ಚಳಿಗಾಲದಲ್ಲಿ ಚರ್ಮ ಒಣಗಿದೆಯಾ? ಪೌಷ್ಟಿಕತಜ್ಞರು ಸೂಚಿಸಿದ ಸೂಪ್ ಕುಡಿದರೆ 7 ದಿನದಲ್ಲಿ ಬೇಬಿ ಸ್ಕಿನ್ ಗ್ಯಾರಂಟಿ! Glow boosting soup

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Glow boosting soup: ಚಳಿಗಾಲದ ಚಳಿಯಿಂದಾಗಿ ಚರ್ಮವು ಒಣಗುವುದು, ಮಂದವಾಗುವುದು ಮತ್ತು ಸಿಪ್ಪೆ ಸುಲಿದಂತೆ ಕಾಣಲು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ಅನೇಕರು ಮಾಯಿಶ್ಚರೈಸರ್‌ಗಳು ಮತ್ತು ಸಿರಮ್​ಗಳನ್ನು ಬಳಸಲು ಆರಂಭಿಸುತ್ತಾರೆ. ತಣ್ಣನೆಯ ಗಾಳಿ, ಒಳಾಂಗಣ ಹೀಟರ್‌ಗಳು ಮತ್ತು ಚಳಿಗಾಲದಲ್ಲಿ ಎಲ್ಲರೂ ಬಳಸುವ ಹೆಚ್ಚುವರಿ ಕಾಫಿ ಕೂಡ ಚರ್ಮದಿಂದ ತೇವಾಂಶವನ್ನು ಕಸಿದುಕೊಳ್ಳಬಹುದು.
ನಿಜವಾದ ಚರ್ಮದ ಹೊಳಪು ಒಳಗಿನಿಂದ ಬರುತ್ತದೆ. ನಾವು ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವಿಸುವುದರಿಂದ ಎಲ್ಲಾ ವ್ಯತ್ಯಾಸಗಳನ್ನು ಮಾಡುತ್ತದೆ. ಪೌಷ್ಟಿಕ ಮತ್ತು ಸಮೃದ್ಧ ಆರೈಕೆಯು ಕಾಂತಿಯನ್ನು ಬೆಂಬಲಿಸುತ್ತದೆ. ಹಾಗೆಯೇ ಚರ್ಮವು ಅದರ ಮೃದುವಾದ, ಆರೋಗ್ಯಕರ ಚಳಿಗಾಲದ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.
ಸಮಗ್ರ ಆರೋಗ್ಯ ಪೌಷ್ಟಿಕತಜ್ಞೆ ಮತ್ತು ಮಧುಮೇಹ ಶಿಕ್ಷಣ ತಜ್ಞೆ ಖುಷಿ ಛಾಬ್ರಾ, ಚಳಿಗಾಲದ ಚರ್ಮವನ್ನು ಸರಿಪಡಿಸಲು ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಕುಂಬಳಕಾಯಿ ಸೂಪೊಂದನ್ನು ಪರಿಚಯಿಸಿದ್ದಾರೆ. ಇದು ಚಳಿಗಾಲದಲ್ಲಿ ಚರ್ಮವನ್ನು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.

ಚರ್ಮಕ್ಕೆ ಕಾಂತಿ ನೀಡುವ ಸೂಪ್‌ಗೆ ಬೇಕಾಗುವ ಪದಾರ್ಥಗಳು

* ½ ಕಪ್ ಮಸೂರ್ ದಾಲ್ (ಕೆಂಪು ಬೇಳೆ)
* 1 ಕ್ಯಾರೆಟ್
* 1 ಕಪ್ ಕುಂಬಳಕಾಯಿ
* 3 ಕಪ್ ನೀರು
* ರುಚಿಗೆ ತಕ್ಕಷ್ಟು ಉಪ್ಪು
* 2 ಕರಿಮೆಣಸು
* 1 ಚಮಚ ತುಪ್ಪ
* ½ ಚಮಚ ಜೀರಿಗೆ
* 8 ಕರಿಬೇವು
* 1 ಇಂಚು ಶುಂಠಿ
* 4 ಬೆಳ್ಳುಳ್ಳಿ ಎಸಳು
* ಸ್ವಲ್ಪ ಬೆಣ್ಣೆ
* ಕೊತ್ತಂಬರಿ ಸೊಪ್ಪು

ಚರ್ಮಕ್ಕೆ ಕಾಂತಿ ನೀಡುವ ಸೂಪ್ ತಯಾರಿಸುವುದು ಹೇಗೆ?

ಕುಕ್ಕರ್​ಗೆ ಬೇಳೆ ಮತ್ತು ತರಕಾರಿಗಳನ್ನು ಉಪ್ಪು ಮತ್ತು ನೀರು ಸೇರಿಸಿ 3 ವಿಶಲ್​ ಹೊಡೆಸಿಕೊಳ್ಳಿ. ಈ ಮಿಶ್ರಣವನ್ನು ಮಿಕ್ಸಿ ಹಾಕಿ ರುಬ್ಬಿಕೊಳ್ಳಿ. ನಂತರ, ಒಂದು ಪ್ಯಾನ್​ಗೆ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಕರಿಬೇವು, ಜಜ್ಜಿದ ಶುಂಠಿ, ಬೆಳ್ಳುಳ್ಳಿಯನ್ನು ಚಿನ್ನದ ಬಣ್ಣಕ್ಕೆ ಬರುವವರೆಗೂ ಹುರಿಯಿರಿ. ನಂತರ ರೆಡಿಮಾಡಿಕೊಂಡಿರುವ ಸೂಪ್​ ಮೇಲೆ ಈ ಮಿಶ್ರಣ ಸುರಿಯಿರಿ. ಸ್ವಲ್ಪ ಬೆಣ್ಣೆ ಮತ್ತು ತಾಜಾ ಕೊತ್ತಂಬರಿ ಸೊಪ್ಪಿನೊಂದಿಗೆ ಸೇವಿಸಿರಿ.

ಈ ಸೂಪ್ ಚರ್ಮಕ್ಕೆ ಏಕೆ ಒಳ್ಳೆಯದು

ಕ್ಯಾರೆಟ್ ಮತ್ತು ಕುಂಬಳಕಾಯಿಗಳು ಬೀಟಾ-ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿವೆ. ಇದನ್ನು ಸೇವಿಸುವುದರಿಂದ ದೇಹವು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ. ಇದು ಪ್ರಕೃತಿಯ ಸೌಮ್ಯವಾದ ರೆಟಿನಾಲ್ ಆವೃತ್ತಿಯಾಗಿದೆ. ಮಸೂರ್ ಬೇಳೆ ಕಾಲಜನ್ ಅನ್ನು ಬೆಂಬಲಿಸುವ ಮೂಲಕ ಖನಿಜವಾದ ಸತುವನ್ನು ಒದಗಿಸುತ್ತದೆ. ತುಪ್ಪ ಮತ್ತು ಬೆಣ್ಣೆ ಒಣ ಚರ್ಮದಿಂದ ದೂರ ಇರುವಂತೆ ಮಾಡುತ್ತದೆ. ಆದರೆ, ಕರಿಬೇವು ನಿರೋಧಕ ಶಕ್ತಿ ಮತ್ತು ಉರಿಯೂತ ಗುಣಗಳನ್ನು ನಿವಾರಿಸುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net