ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಬೇಕೇ? ನಿಮ್ಮ ಡಯಟ್‌ನಲ್ಲಿರಲಿ ಈ ಮಲ್ಟಿಗ್ರೇನ್ ಪನೀರ್ ಸ್ಯಾಂಡ್‌ವಿಚ್.. Sandwitch

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Multigrain Paneer Sandwich: ತೂಕ ಹೆಚ್ಚಿಸಿಕೊಳ್ಳುವುದು ಸುಲಭವಾದ ಮಾತಲ್ಲ. ಅದಕ್ಕೆ ಶಿಸ್ತು ಬದ್ಧ ಕ್ರಮ ಅಗತ್ಯವಾಗಿರುತ್ತದೆ. ಅಂದಹಾಗೇ, ನೀವೇನಾದರೂ ತೂಕ ಹೆಚ್ಚಿಸಿಕೊಳ್ಳಬೇಕೆಂದಿದ್ದರೆ, ಈ ಮಲ್ಟಿಗ್ರೇನ್ ಪನೀರ್ ಸ್ಯಾಂಡ್‌ವಿಚ್ ಸೇವಿಸಿ. ಇದು ಒಂದು ಆರೋಗ್ಯಕರ, ಪ್ರೋಟೀನ್ ಸಮೃದ್ಧ ಮತ್ತು ರುಚಿಕರವಾದ ಬ್ರೇಕ್‌ಫಾಸ್ಟ್ ಆಗಿದೆ. ಇದರ ನಿಯಮಿತ ಸೇವನೆಯು ದೇಹಕ್ಕೆ ಫೈಬರ್​ ನೀಡುವುದರ ಜೊತೆಗೆ ಪ್ರೋಟೀನ್ ನಿಡುತ್ತದೆ. ಇದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.

ಬೇಕಾಗುವ ಪದಾರ್ಥಗಳು

* 6-8 ಮಲ್ಟಿಗ್ರೇನ್ ಬ್ರೆಡ್ ಸ್ಲೈಸ್‌ಗಳು
* 200 ಗ್ರಾಂ ಪನೀರ್
* 2-3 ಚಮಚ ಬೆಣ್ಣೆ ಅಥವಾ ತುಪ್ಪ
* 1 ಈರುಳ್ಳಿ
* 1 ಟೊಮೇಟೊ
* ½ ಕ್ಯಾಪ್ಸಿಕಮ್
* 2 ಚಮಚ ಕ್ಯಾರೆಟ್​
* 2-3 ಚಮಚ ಬೇಯಿಸಿದ ಕಾಳುಗಳು
* ಹಸಿ ಕೊತ್ತಂಬರಿ ಸೊಪ್ಪು
* ಉಪ್ಪು
* ½ ಚಮಚ ಕಾಳು ಮೆಣಸಿನ ಪುಡಿ
* ½ ಚಮಚ ಜೀರಿಗೆ ಪುಡಿ
* ½ ಚಮಚ ಚಾಟ್ ಮಸಾಲಾ
* ½ ಚಮಚ ಗರಮ್ ಮಸಾಲಾ
* ಟೊಮೇಟೊ ಸಾಸ್
* ನಿಂಬೆ ರಸ

ಮಾಡುವ ವಿಧಾನ

ಒಂದು ಬೌಲ್​ನಲ್ಲಿ ಪನೀರ್​ನ್ನು ತುರಿದಿಟ್ಟುಕೊಳ್ಳಿ. ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೇಟೊ, ಕ್ಯಾಪ್ಸಿಕಮ್, ಕ್ಯಾರೆಟ್​ , ಕಾರ್ನ್, ಕೊತ್ತಂಬರಿ ಸೇರಿಸಿ ಮಿಕ್ಸ್​ ಮಾಡಿಕೊಳ್ಳಿ. ಅದಕ್ಕೆ ಉಪ್ಪು, ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲಾ ಸ್ವಲ್ಪ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ.
ಈಗ ಬ್ರೆಡ್​ ತುಂಡುಗಳ ಮೇಲೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಹಚ್ಚಿರಿ. ಒಂದು ಸ್ಲೈಸ್ ಮೇಲೆ ಟೊಮೇಟೊ ಸಾಸ್ ಹಚ್ಚಿ ನಂತರ ಮಾಡಿಟ್ಟುಕೊಂಡಿರುವ ಪನೀರ್ ಫಿಲ್ಲಿಂಗ್ ಅದರ ಮೇಲಿಟ್ಟು ಮತ್ತೊಂದು ಬ್ರೆಡ್​ ಸ್ಲೈಸ್​ ಇಂದ ಮುಚ್ಚಿರಿ. ನಂತರ ಒಲೆಯ ಮೇಲೆ ಪ್ಯಾನ್​ ಇಟ್ಟು ಎರಡೂ ಬದಿಯನ್ನು 5 ನಿಮಿಷ ಬಿಸಿ ಮಾಡಿ ಸೇವಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net