ಸಂಜೆ ಟೀ ಜೊತೆಗೆ ಸವಿಯಲು ಇಂದೇ ಮಾಡಿ ಆಲೂ ಕಟ್ಲೇಟ್! Potato cutlet

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Potato cutlet: ಸಂಜೆ ಟೀ ಜೊತೆಗೆ ಸವಿಯಲು ಅಥವಾ ಅತಿಥಿಗಳು ಬಂದಾಗ ಸ್ನ್ಯಾಕ್ಸ್ ಆಗಿ ನೀಡಲು ಆಲೂಗಡ್ಡೆ ಮತ್ತು ತರಕಾರಿ ಕಟ್ಲೆಟ್ (Veg Cutlet) ಅತ್ಯುತ್ತಮ ಆಯ್ಕೆ. ಇದನ್ನು ಹೊರಗಿನಿಂದ ಕುರುಕಲು ತಿಂಡಿಯಾಗಿ ಕೂಡಾ ಸೇವಿಸಬಹುದು. ಇದು ನೋಡಲು ಮೃದುವಾಗಿದ್ದರೂ ಟೇಸ್ಟ್​ ಬಹಳ ರುಚಿಯಾಗಿರುತ್ತದೆ. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೇ ಮಾಡಿ ಆಲೂ ಕಟ್ಲೆಟ್.

ಬೇಕಾಗುವ ಸಾಮಗ್ರಿಗಳು

* 3-4 ಆಲೂಗಡ್ಡೆ
* 1 ಕಪ್ ಮಿಶ್ರ ತರಕಾರಿಗಳು
* 1 ಈರುಳ್ಳಿ
* 2-3 ಹಸಿ ಮೆಣಸಿನಕಾಯಿ
* 1/2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* ½ ಚಮಚ ಗರಂ ಮಸಾಲ
* 1 ಚಮಚ ಮೆಣಸಿನ ಪುಡಿ
* ¼ ಚಮಚ ಅರಿಶಿನ
* ಲಿಂಬೆ ರಸ
* ಕೊತ್ತಂಬರಿ ಸೊಪ್ಪು
* 1 ಕಪ್ ಬ್ರೆಡ್ ಕ್ರಂಬ್ಸ್
* 2 ಟೇಬಲ್ ಚಮಚ ಮೈದಾ ಹಿಟ್ಟು
* ಉಪ್ಪು ರುಚಿಗೆ ತಕ್ಕಷ್ಟು
* ಎಣ್ಣೆ

ಮಾಡುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆ, ಮಿಶ್ರ ತರಕಾರಿಗಳು, ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿಕೊಳ್ಳಿ.
ಇದಕ್ಕೆ ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಅರಿಶಿನ, ಉಪ್ಪು ಮತ್ತು ಲಿಂಬೆ ರಸ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಸಣ್ಣ ಉಂಡೆಗಳನ್ನು ಮಾಡಿ ನಿಮಗೆ ಬೇಕಾದ ಆಕಾರಕ್ಕೆ ತಯಾರಿಸಿಕೊಳ್ಳಿ.
ತಯಾರಿಸಿದ ಕಟ್ಲೆಟ್‌ಗಳನ್ನು ಮೊದಲು ಮೈದಾ ಮಿಶ್ರಣದಲ್ಲಿ ಮುಳುಗಿಸಿ, ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ಹೊರಳಿಸಿ ಪಕ್ಕಕ್ಕಿಟ್ಟುಕೊಳ್ಳಿ. ಇದೀಗ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ ನಂತರ ಅದರಲ್ಲಿ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಹಾಕಿ ಕರಿದುಕೊಳ್ಳಿ. ನಂತರ ನಿಮಗಿಷ್ಟವಾದ ಸಾಸ್​ನೊಂದಿಗೆ ಸೇವಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net