ಬೆಂಗಳೂರು: ಆಧುನಿಕ ಜೀವನಶೈಲಿ, ಕುಳಿತಲ್ಲೇ ಕೆಲಸ ಮಾಡುವ ಪದ್ಧತಿ ಮತ್ತು ಅಸಮರ್ಪಕ ಆಹಾರ ಕ್ರಮದಿಂದಾಗಿ ಇಂದು ಅನೇಕರು ಬೆಲ್ಲಿ ಫ್ಯಾಟ್(belly fat) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊಟ್ಟೆಯ ಸುತ್ತ ಶೇಖರಣೆಯಾಗುವ ಈ ಕೊಬ್ಬು ಕೇವಲ ಸೌಂದರ್ಯಕ್ಕೆ ಅಡ್ಡಿಯಾಗುವುದಲ್ಲದೆ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ದಾರಿಯಾಗುತ್ತದೆ. ಆದರೆ, ಕಠಿಣ ಡಯಟ್ ಇಲ್ಲದೆಯೂ ಕೇವಲ ಬೆಳಗಿನ ಈ 5 ಅಭ್ಯಾಸಗಳಿಂದ ನಿಮ್ಮ ಫಿಟ್‌ನೆಸ್ ಗುರಿಯನ್ನು ತಲುಪಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.