ನೀರಿನೊಂದಿಗೆ ನಿಂಬೆರಸ ಬೆರೆಸಿ ಕುಡಿಯುತ್ತೀರಾ..? ಕೆಲವರ ಜೀವಕ್ಕೆ ಇದು ಅಪಾಯಕಾರಿಯಾಗಬಹುದು..ಎಚ್ಚರ! Lemon water

Lemonwater ಸಾಂದರ್ಭಿಕ ಚಿತ್ರ
Lemonwater ಸಾಂದರ್ಭಿಕ ಚಿತ್ರ
Published on
Lemon water: ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರು ನಿಂಬೆ ರಸದೊಂದಿಗೆ ಕುಡಿಯುವುದು ಒಂದು ಟ್ರೆಂಡ್ ಆಗಿ ಮಾರ್ಪಾಡಾಗಿಬಿಟ್ಟಿದೆ. ಇದನ್ನು ಜನರು ಆರೋಗ್ಯಕರ, ನಿರ್ವಿಶೀಕರಣ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪಾನೀಯವೆಂದು ಕರೆಯಲಾಗುತ್ತದೆ. ಅನೇಕರು ನಿಂಬೆ ನೀರು ದೇಹವನ್ನು ಚೈತನ್ಯಗೊಳಿಸುತ್ತದೆ ಎಂದು ತಿಳಿದು ಈ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.
ನಿಂಬೆ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುವುದರ ಜೊತೆಗೆ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಹಾಗೆಯೇ ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗೆಯೇ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
ಆದರೆ, ಈ ಆರೋಗ್ಯಕರ ಪಾನೀಯ ಎಲ್ಲರಿಗೂ ಸುರಕ್ಷಿತವಲ್ಲ ಎಂದು ಹಲವಾರು ಜನರಿಗೆ ತಿಳಿದಿರುವುದಿಲ್ಲ. ಕೆಲವರು ಈ ನೀರನ್ನು ಕುಡಿಯುವುದರಿಂದ ಎದೆಯುರಿ, ಆಮ್ಲೀಯತೆ ಮತ್ತು ಹಲ್ಲುನೋವು ಬರಬಹುದು. ಹಾಗಾಗಿ ಗ್ಯಾಸ್ಟ್ರಿಕ್ ಅಥವಾ ಹುಣ್ಣು ಸಮಸ್ಯೆ ಇರುವವರು ಆದಷ್ಟು ಈ ಪಾನೀಯವನ್ನು ಸೇವಿಸುವುವಾಗ ಜಾಗೃತವಾಗಿರಿ. ಹಾಗೆಯೇ ಸರಿಯಾದ ಪ್ರಮಾಣದಲ್ಲಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ನಿಂಬೆ ರಸವನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಸೇವಿಸುವ ಪ್ರಮಾಣ ಕಡಿಮೆಯಾಗಿರಬೇಕು. ಕೆಲವರು ಅದರ ರುಚಿ ಮತ್ತು ಆರೋಗ್ಯ ಪ್ರಯೋಜನಗಳನ್ನು ಹೆಚ್ಚಿಸಲು ಜೇನುತುಪ್ಪ ಅಥವಾ ಪುದೀನವನ್ನು ಸೇರಿಸುತ್ತಾರೆ. ಹಾಗಿದ್ದರೆ, ನಿಂಬೆ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನ ಮತ್ತು ಅನಾನುಕೂಲವನ್ನು ನೋಡೋಣ ಬನ್ನಿ....

ನಿಂಬೆ ನೀರನ್ನು ಕುಡಿಯುವುದರಿಂದಾಗುವ ಪ್ರಯೋಜನಗಳು

1. ನೀರಿನಾಂಶ ಕಾಪಾಡಲು ಸಹಾಯವಾಗುತ್ತದೆ

ಹೆಚ್ಚಿನ ಜನರು ಈ ನಿಂಬೆ ನೀರನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನಾಂಶ ಹೆಚ್ಚಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಹಾಗೆಯೇ ಅವರು ಈ ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ.

2. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು

ನಿಂಬೆಹಣ್ಣುಗಳು ವಿಟಮಿನ್ ಸಿ ಅನ್ನು ಹೊಂದಿರುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಕಬ್ಬಿಣದ ಹೀರುಕೊಳ್ಳುವಿಕೆಯನ್ನು ಮಾಡುತ್ತದೆ. ಇದರಿಂದ ಚರ್ಮವು ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

3. ಹೊಟ್ಟೆಗೆ ಒಳ್ಳೆಯದು

ನಿಂಬೆಹಣ್ಣಿನ ಸ್ವಲ್ಪ ಹುಳಿಯು ಹೊಟ್ಟೆಯ ರಸ ಮತ್ತು ಜೊಲ್ಲು ಸುರಿಸುವುದನ್ನು ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಹಗುರಗೊಳಿಸಿ, ಮಲಬದ್ಧತೆ, ಹೊಟ್ಟೆಯ ಉಬ್ಬರವನ್ನು ನಿಧಾಗೊಳಿಸುತ್ತದೆ.

