೊಲನ್ ಕ್ಯಾನ್ಸರ್‌ಗಳನ್ನು ಉಂಟುಮಾಡುತ್ತದೆ. ಹೆಚ್ಚಾದ ಸಕ್ಕರೆ–ಇನ್ಸುಲಿನ್ ಸಂಚಲನ ಟ್ಯೂಮರ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸಬಹುದು.

5. ಹೆಚ್ಚು ಉಪ್ಪಿನ ಆಹಾರಗಳು (High-Salt Foods)

ಉಪ್ಪಿನಕಾಯಿ, ಉಪ್ಪು ಹೆಚ್ಚಿರುವ ಸ್ನ್ಯಾಕ್ಸ್, ಸಂರಕ್ಷಿತ ಮೀನು, ಪ್ಯಾಕ್ ಆಹಾರಗಳು, ಇನ್‌ಸ್ಟಂಟ್ ನೂಡಲ್ಸ್ ಮುಂತಾದವುಗಳು ಗ್ಯಾಸ್ಟ್ರಿಕ್ (ಹೊಟ್ಟೆ) ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ.
Helicobacter pylori (H. pylori) ಎಂಬ ಬ್ಯಾಕ್ಟೀರಿಯಾ ಉಪ್ಪಿನಾಂಶ ಅಧಿಕವಾಗಿರುವ ಪದಾರ್ಥಗಳಲ್ಲಿ ಇರುತ್ತದೆ, ಇದು ಹೊಟ್ಟೆ ಕ್ಯಾನ್ಸರ್​ನ್ನು ಉಂಟುಮಾಡುವ ಪ್ರಮುಖ ಬ್ಯಾಕ್ಟೀರಿಯಾಗಿದೆ.

6. ಮೈಕ್ರೋವೇವ್ ಪಾಪ್‌ಕಾರ್ನ್ ಪ್ಯಾಕೆಟ್‌ಗಳು

ಇನ್‌ಸ್ಟಂಟ್ ಪಾಪ್‌ಕಾರ್ನ್, ಟು ಮಿನಿಟ್ಸ್​ ಪಾಪ್‌ಕಾರ್ನ್ ಎಂಬ ಪಾಪ್‌ಕಾರ್ನ್​ಗಳಲ್ಲಿ ಇರುವ PFOA (Perfluorooctanoic acid) ಎಂಬ ರಸಾಯನ ಇದ್ದು, ಇದು ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗಬಹುದು. ಇನ್‌ಸ್ಟಂಟ್ ಪಾಪ್‌ಕಾರ್ನ್​ಗಳಲ್ಲಿ ಬೆಣ್ಣೆ ವಾಸನೆಗೆ ಬಳಕೆ ಮಾಡುವ Diacetyl ಕೂಡ ಶ್ವಾಸಕೋಶ ಕ್ಯಾನ್ಸರ್​ಗೆ ಕಾರಣವಾಗುತ್ತದೆ.

7. ಮದ್ಯಪಾನ (Alcohol)

ನಿರಂತರ ಮದ್ಯಪಾನವು ಕ್ಯಾನ್ಸರ್​ನ್ನು ಉಂಟುಮಾಡುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಮಾಹಿತಿಯೆ ಆಗಿದೆ. ಮದ್ಯಪಾನದಿಂದ ದೇಹದಲ್ಲಿ Acetaldehyde ಎಂಬ ನೇರ ಕಾರ್ಸಿನೋಜೆನ್ ರೂಪಾಂತರಗೊಳ್ಳುತ್ತದೆ. ಇದು DNAಗೆ ನೇರವಾಗಿ ಹಾನಿಯನ್ನುಂಟು ಮಾಡುತ್ತದೆ. ಮದ್ಯಪಾನವು ಸ್ತನ, ಯಕೃತ್, ಬಾಯಿ, ಕತ್ತು ಕ್ಯಾನ್ಸರ್‌ಗಳೊಂದಿಗೆ ನೇರ ಸಂಬಂಧ ಹೊಂದಿದೆ.
ಕ್ಯಾನ್ಸರ್ ತಡೆಗಟ್ಟಲು ಕೆಲವು ಸಲಹೆಗಳು

* ತಾಜಾ ಹಣ್ಣು–ತರಕಾರಿ ಹೆಚ್ಚಾಗಿ ಸೇವಿಸಿ

* ಹೆಚ್ಚು ಉಪ್ಪು, ಸಕ್ಕರೆ ಇರುವ ಆಹಾರಗಳನ್ನು ಕಡಿಮೆ ಮಾಡಿ

* ಸಂಸ್ಕರಿಸಿದ ಮಾಂಸ ಮತ್ತು ಜಂಕ್ ಆಹಾರ ಬಳಕೆಯನ್ನು ನಿಯಂತ್ರಿಸಿ

* ನಿಯಮಿತ ವ್ಯಾಯಾಮ ಮಾಡಿ

* ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಿ

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.(ಎಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net