ಗರ್ಭಿಣಿಯರು ಮತ್ತು ರೋಗಿಗಳು ಗ್ರಹಣದ ವೇಳೆ ಸೇವಿಸಬಹುದಾದ ಸುರಕ್ಷಿತ ಆಹಾರ! Lunar Eclipse Diet

Lunar Eclipse Diet (ಸಾಂದರ್ಭಿಕ ಚಿತ್ರ)
Lunar Eclipse Diet (ಸಾಂದರ್ಭಿಕ ಚಿತ್ರ)
Published on
Lunar Eclipse Diet: ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುವ ವಿದ್ಯಮಾನವನ್ನೇ ಚಂದ್ರಗ್ರಹಣ ಎನ್ನಲಾಗುತ್ತದೆ.
ಶಾಸ್ತ್ರಗಳ ಪ್ರಕಾರ, ಗ್ರಹಣದ ಸಮಯದಲ್ಲಿ ಜೀರ್ಣಶಕ್ತಿ ಕುಂಠಿತವಾಗುವುದರಿಂದ ಮತ್ತು ವಾತಾವರಣದಲ್ಲಿ ನಕಾರಾತ್ಮಕ ಶಕ್ತಿ ಇರುವುದರಿಂದ ಊಟ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ವಿಜ್ಞಾನವು ಗ್ರಹಣಕ್ಕೂ ಆಹಾರಕ್ಕೂ ನೇರ ಸಂಬಂಧವಿಲ್ಲ ಎಂದು ಹೇಳುತ್ತದೆ. ಹಿರಿಯರು ಮತ್ತು ಗರ್ಭಿಣಿಯರು ಲಘು ಆಹಾರ ಸೇವಿಸಬಹುದು. ಹಾಗಾಗಿ ಅವರಿಗೆಂದೇ ಈ ಅರಿಶಿನ ಅನ್ನ ಮತ್ತು ತರಕಾರಿ ಸಜ್ಜೆ ಮಾಡುವುದನ್ನು ಹೇಳಿಕೊಡಲಿದ್ದೇವೆ. 

ಬೇಕಾಗುವ ಸಾಮಗ್ರಿಗಳು

* 1 ಕಪ್ ಅಕ್ಕಿ 
½ ಚಮಚ ಅರಿಶಿನ ಪುಡಿ 
2 ಕಪ್ ನೀರು 
1-2 ಚಮಚ ತುಪ್ಪ / ಎಣ್ಣೆ 
½ ಚಮಚ ಜೀರಿಗೆ 
8-10  ಕರಿಬೇವು ಎಲೆ 
1 ಕಪ್​ ಮಿಕ್ಸ್​ ತರಕಾರಿ (ಕ್ಯಾರೆಟ್​, ಬೀನ್ಸ್, ಬಟಾಣಿ, ಟೊಮೇಟೊ )
1 ಚಮಚ ಧನಿಯ ಪುಡಿ 

ಮಾಡುವ ವಿಧಾನ

ಅಕ್ಕಿಯನ್ನು 2-3 ಬಾರಿ ಚೆನ್ನಾಗಿ ತೊಳೆದು ನೀರು ತೆಗೆದಿಡಿ. ನಂತರ ಒಂದು ಕುಕ್ಕರ್​ಗೆ ತುಪ್ಪ, ಜೀರಿಗೆ ಹಾಕಿ ಹುರಿದುಕೊಳ್ಳಿ. ನಂತರ ಅದಕ್ಕೆ ಅಕ್ಕಿ, ಅರಿಶಿನ ಪುಡಿ ಸೇರಿಸಿ ಮಿಕ್ಸ್​ ಮಾಡಿಕೊಂಡು ನೀರನ್ನು ಸೇರಿಸಿ ಅನ್ನ ಮಾಡಿಕೊಳ್ಳಿ.
ನಂತರ ಎಲ್ಲಾ ತರಕಾರಿಗಳನ್ನು ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಬಾಣಲೆಗೆ ತುಪ್ಪ ಬಿಸಿಮಾಡಿ, ಜೀರಿಗೆ ಹಾಕಿ ಸ್ವಲ್ಪ ಹುರಿಯಿರಿ. ಅದಕ್ಕೆ ಕರಿಬೇವು, ಅರಿಶಿಣ ಪುಡಿ, ಉಪ್ಪು, ಧನಿಯ ಸೇರಿಸಿ ಚೆನ್ನಾಗಿ ಬೆರೆಸಿಕೊಂಡು ಸ್ವಲ್ಪ ನೀರನ್ನು ಸೇರಿಸಿ ಮಧ್ಯಮ ಜ್ವಾಲೆಯಲ್ಲಿ 8-12 ನಿಮಿಷ ಬೇಯಿಸಿಕೊಂಡು ನಂತರ ಕೊತ್ತುಂಬರಿ ಸೊಪ್ಪು ಸೇರಿಸಿ ಮಿಕ್ಸ್​ ಮಾಡಿ ಗ್ರಹಣ ಬಿಟ್ಟ ನಂತರ ಸೇವಿಸಿ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net