ನಿಮ್ಮ ಬಾಯಿ ರುಚಿಯಾಗಿರೋ ಆಹಾರ ಕೇಳ್ತಿದಿಯಾ? ಹಾಗಿದ್ದರೆ, ಪಟಾ ಪಟ್​ ಮಾಡಿ ಈ ಸೂಪ್​! Recipe

Recipe
Recipe
Published on
Recipe : ಚಳಿಗಾಲ ಪ್ರಾರಂಭವಾಗಿದೆ ದೇಹ ಬಿಸಿ ಬಿಸಿಯಾದ ಆಹಾರವನ್ನು ಬಯಸುತ್ತಿದಿಯಾ? ದಿಢೀರ್​ ಅಂತ ಏನು ಮಾಡಬೇಕು ಅಂತ ಯೋಚನೆ ಬರೋದು ಸಹಜ. ಹಾಗಾಗಿ ಪಟಾ ಪಟ್​ ಅಂತ ಈ ಸೂಪ್​ ರೆಡಿ ಮಾಡಿ. ಅನ್ನ ಅಥವಾ ಇಡ್ಲಿಯೊಂದಿಗೆ ಸೇವಿಸಿ..
ಬೇಕಾಗುವ ಪದಾರ್ಥಗಳು
* 1 ಕಪ್​ ತೊಗರಿಬೇಳೆ
1 ಈರುಳ್ಳಿ
1 ಟೊಮೊಟೋ
2 ಮೆಣಸಿನಕಾಯಿ
ಹುಣಸೆಹಣ್ಣು
4 ಬೆಳ್ಳುಳ್ಳಿ
1 ಚಮಚ ಧನಿಯಾ
ಸ್ವಲ್ಪ ಖಾರದ ಪುಡಿ
ಖಾರದ ಪುಡಿ
ಉಪ್ಪು
ನೀರು

ಮಾಡುವ ವಿಧಾನ

ಮೊದಲು ಒಂದು ಕುಕ್ಕರ್​ಗೆ ತೊಗರಿಬೇಳೆ, ಕತ್ತರಿಸಿದ ಈರುಳ್ಳಿ, ಟೊಮಟೋ, ಮೆಣಸಿನಕಾಯಿ, ಬೆಳ್ಳುಳ್ಳಿ, ಧನಿಯಾ ಪುಡಿ, ಖಾರದ ಪುಡಿ, ಖಾರದ ಪುಡಿ, ಉಪ್ಪು ಮತ್ತು ನೀರನ್ನು ಹಾಕಿ 3 ವಿಶಲ್​ ಕೂಗಿಸಿಕೊಳ್ಳಿ. ನಂತರ ಬೇಯಿಸಿಕೊಂಡ ಈ ಪದಾರ್ಥವನ್ನು ಮಿಕ್ಸಿ ಮಾಡಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಮತ್ತೆ ಬೇಯಿಸಿಕೊಳ್ಳಿ. ನಂತರ ಒಂದು ಕಡಾಯಿಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಕೊತ್ತುಂಬರಿ ಸೊಪ್ಪನ್ನು ಹಾಕಿ ಬಾಡಿಸಿ. ಇದಾದ ಬಳಿಕ ಗ್ಯಾಸ್​ ಆಫ್​ ಮಾಡಿ ತಯಾರಿಸಿದ ಸಾಂಬಾರ್​ಗೆ ಇದನ್ನು ಸೇರಿಸಿ ಮಿಕ್ಸ್​ ಮಾಡಿ ಅನ್ನ ಅಥವಾ ಇಡ್ಲಿಯೊಂದಿಗೆ ಸೇರಿಸಿ ಸವಿಯಿರಿ (ಏಜೆನ್ಸೀಸ್​). 
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net