ಕೇವಲ 10 ನಿಮಿಷದಲ್ಲಿ ಮಾಡಿ ಕ್ಯಾರೆಟ್ ಉಪ್ಪಿನಕಾಯಿ! ಕ್ಯಾರೆಟ್ ಇಷ್ಟವಿಲ್ಲದವರೂ ಇಷ್ಟಪಟ್ಟು ತಿನ್ನುತ್ತಾರೆ..Carrot Pickle Recipe

Carrot Pickle Recipe
Carrot Pickle Recipe
Published on

Carrot Pickle Recipe: ಭಾರತೀಯ ಊಟದ ತಟ್ಟೆಯಲ್ಲಿ ಉಪ್ಪಿನಕಾಯಿ ಇಲ್ಲದಿದ್ದರೆ ಆ ಊಟವೇ ಅಪೂರ್ಣ. ಅದರಲ್ಲೂ ಚಳಿಗಾಲದಲ್ಲಿ ಸಿಗುವ ತಾಜಾ ಕ್ಯಾರೆಟ್‌ಗಳಿಂದ ಮಾಡುವ ಉಪ್ಪಿನಕಾಯಿ ಬಾಯಿಗೆ ಹೊಸ ರುಚಿ ನೀಡುತ್ತದೆ. ಕ್ಯಾರೆಟ್ ಉಪ್ಪಿನಕಾಯಿ (Carrot Pickle) ಮಾಡುವುದು ತುಂಬಾ ಸುಲಭ ಮತ್ತು ಇದು ಅನ್ನ, ಚಪಾತಿ ಅಥವಾ ಪರೋಟ ಜೊತೆಗೆ ಸವಿಯಲು ಅತ್ಯಂತ ರುಚಿಕರವಾಗಿರುವ ಸೈಡ್ ಡಿಶ್ ಆಗಿದೆ.

ಬೇಕಾಗುವ ಸಾಮಗ್ರಿಗಳು:

  • ಕ್ಯಾರೆಟ್: 2-3 ಹಸಿಮೆಣಸಿನಕಾಯಿ 4-5
  • ಸಾಸಿವೆ: 2 ಚಮಚ
  • ಮೆಂತೆ ಪುಡಿ: ಅರ್ಧಚಮಚ (ಹುರಿದು ಪುಡಿ ಮಾಡಿದ್ದು)
  • ಅರಿಶಿನ ಪುಡಿ: ಅರ್ಧ ಚಮಚ
  • ಖಾರದ ಪುಡಿ: 1-2 ಚಮಚ
  • ಉಪ್ಪು: ರುಚಿಗೆ ತಕ್ಕಷ್ಟು
  • ಲಿಂಬೆ ರಸ: 2 ಚಮಚ (ಅಥವಾ ವಿನೆಗರ್)
  • ಸಾಸಿವೆ ಎಣ್ಣೆ ಅಥವಾ ಅಡುಗೆ ಎಣ್ಣೆ: 4-5 ಚಮಚ
  • ಒಗ್ಗರಣೆಗೆ: ಸಾಸಿವೆ, ಇಂಗು ಮತ್ತು ಕರಿಬೇವು

ಉಪ್ಪಿನಕಾಯಿ ತಯಾರಿಸುವ ವಿಧಾನ:

ಮೊದಲು ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು, ಮೇಲಿನ ಸಿಪ್ಪೆ ತೆಗೆದು ಉದ್ದುದ್ದಕ್ಕೆ ಸಣ್ಣಗೆ ಹೆಚ್ಚಿಕೊಳ್ಳಿ.
ಕ್ಯಾರೆಟ್ ತುಂಡುಗಳಲ್ಲಿ ತೇವಾಂಶ ಇರಬಾರದು, ಹಾಗಾಗಿ ಒಂದು ಬಟ್ಟೆಯ ಮೇಲೆ ಹರಡಿ 15-20 ನಿಮಿಷ ಒಣಗಲು ಬಿಡಿ.
ಒಂದು ದೊಡ್ಡ ಬಟ್ಟಲಿನಲ್ಲಿ ಹೆಚ್ಚಿದ ಕ್ಯಾರೆಟ್, ಹಸಿಮೆಣಸಿನಕಾಯಿ, ಸಾಸಿವೆ ಪುಡಿ, ಮೆಂತೆ ಪುಡಿ, ಅರಿಶಿನ, ಖಾರದ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ.
ಒಗ್ಗರಣೆ: ಒಂದು ಸಣ್ಣ ಪ್ಯಾನ್‌ನಲ್ಲಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಇಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ.
ಈ ಬಿಸಿ ಒಗ್ಗರಣೆಯನ್ನು ಕ್ಯಾರೆಟ್ ಮಿಶ್ರಣಕ್ಕೆ ಸುರಿದು ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯದಾಗಿ ಲಿಂಬೆ ರಸ ಅಥವಾ ವಿನೆಗರ್ ಸೇರಿಸಿ. ಇದು ಉಪ್ಪಿನಕಾಯಿಗೆ ಹುಳಿ ನೀಡುತ್ತದೆ ಮತ್ತು ಹೆಚ್ಚು ದಿನ ಹಾಳಾಗದಂತೆ ಕಾಪಾಡುತ್ತದೆ. ಇದನ್ನು ಮಾಡಿದ ತಕ್ಷಣವೇ ತಿನ್ನಬಹುದು, ಆದರೆ 1 ದಿನ ನೆನೆದರೆ ರುಚಿ ಇನ್ನು ಹೆಚ್ಚಾಗಿರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net