ಪನೀರ್ ಪರೋಟ: ಪ್ರೀತಿಯಿಂದ ಮಾಡಿದ ಪರ್ಫೆಕ್ಟ್ ಬ್ರೇಕ್‌ಫಾಸ್ಟ್! Paneer Paratha

 Paneer Paratha (ಸಾಂದರ್ಭಿಕ ಚಿತ್ರ)
Paneer Paratha (ಸಾಂದರ್ಭಿಕ ಚಿತ್ರ)
Published on
Paneer Paratha: ತೂಕ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆ ಸುಲಭದ ಮಾತಲ್ಲ. ಅನೇಕರು ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೂ ತೂಕ ಹೆಚ್ಚಳವಾಗುವುದಿಲ್ಲ. ಇದರಿಂದ ಅನೇಕ ರೀತಿಯ ಔಷಧಗಳ ಮೊರೆಹೋಗುತ್ತಾರೆ. ಇವು ದೇಹಕ್ಕೆ ಅಪಾಯಕಾರಿಯಾಗಿದ್ದರು ಸೇವಿಸುತ್ತಾರೆ. ಹಾಗಾಗಿ ನೀವೇನಾದರೂ ತೂಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಪನೀರ್ ಪರಾಠ ಸೇವಿಸಿ. 
ಬೇಕಾಗುವ ಪದಾರ್ಥಗಳು
* 2 ಕಪ್ ಗೋಧಿ ಹಿಟ್ಟು 
* ½ ಚಮಚ ಉಪ್ಪು 
* 1 ಚಮಚ ತುಪ್ಪ ಅಥವಾ ಎಣ್ಣೆ 
* 200 ಗ್ರಾಂ ಪನೀರ್
* 1 ಈರುಳ್ಳಿ
* 1-2 ಹಸಿ ಮೆಣಸಿನಕಾಯಿ
* 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 
* ಕೊತ್ತಂಬರಿ ಸೊಪ್ಪು 
* 1 ಚಮಚ  ಮೆಣಸಿನ ಪುಡಿ 
*  1 ಚಮಚ ಧನಿಯಾ ಪುಡಿ
*  ½ ಚಮಚ ಜೀರಿಗೆ ಪುಡಿ
* ½ ಚಮಚ ಗರಮ್ ಮಸಾಲಾ
* ರುಚಿಗೆ ತಕ್ಕಷ್ಟು ಉಪ್ಪು 
* ನೀರು 

ಮಾಡುವ ವಿಧಾನ

ಮೊದಲು ಒಂದು ಬೌಲ್​ಗೆ ಗೋಧಿ ಹಿಟ್ಟು, ಉಪ್ಪು, 1 ಚಮಚ ತುಪ್ಪ ಹಾಕಿ ಕಲಸಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ಚಪಾತಿ ಹದಕ್ಕೆ ನಾದಿಕೊಂಡು 15-20 ನಿಮಿಷ ನೆನೆಯಲು ಬಿಡಿ. 
ಇದಾದ ಬಳಿಕ ಪನೀರ್​ ಅನ್ನು ಚೂರು ಮಾಡಿ, ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಎಲ್ಲಾ ಮಸಾಲೆ ಪುಡಿಗಳು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ , ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ. 
ಚಪಾತಿ ಹಿಟ್ಟನ್ನು ಚಿಕ್ಕ ಉಂಡೆಯನ್ನಾಗಿ ತೆಗೆದುಕೊಂಡು ಅದಕ್ಕೆ ರೆಡಿ ಮಾಡಿಟ್ಟುಕೊಂಡಿರುವ ಪನ್ನೀರ್​ ಮಿಶ್ರಣವನ್ನು ಸೇರಿಸಿ ಅಂಚುಗಳನ್ನು ಎಳೆದು ಮುಚ್ಚಿ ಉಂಡೆಯನ್ನಾಗಿ ಮಾಡಿಕೊಳ್ಳಿ. ನಂತರ ಇದನ್ನು ಸ್ವಲ್ಪ ಹಿಟ್ಟು ಉದುರಿಸಿಕೊಂಡು ಪರಾಠ ಹದಕ್ಕೆ ಉದ್ದಿಕೊಳ್ಳಿ. ನಂತರ, ಒಲೆಯ ಮೇಲೆ ತವ ಇಟ್ಟು ಮಾಡಿಟ್ಟುಕೊಂಡಿರುವ ಪರಾಠವನ್ನು ಹಂಚಿನ ಮೇಲೆ ಹಾಕಿ ಬೇಯಿಸಿಕೊಂಡು ಚಟ್ನಿ ಜೊತೆ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net