ಹೃದಯದ ಆರೋಗ್ಯಕ್ಕಾಗಿ ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ಎಣ್ಣೆ ಸೇವಿಸಬೇಕು? ಈ ಬಗ್ಗೆ ವೈದ್ಯರೇಳೋದೇನು..Oil use in food

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Oil use in food: ಭಾರತೀಯ ಪಾಕಪದ್ಧತಿಯಲ್ಲಿ ಮಸಾಲೆಗಳಿಲ್ಲದೇ ಅಡುಗೆಗಳೇ ಇಲ್ಲ. ಮಸಾಲೆಗಳಿಗೆ ಅವುಗಳ ಸುವಾಸನೆ ನೀಡಲು ಬಹಳ ಮುಖ್ಯವಾಗಿರುವುದೇ ಎಣ್ಣೆ. ಅಡುಗೆಗೆ ಅರಿಶಿನ, ಉಪ್ಪು ಮತ್ತು ಮೆಣಸಿನಕಾಯಿ ಹೇಗೆ ಮುಖ್ಯವೋ ಹಾಗೇ ಎಣ್ಣೆಯೂ ಕೂಡ ಪ್ರತಿಯೊಂದು ಆಹಾರಕ್ಕೂ ಅತ್ಯಗತ್ಯ.
ಸಾಸಿವೆ ಡ್ರೆಸ್ಸಿಂಗ್ ಆಗಿರಲಿ, ತರಕಾರಿ ಗ್ರೇವಿಯಾಗಿರಲಿ ಅಥವಾ ಗರಿಗರಿಯಾದ ರೊಟ್ಟಿಗಳಾಗಿರಲಿ ಎಣ್ಣೆ ಇಲ್ಲದೇ, ಭಾರತೀಯ ಆಹಾರ ಅಪೂರ್ಣ. ಆದರೆ, ಕಳೆದ ಕೆಲವು ವರ್ಷಗಳಲ್ಲಿ, ಅಡುಗೆ ಎಣ್ಣೆಯ ಕುರಿತು ಕೆಲವೊಂದು ಅಧ್ಯಯನಗಳು ಮಾಹಿತಿಯನ್ನು ನೀಡಿದೆ. ಅದರ ಪ್ರಕಾರ, ಅತಿಯಾದ ಎಣ್ಣೆ ಬಳಕೆ ಮತ್ತು ಸೇವನೆಯು ಹೃದಯದ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿಸಿದ್ದಾರೆ.
ನಾವು ಪ್ರತಿದಿನ ಬಳಸುವ ಎಣ್ಣೆಯ ಪ್ರಕಾರ, ಅದು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಫರಿದಾಬಾದ್‌ನ ಮಾರೆಂಗೊ ಏಷ್ಯಾ ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ (ಹೃದಯಶಾಸ್ತ್ರ) ಡಾ. ಗಜಿಂದರ್ ಕುಮಾರ್ ಗೋಯೆಲ್, ಎಣ್ಣೆಯನ್ನು ಯಾವಾಗಲೂ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂದು ವಿವರಿಸುತ್ತಾರೆ.
ಡಾ. ಗೋಯಲ್ ಅವರ ಪ್ರಕಾರ, ಆರೋಗ್ಯವಂತ ವ್ಯಕ್ತಿಯೊಬ್ಬರು ಪ್ರತಿದಿನ 3 ರಿಂದ 4 ಟೀ ಚಮಚಗಳಿಗಿಂತ ಹೆಚ್ಚು ಎಣ್ಣೆಯನ್ನು ಸೇವಿಸಬಾರದು ಎಂದು ತಿಳಿಸಿದ್ದಾರೆ. ಅಂದರೆ ದಿನಕ್ಕೆ ಸುಮಾರು 15-20 ಮಿಲಿ ಎಣ್ಣೆ, ತಿಂಗಳಿಗೆ 500 ರಿಂದ 600 ಮಿಲಿ ಎಣ್ಣೆ ಮಾತ್ರ ಸೇವಿಸಬೇಕು ಎಂದು ಹೇಳಿದ್ದಾರೆ.

ಹೃದಯಕ್ಕೆ ಯಾವ ಎಣ್ಣೆ ಒಳ್ಳೆಯದು?

ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಎಣ್ಣೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ವೈದ್ಯರ ಪ್ರಕಾರ, ಆ ಎಣ್ಣೆಗಳಲ್ಲಿ ಸಾಸಿವೆ ಎಣ್ಣೆ, ಸೋಯಾಬೀನ್ ಎಣ್ಣೆ, ಆಲಿವ್ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಆಹಾರಕ್ಕೆ ಬಳಸಬೇಕು ಎಂದು ಹೇಳುತ್ತಾರೆ. ಆದರೆ, ಹೃದಯದ ಆರೋಗ್ಯಕ್ಕೆ ಸಾಸಿವೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಆಲಿವ್ ಎಣ್ಣೆ ಬಳಸುವುದು ಉತ್ತಮ ಆಯ್ಕೆ ಎಂದು ಹೇಳುತ್ತಾರೆ.

ಸಾಸಿವೆ ಎಣ್ಣೆ ಏಕೆ ಉತ್ತಮ?

ಸಾಸಿವೆ ಎಣ್ಣೆ, ವಿಶೇಷವಾಗಿ ಕಚ್ಚಾ ಎಣ್ಣೆಯು ಆರೋಗ್ಯಕ್ಕೆ ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಇದು ಸುಮಾರು 250°C ಹೊಗೆ ಬಿಂದುವನ್ನು ಹೊಂದಿರುವುದರಿಂದ ಇದು ಬೇಗನೆ ಉರಿಯುವುದನ್ನು ತಡೆಯುತ್ತದೆ. ಜೊತೆಗೆ ಪೋಷಕಾಂಶಗಳನ್ನು ಸಂರಕ್ಷಿಸುತ್ತದೆ.
ಸೂರ್ಯಕಾಂತಿ ಎಣ್ಣೆ ಇದರ ಹೊಗೆ ಬಿಂದು ಹೆಚ್ಚಿರುವುದರಿಂದ, ಇದು ಕರಿಯಲು ಮತ್ತು ಹೆಚ್ಚಿನ ಉರಿಯಲ್ಲಿ ಮಾಡುವ ಅಡುಗೆಗೆ ಅತ್ಯಂತ ಸೂಕ್ತವಾಗಿದೆ. ