ಅಮ್ಮನ ಕೈರುಚಿ ನೆನಪಿಸುವ ಸಾಂಬಾರ್.. ಈಗ ನಿಮ್ಮ ರೂಮಿನಲ್ಲೇ ಸುಲಭವಾಗಿ ಮಾಡಿ ನೋಡಿ! Vegetable samabar

 Vegetable samabar (ಸಾಂದರ್ಭಿಕ ಚಿತ್ರ)
Vegetable samabar (ಸಾಂದರ್ಭಿಕ ಚಿತ್ರ)
Published on
Vegetable samabar: ಬ್ಯಾಚುಲರ್‌ಗೆ ಅಡುಗೆ ಮಾಡುವುದೇ ಒಂದು ತಲೆನೋವು ಇದು ನೂರಕ್ಕೆ ನೂರು ಸತ್ಯವಾದ ಮಾತು ಎಂದರೆ ತಪ್ಪಾಗದು. ಹಾಗಾಗಿ ಅವರು ಆದಷ್ಟು ಹೋಟೆಲ್​ಗಳಿಗೆ ಅವಲಂಬಿಸಿರುತ್ತಾರೆ. ಕೆಲವೊಮ್ಮೆ ಅದೇ ಆಹಾರ ತಿಂದೂ ತಿಂದು ಬೇಸರ ಬಂದಿದ್ದರೆ, ಹಾಗೇ ಉಪವಾಸ ಮಲಗಿ ಬಿಡುತ್ತಾರೆ. ಹಾಗಾಗಿ ನೀವೇನಾದರೂ ಅಡುಗೆ ಮಾಡಿಕೊಂಡು ಸೇವಿಸಬೇಕೆಂದು ಅಂದುಕೊಂಡಿದ್ದರೆ, ದಿಢೀರ್ ಅಂತ ಈ ಸಾಂಬರ್​ ಮಾಡಿ ಸೇವಿಸಿ...

ಬೇಕಾಗುವ ಸಾಮಗ್ರಿಗಳು

* ½ ಕಪ್ ತೊಗರಿ ಬೇಳೆ
* 1-2 ಈರುಳ್ಳಿ
* 2 ಟೊಮ್ಯಾಟೋ
* 2-3 ಟೀಸ್ಪೂನ್ ಸಾಂಬಾರ್ ಪುಡಿ
* ಸ್ವಲ್ಪ ಹುಣಸೆ ಹಣ್ಣು
* ½ ಚಮಚ ಅರಿಶಿನ
* ಉಪ್ಪು ರುಚಿಗೆ ತಕ್ಕಷ್ಟು
* 4-5 ಕಪ್ ನೀರು
* 1 ಕಪ್​ ಮಿಕ್ಸ್​ ತರಕಾರಿಗಳು
* 2 ಟೀಸ್ಪೂನ್ ಎಣ್ಣೆ
* ಸಾಸಿವೆ, ಜೀರಿಗೆ, ಕರಿಬೇವು
* 1-2 ಒಣ ಮೆಣಸಿನಕಾಯಿ

ಮಾಡುವ ವಿಧಾನ

ಮೊದಲು ಒಂದು ಕುಕ್ಕರ್​ಗೆ ಬೇಳೆ, ಅರಿಶಿನ ಪುಡಿ, ಉಪ್ಪು, ಈರುಳ್ಳಿ, ಟೊಮ್ಯಾಟೋ, ತರಕಾರಿ (ಇದ್ದರೆ), ಸಾಂಬಾರ್ ಪುಡಿ, ಹುಳಿ ಸೇರಿಸಿ 2 ವಿಶಲ್​ ಹೊಡೆಸಿಕೊಳ್ಳಿ. ನಂತರ ಕುಕ್ಕರ್ ಬಾಯಿ ತೆರೆದು ಸಾಂಬಾರ್​ ಪದಾರ್ಥವನ್ನು ಸ್ವಲ್ಪ ಸ್ಮಾಶ್​ ಮಾಡಿಕೊಂಡು ಒಲೆಯ ಮೇಲಿಟ್ಟು ಬೇಯಿಸಿಕೊಳ್ಳಿ. ನಂತರ ಅದಕ್ಕೆ ನೀರು, ಉಪ್ಪು, ಬೆಲ್ಲ, ಸೇರಿಸಿರಿ.
ಇದಾದ ಬಳಿಕ ಚಿಕ್ಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಕರಿಬೇವು, ಒಣ ಮೆಣಸು, ಹಿಂಗು ಹಾಕಿ ಒಗ್ಗರಣೆ ಮಾಡಿ. ಸಾಂಬಾರ್​ ಮೇಲೆ ಸುರಿಯಿರಿ. ನಂತರ ಅನ್ನ ಮಾಡಿಕೊಂಡು ಸವಿಯಿರಿ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net