ಬೆಳಿಗ್ಗೆ ಈ ರೀತಿ ಉಪ್ಮಾ ಮಾಡಿ ಸೇವಿಸಿ, ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಿ! vegitable oats upma

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
vegitable oats upma: ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ತುಂಬಾ ಸುಲಭದ ಮಾತೇನಲ್ಲ. ತೂಕ ಇಳಿಸಿಕೊಳ್ಳಲು ನಿರಂತರ ಶಿಸ್ತು ಬದ್ಧ ಪ್ರಯತ್ನದ ಅಗತ್ಯ ಹೆಚ್ಚಿರುತ್ತದೆ. ತೂಕ ಇಳಿಸಲು ಓಟ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಓಟ್ಸ್‌ನಲ್ಲಿ ಹೆಚ್ಚು ಫೈಬರ್, ಪ್ರೋಟೀನ್ ಇರುತ್ತದೆ ಮತ್ತು ದೀರ್ಘಕಾಲ ತೃಪ್ತಿ ನೀಡುತ್ತದೆ. ಇದರಿಂದ ಹೆಚ್ಚು ತಿನ್ನುವ ಅಗತ್ಯ ಕಡಿಮೆಯಾಗುತ್ತದೆ. ಹಾಗಾಗಿ ನೀವು ಈ ರೀತಿಯ ಆಹಾರವನ್ನು ಸೇವಿಸುವ ಅಭ್ಯಾಸ ಮಾಡಿಕೊಂಡಾಗ ಅದು ತೂಕ ಇಳಿಸಲು ಸಹಾಯ ಮಾಡುತ್ತದೆ.

ಬೇಕಾಗುವ ಪದಾರ್ಥಗಳು

* ¾ ಕಪ್ ಓಟ್ಸ್
* 1½ ಕಪ್ ತರಕಾರಿಗಳು
* ಸ್ವಲ್ಪ ಹಸಿರು ಬಟಾಣಿ
* ½ ಚಮಚ ಜೀರಿಗೆ
* ಕರಿಬೇವು, ಹಸಿ ಮೆಣಸಿನಕಾಯಿ
* ಉಪ್ಪು
* ನಿಂಬೆ ರಸ
* 1 ಚಮಚ ಎಣ್ಣೆ

ಮಾಡುವ ವಿಧಾನ

ಮೊದಲು ಒಂದು ಬಾಣಲೆಗೆ ಓಟ್ಸ್​ ಹಾಕಿ 2 ನಿಮಿಷ ಹುರಿದುಕೊಳ್ಳಿ. ನಂತರ ಒಂದು ಪ್ಯಾನ್​ಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಜೀರಿಗೆ,ಈರುಳ್ಳಿ , ತರಕಾರಿ, ಕರಿಬೇವು, ಮೆಣಸಿನಕಾಯಿ ಹಾಕಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. ನಂತರ ಆ ಮಿಶ್ರಣಕ್ಕೆ ಒಂದು ನೀರು, ಉಪ್ಪು, ಓಟ್ಸ್ ಸೇರಿಸಿ 4-5 ನಿಮಿಷ ಬೇಯಿಸಿಕೊಳ್ಳಿ. ನಂತರ ಸೇವಿಸಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net