Gulab Jamun Ice cream: ಐಸ್‌ಕ್ರೀಮ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಳಿಗಾಲ ಆಗಲಿ, ಬೇಸಿಗೆಕಾಲ ಆಗಲಿ, ಮಳೆಗಾಲವಾಗಲಿ ಆದಷ್ಟು ಜನರು ಐಸ್ ಕ್ರೀಮ್ ತಿನ್ನಲು ಹಾತೊರೆಯುತ್ತಿರುತ್ತಾರೆ. ಗುಲಾಬ್ ಜಾಮೂನ್ ಐಸ್‌ಕ್ರೀಮ್ ಒಂದು ಸೂಪರ್ ರುಚಿಕರ ಫ್ಯೂಷನ್ ಡೆಸರ್ಟ್ ಆಗಿದ್ದು, ಇದನ್ನು ಮನೆಯಲ್ಲೇ ಐಸ್‌ಕ್ರೀಮ್ ಮೆಷೀನ್ ಇಲ್ಲದೆ ಮಾಡಬಹುದು. ಇದು ಎಗ್‌ಲೆಸ್, ಸರಳ ಮತ್ತು ಕೇವಲ 4-5 ಪದಾರ್ಥಗಳೊಂದಿಗೆ ತಯಾರಾಗುತ್ತದೆ. ಹಾಗಿದ್ದರೆ, ಇನ್ಯಾಕೆ ತಡ ಈಗಲೇ ಟ್ರೈ ಮಾಡಿ...