ಸೋ ಸಿಂಪಲ್ ರಶ್ಮಿಕಾ ಮಂದಣ್ಣ ಡಯೆಟ್ ಚಾರ್ಟ್: 30ರ ಹರೆಯದಲ್ಲೂ ನಟಿ ಫಿಟ್ನೆಸ್ಗೆ ಈ ಆಹಾರ ಕ್ರಮವೇ ಕಾರಣ..Rashmika Mandanna Diet
Rashmika Mandanna Diet Food
Published on:
Copied
Follow Us
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಮಾತ್ರವಲ್ಲ. ಆಕೆ ಇಂಟರ್ನ್ಯಾಷನಲ್ ಮಟ್ಟದಲ್ಲಿಯೂ ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದಾರೆ. ಕಿರಿಕ್ ಪಾರ್ಟಿ ಮೂಲಕ 20 ನೇ ವಯಸ್ಸಿನಲ್ಲಿ ಸಿನಿ ರಂಗಕ್ಕೆ ಕಾಲಿಟ್ಟ ಅವರು ಗೀತಗೋವಿಂದಂ, ಅಂಜನೀ ಪುತ್ರ, ಪುಷ್ಪ: ದಿ ರೈಸ್ ಸಿನಿಮಾಗಳಂತೆ ಒಂದರ ಹಿಂದೆ ಒಂದಂತೆ ಸಾಕಷ್ಟು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಈಗಲೂ ಅವರ ಕಾಲ್ ಶೀಟ್ ಬ್ಯುಸಿ ಇರುತ್ತದೆ. ಇದರ ಮಧ್ಯೆ ಅವರು ಅವರ ಆರೋಗ್ಯ ಹೇಗೆ ಕಾಪಾಡಿಕೊಳ್ಳುತ್ತಾರೆ. ಫಿಟ್ನೆಸ್ ಶೆಡ್ಯೂಲ್ ಹೇಗಿರುತ್ತದೆ ಎನ್ನುವುದು ಎಲ್ಲರಿಗೂ ಕಾಡುವ ಒಂದು ಪ್ರಶ್ನೆ
ಮೂವತ್ತನೇ ವಸಂತಕ್ಕೆ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ ಇಂದಿಗೂ ಅವರ ಮೈಕಾಂತಿ ಸುಂದರವಾಗಿ ಹೊಂದಿರಲು, ಆರೋಗ್ಯವಾಗಿರಲು ಕಾರಣ ಅವರ ಆಹಾರದಲ್ಲಿರುವ ಸಮತೋಲನ. ಅವರ ಅಪ್ರತಿಮ ಸೌಂದರ್ಯಕ್ಕೆ, ಫಿಟ್ನೆಸ್ಗೆ ಕಡಿಮೆ ಇಲ್ಲ. ಅವರು ದಿನವಿಡೀ ಏನು ಸೇವಿಸುತ್ತಾರೆ ಎಂಬ ಕುತೂಹಲಕ್ಕೆ ಮಾಹಿತಿ ಇಲ್ಲಿದೆ.
ಮುಂಜಾನೆ ಎದ್ದ ತಕ್ಷಣ ನೀರು ಕುಡಿಯೋದು ಕಡ್ಡಾಯ
ರಶ್ಮಿಕಾ ಮಂದಣ್ಣ ಅವರ ದಿನ ಆರಂಭವಾಗುವುದು ನೀರು ಕುಡಿಯುವದರಿಂದ. ಬೆಳಿಗ್ಗೆ ಎದ್ದ ತಕ್ಷಣ ಅವರು ಸುಮಾರು ಒಂದು ಲೀಟರ್ ನೀರನ್ನು ಕುಡಿಯುತ್ತಾರೆ. ಇದರ ಜೊತೆಗೆ ಜೀರ್ಣಕ್ರಿಯೆ ಮತ್ತು ಮೆಟಬಾಲಿಸಂ ಹೆಚ್ಚಿಸಲು ಡಯಟೀಶಿಯನ್ ಸಲಹೆಯಂತೆ ಆಪಲ್ ಸೈಡರ್ ವಿನೆಗರ್ ಸೇವಿಸುತ್ತಾರೆ ಎಂದು ಪಿಂಕ್ವಿಲ್ಲಾಗೆ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮೊಟ್ಟೆ, ಓಟ್ಸ್ ಬ್ರೇಕ್ಫಾಸ್ಟ್
ರಶ್ಮಿಕಾ ಈ ಹಿಂದೆ ಅವಕಾಡೊ ಟೋಸ್ಟ್ ಇಷ್ಟಪಟ್ಟು ಸೇವಿಸುತ್ತಿದ್ದರು. ಆದರೆ, ಡಯಟಿಶೀಯನ್ ಸಲಹೆ ಮೇರೆಗೆ ಅದನ್ನು ಕಡಿಮೆ ಮಾಡಿ, ವ್ಯಾಯಾಮದ ನಂತರ ಮೊಟ್ಟೆಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಓಟ್ಸ್ ಮತ್ತು ಆಲ್ಮಂಡ್ ಬಟರ್ ಅನ್ನು ಕೂಡ ಉಪಾಹಾರವಾಗಿ ಸೇವಿಸುತ್ತಿರುವುದಾಗಿ ತಿಳಿಸಿದ್ದಾರೆ.