ಈ ಜನರು ನಿಂಬೆ ನೀರನ್ನು ಅಪ್ಪಿತಪ್ಪಿಯೂ ಕುಡಿಯಬೇಡಿ

1. ಹೊಟ್ಟೆ ಮತ್ತು ಆಮ್ಲ ಸಂಬಂಧಿತ ಸಮಸ್ಯೆಗಳು

ಹೊಟ್ಟೆಯ ಸಮಸ್ಯೆ ಇರುವವರಿಗೆ ನಿಂಬೆ ನೀರು ಹಿಮ್ಮುಖ ಹರಿವಾಗಿರುತ್ತದೆ. ಇದು ಜಠರದಲ್ಲಿ ಉರಿಯುವುದು, ಹುಣ್ಣಾಗುವುದು, ಸೂಕ್ಷ್ಮ ಹೊಟ್ಟೆ ಇದ್ದವರಿಗೆ ಹಾನಿಯಾಗಬಹುದು. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸುವುದರಿಂದ ವಾಕರಿಕೆ, ವಾಂತಿ, ಹೊಟ್ಟೆ ಉಬ್ಬುವುದು ಉಂಟಾಗುತ್ತದೆ.

2. ಹಲ್ಲುಗಳ ಸಮಸ್ಯೆ ಇರುವವರು

ನಿಂಬೆಹಣ್ಣಿನಲ್ಲಿರುವ ಆಮ್ಲವು ಕ್ರಮೇಣ ಹಲ್ಲಿನ ದಂತಕವಚವನ್ನು ಸವೆಯುವಂತೆ ಮಾಡಿ, ಹಲ್ಲುಗಳು ಹುಳುಕಾಗುವಂತೆ ಮಾಡುತ್ತದೆ. ಇದರಿಂದ ಹೆಚ್ಚಿನ ನೋವನ್ನು ಅನುಭವಿಸಬೇಕಾಗುತ್ತದೆ.

3. ಬಾಯಿ ಹುಣ್ಣು

ನಿಮಗೆ ಆಗಾಗ್ಗೆ ಬಾಯಿ ಹುಣ್ಣು ಅಥವಾ ಕ್ಯಾಂಕರ್ ಹುಣ್ಣುಗಳು ಆಗುತ್ತಿದ್ದರೆ, ನಿಂಬೆ ನೀರನ್ನು ಕುಡಿಯಬೇಡಿ. ಇದು ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.

5. ತಲೆನೋವು ಅಥವಾ ಸಿಟ್ರಸ್ ಹಣ್ಣುಗಳಿಗೆ ಅಲರ್ಜಿ ಇರುವವರು

ನಿಂಬೆಹಣ್ಣಿನ ರಸವನ್ನು ಸೇವಿಸುವುದು ಕೆಲವೊಮ್ಮೆ ತಲೆನೋವು ಮತ್ತು ಮೈಗ್ರೇನ್​​ ಸಮಸ್ಯೆಯನ್ನು ಉಂಟು ಮಾಡುತ್ತದೆ. ಕೆಲವರಿಗೆ ಅಲರ್ಜಿ ಬರುವ ಸಾಧ್ಯತೆಯೂ ಹೆಚ್ಚಿರುತ್ತದೆ.

6. ಮೂತ್ರಪಿಂಡದ ಸಮಸ್ಯೆಗಳು

ನಿಂಬೆ ನೀರು ಸೌಮ್ಯವಾದ ಮೂತ್ರವರ್ಧಕವಾಗಿದ್ದು, ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಮೊದಲೇ ನಿರ್ಜಲೀಕರಣ ಅಥವಾ ಮೂತ್ರಪಿಂಡದ ಸಮಸ್ಯೆಗಳಿರುವ ಜನರು ಈ ನೀರನ್ನು ಕುಡಿಯುವ ಮುಂಚೆ ಜಾಗರೂಕರಾಗಿರುವುದು ಉತ್ತಮ.

ನಿಂಬೆ ನೀರನ್ನು ಸುರಕ್ಷಿತವಾಗಿ ಕುಡಿಯುವುದು ಹೇಗೆ?

1. ಒಂದು ಲೋಟ ನೀರಿಗೆ ಅರ್ಧ ನಿಂಬೆ ರಸವನ್ನು ಸೇರಿಸಿ ಕುಡಿಯಬೇಕು
2. ಆದಷ್ಟು ಖಾಲಿ ಹೊಟ್ಟೆಯಲ್ಲಿ ಕುಡಿಯುವುದನ್ನು ತಪ್ಪಿಸಬೇಕು
3. ನಿಂಬೆ ರಸವನ್ನು ಕುಡಿಯಲು ಸ್ಟ್ರಾ ಬಳಸಿ ಇದು ಹಲ್ಲುಗಳ ಸಂಪರ್ಕವನ್ನು ಕಡಿಮೆ ಮಾಡುತ್ತದೆ.
4. ನಿಂಬೆ ರಸವನ್ನು ಕುಡಿದ ನಂತರ ಶುದ್ಧ ನೀರಿನಿಂದ ಬಾಯಿಯನ್ನು ತೊಳೆಯಿರಿ. ಇಲ್ಲದಿದ್ದರೆ ಬ್ಯಾಕ್ಟೀರಿಯಾಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
5. ನಿಂಬೆ ರಸವನ್ನು ಕುಡಿದ ತಕ್ಷಣವೇ ಹಲ್ಲನ್ನು ಉಜ್ಜಬೇಡಿ. ಕನಿಷ್ಟ 30 ನಿಮಿಷಗಳ ನಂತರ ಹಲ್ಲು ಉಜ್ಜಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net