ಬ್ಯಾಚುಲರ್ಸ್​ಗಳಿಗಾಗಿ ದಿಢೀರ್​ ಖಿಚಡಿ... ಈಗ್ಲೇ ಟ್ರೈ ಮಾಡಿ ಟೇಸ್ಟ್ ಹೇಳಿ! Recipe

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Recipe:  ಇಂದಿನ ದಿನಗಳಲ್ಲಿ ಬ್ಯಾಚುಲರ್ಸ್​ಗಳಿಗೆ ಅಡುಗೆ ಮಾಡುವುದು ಒಂದು ಸವಾಲಾಗಿ ಮಾರ್ಪಟ್ಟಿದೆ. ಆದರಿಂದ ಪ್ರತಿನಿತ್ಯ ಹೊರಗೆ ತಿನ್ನುವ ಅಭ್ಯಾಸವನ್ನು ರೂಢಿಮಾಡಿಕೊಂಡಿರುತ್ತಾರೆ. ಈ ರೀತಿಯಾಗಿ ಹೊರಗಿನ ಆಹಾರವನ್ನು ಸೇವಿಸುವುದರಿಂದಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಯಾವುದೇ ಟೆಶ್ಯನ್​ ಇಲ್ಲದೇ, ಸುಲಭವಾಗಿ ದಿಡೀರ್​ ಈ ಖಿಚಡಿಯನ್ನು ಮಾಡಿ ಸೇವಿಸಿರಿ...

ಬೇಕಾಗುವ ಪದಾರ್ಥಗಳು

* ½ ಕಪ್ ಹೆಸರು ಬೇಳೆ  
½ ಕಪ್ ಅಕ್ಕಿ 
1 ಈರುಳ್ಳಿ 
1 ಟೊಮೇಟೋ 
2 ಹಸಿ ಮೆಣಸಿನಕಾಯಿ 
ಶುಂಠಿ 
2 ಚಮಚ ತುಪ್ಪ ಅಥವಾ ಎಣ್ಣೆ  
1 ಚಮಚ ಜೀರಿಗೆ 
½ ಚಮಚ ಅರಿಶಿನ 
ಉಪ್ಪು – ರುಚಿಗೆ ತಕ್ಕಷ್ಟು
3-4 ಕಪ್  ನೀರು 
*ಕೊತ್ತಂಬರಿ ಸೊಪ್ಪು 

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಹೆಸರು ಬೇಳೆ ಮತ್ತು ಅಕ್ಕಿಯನ್ನು ಒಟ್ಟಿಗೆ ತೊಳೆದು 10 ನಿಮಿಷ ನೆನೆಸಿ ಇಡಿ. ನಂತರ ಒಂದು ಕುಕ್ಕರ್​ಗೆ ತುಪ್ಪ ಹಾಕಿ ಬಿಸಿ ಮಾಡಿ ನಂತರ, ಜೀರಿಗೆ, ಸಾಸಿವೆ ಹಾಕಿ ಸಿಡಿಯಲು ಬಿಡಿ. ಇದಾದ ಬಳಿಕ ಈರುಳ್ಳಿ, ಹಸಿ ಮೆಣಸು, ಶುಂಠಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಟೊಮೇಟೋ ಸೇರಿಸಿ ಈ ಮಿಶ್ರಣಕ್ಕೆ ಅರಿಶಿನ ಮತ್ತು ಉಪ್ಪು ಸೇರಿಸಿ ಫ್ರೈ ಮಾಡಿ.
ನಂತರ ನೆನಸಿಟ್ಟುಕೊಂಡಿರುವ ಅಕ್ಕಿ ಮತ್ತು ಬೇಳೆಯನ್ನು ಹಾಕಿ ಅದಕ್ಕೆ 3-4 ಕಪ್ ನೀರು ಸೇರಿಸಿ ಮುಚ್ಚಳ ಹಾಕಿ 3-4 ವಿಸಿಲ್​ ಬರುವವರೆಗೂ ಬೇಯಿಸಿರಿ. ತಣ್ಣಗಾದ ನಂತರ ಕೊತ್ತುಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ. ತುಪ್ಪ ಸೇರಿಸಿ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net