ಬಾಯಲ್ಲಿ ಇಟ್ಟರೆ ಕರಗುವ ಚೀಸೀ ಪಾಸ್ತಾ! ಸಂಜೆಯ ಹಸಿವಿಗೆ ಇದುವೇ ಬೆಸ್ಟ್ ಡಿಶ್! white sauce pasta

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
White sauce pasta: ವೈಟ್ ಸಾಸ್ ಪಾಸ್ತಾ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ರುಚಿಕರವಾದ ಇಟಾಲಿಯನ್-ಸ್ಟೈಲ್ ಡಿಷ್. ಇದು ಕ್ರೀಮಿ, ಚೀಸಿ ಮತ್ತು ತರಕಾರಿಗಳೊಂದಿಗೆ ತುಂಬಾ ಟೇಸ್ಟಿ ಆಗಿರುತ್ತದೆ. ಮಕ್ಕಳಿಗೂ ಇಷ್ಟವಾಗುವಂತಹ ರೆಸಿಪಿಯಾಗಿದೆ.

ಬೇಕಾಗುವ ಸಾಮಗ್ರಿಗಳು

* 1½ ಕಪ್ ಮ್ಯಾಕರೋನಿ ಪಾಸ್ತಾ
* 5-6 ಕಪ್ ನೀರು
* 1 ಟೀಸ್ಪೂನ್ ಉಪ್ಪು
* ½ ಟೀಸ್ಪೂನ್ ಎಣ್ಣೆ
* 2 ಟೇಬಲ್ ಸ್ಪೂನ್ ಬೆಣ್ಣೆ ವೈಟ್ ಸಾಸ್
* 2 ಟೇಬಲ್ ಸ್ಪೂನ್ ಮೈದಾ
* 2 ಕಪ್ ಹಾಲು
* ½ ಕಪ್ ಫ್ರೆಶ್ ಕ್ರೀಮ್
* ½ ಕಪ್ ಚೀಸ್
* 3-4 ಬೆಳ್ಳುಳ್ಳಿ
* ½ ಟೀಸ್ಪೂನ್ ಕಪ್ಪು ಮೆಣಸು ಪುಡಿ
* 1/2 ಕಪ್ ಮಿಕ್ಸ್​ ತರಕಾರಿ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ 5-6 ಕಪ್ ನೀರು ಕುದಿಸಿ. ಉಪ್ಪು ಮತ್ತು ಸ್ವಲ್ಪ ಎಣ್ಣೆ ಹಾಕಿರಿ ನಂತರ ಅದಕ್ಕೆ ಪಾಸ್ತಾ ಹಾಕಿ, 8-10 ನಿಮಿಷ ಬೇಯಿಸಿಕೊಳ್ಳಿ. ನಂತರ ನೀರು ಸೋಸಿ, ಕೋಲ್ಡ್ ವಾಟರ್‌ನಲ್ಲಿ ತೊಳೆದು ಇಟ್ಟುಕೊಳ್ಳಿ
ಇದಾದ ಬಳಿಕ ಒಂದು ಪ್ಯಾನ್​ಗೆ ½ ಟೇಬಲ್ ಸ್ಪೂನ್ ಬೆಣ್ಣೆ ಬಿಸಿ ಮಾಡಿ. ಬೆಳ್ಳುಳ್ಳಿ, ತರಕಾರಿಗಳನ್ನು ಹಾಕಿ 4-5 ನಿಮಿಷ ಮಿಕ್ಸ್​ ಮಾಡಿಕೊಳ್ಳಿ. ನಂತರ ಉಪ್ಪು, ಮೆಣಸು ಹಾಕಿ ಫ್ರೈ ಮಾಡಿ.
ಇನ್ನೊಂದು ಪ್ಯಾನ್‌ನಲ್ಲಿ 2 ಟೇಬಲ್ ಸ್ಪೂನ್ ಬೆಣ್ಣೆ ಬಿಸಿ ಮಾಡಿ. ಮೈದಾ ಹಾಕಿ ನಿರಂತರವಾಗಿ ವಿಸ್ಕ್ ಮಾಡಿ 1-2 ನಿಮಿಷ ಬೇಯಿಸಿರಿ. ಅದಕ್ಕೆ ನಿಧಾನವಾಗಿ ಹಾಲು ಸುರಿಯಿರಿ, ನಿರಂತರವಾಗಿ ವಿಸ್ಕ್ ಮಾಡಿ ಸಾಸ್ ದಪ್ಪವಾಗುವವರೆಗೆ ಮಧ್ಯಮ ಜ್ವಾಲೆಯಲ್ಲಿ ಬೇಯಿಸಿಕೊಳ್ಳಿ. ಇದಕ್ಕೆ ಕ್ರೀಮ್, ಚೀಸ್, ಉಪ್ಪು, ಮೆಣಸು, ಚಿಲ್ಲಿ ಫ್ಲೇಕ್ಸ್, ಚೆನ್ನಾಗಿ ಮಿಕ್ಸ್ ಮಾಡಿ. ಸಾಸ್ ಕ್ರೀಮಿ ಆದರೆ ಸಾಕಷ್ಟು ದಪ್ಪವಾಗಿರಲಿ.
ಬೇಯಿಸಿದ ಪಾಸ್ತಾ ಮತ್ತು ಸಾಟ್ ಮಾಡಿದ ತರಕಾರಿಗಳನ್ನು ಸಾಸ್‌ಗೆ ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ. ಸಾಸ್ ಪಾಸ್ತಾಕ್ಕೆ ಚೆನ್ನಾಗಿ ಹೊಂದಿಕೊಳ್ಳಲಿ. ಅಗತ್ಯವಿದ್ದರೆ, ಅದಕ್ಕೆ ಬಿಸಿ ನೀರು ಹಾಕಿಕೊಳ್ಳಿ ಮಿಕ್ಸ್​ ಮಾಡಿ. ಬಿಸಿಯಾಗಿರುವಾಗಲೇ ಸೇವಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net