ಹೆಸರುಬೇಳೆ ಮತ್ತು ಅಕ್ಕಿಯನ್ನು ಒಟ್ಟಿಗೆ 2-3 ಬಾರಿ ಚೆನ್ನಾಗಿ ತೊಳೆದು 15-20 ನಿಮಿಷ ನೆನೆಸಿ ಇಟ್ಟುಕೊಳ್ಳಿ. ನಂತರ ಒಂದು ಕುಕ್ಕರ್ಗೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ಇಂಗು, ಸಾಸಿವೆ, ಜೀರಿಗೆ ಹಾಕಿ ಸಿಡಿಯಲು ಬಿಡಿ ಇದಾದ ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸು, ಶುಂಠಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಟೊಮಾಟೋ ಸೇರಿಸಿ 1-2 ನಿಮಿಷ ಹುರಿಯಿರಿ. ನೆನೆಸಿದ ಬೇಳೆ-ಅಕ್ಕಿ ಹಾಕಿ, ಉಪ್ಪು ಸೇರಿಸಿ 1-2 ನಿಮಿಷ ಮಿಶ್ರಣ ಮಾಡಿ ಕೊತ್ತುಂಬರಿ ಸೇರಿಸಿ ಮುಚ್ಚಳ ಮುಚ್ಚಿ. 3-4 ಸೀಟಿ ಬರುವವರೆಗೂ ಬೇಯಿಸಿ. ನಂತರ ತುಪ್ಪ ಸೇರಿಸಿ ಊಟ ಮಾಡಿ (ಏಜೆನ್ಸೀಸ್).