ಮಧ್ಯಾಹ್ನದ ಸಮಯದಲ್ಲಿ ರಶ್ಮಿಕಾ ದಕ್ಷಿಣ ಭಾರತೀಯ ಶೈಲಿಯ ಊಟವನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಅವರು ಅನ್ನವನ್ನು ಹೆಚ್ಚಾಗಿ ಸೇವಿಸುವುದಿಲ್ಲ. ಬದಲಾಗಿ ವಿವಿಧ ರೀತಿಯ ತರಕಾರಿ ಪಲ್ಯಗಳನ್ನು ಅಥವಾ ಕರಿಗಳನ್ನು ಒಟ್ಟಿಗೆ ಬೆರೆಸಿ ಸೇವಿಸುವುದು ಅವರಿಗೆ ಇಷ್ಟ. ಕೆಲವೊಮ್ಮೆ ಮಧ್ಯಾಹ್ನ ಮ್ಯಾಶ್ಡ್ ಪೊಟಾಟೊ ಕೂಡ ಅವರ ಊಟದ ಭಾಗವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಕೆಲಸದ ನಡುವೆ ರಶ್ಮಿಕಾ ಚಹಾ ಅಥವಾ ಐಸ್ಡ್ ಕಾಫಿಯನ್ನು ಕುಡಿಯುತ್ತಾರೆ. ಇದರೊಂದಿಗೆ ಸ್ನ್ಯಾಕ್ಸ್ ಆಗಿ ಸಿಹಿ ಗೆಣಸು ಸೇವಿಸುತ್ತಾರೆ ಇದು ಅವರ ಅಚ್ಚು ಮೆಚ್ಚು.
ರಾತ್ರಿ ಡಿನ್ನರ್ ಹೀಗಿರತ್ತೆ
ರಾತ್ರಿಯ ಸಮಯದಲ್ಲಿ ರಶ್ಮಿಕಾ ಆದಷ್ಟು ಹಗುರವಾದ ಆಹಾರವನ್ನು ಸೇವಿಸುತ್ತಾರೆ. ಶೂಟಿಂಗ್ ಮುಗಿಸಿ ಸ್ನೇಹಿತರೊಂದಿಗೆ ಹೊರಹೋದಾಗ ಮಾತ್ರ ಸ್ವಲ್ಪ ವಿಶೇಷ ಊಟ ಸವಿಯುತ್ತಾರೆ ಎಂದು ಪಿಂಕ್ವಿಲ್ಲಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರಿಗೆ ಕೆಲವು ತರಕಾರಿಗಳಿಂದ ಅಲರ್ಜಿ ಇದೆ. ಹೀಗಾಗಿ ಅವರು ತಮ್ಮ ಆಹಾರದಲ್ಲಿ ಟೊಮೆಟೊ, ಆಲೂಗಡ್ಡೆ, ಸೌತೆಕಾಯಿ ಮತ್ತು ಕ್ಯಾಪ್ಸಿಕಂ ಅನ್ನು ಬಳಸುವುದಿಲ್ಲ. ರಶ್ಮಿಕಾ, ಸಿಹಿ ಪದಾರ್ಥಗಳನ್ನು ಕಂಡರೆ ಅಪಾರ ಪ್ರೀತಿ ಹೊಂದಿದ್ದರೂ ಕಟ್ಟುನಿಟ್ಟಾದ ಡಯಟ್ ಪಾಲಿಸುತ್ತಾರೆ,(ಏಜೆನ್ಸೀಸ್)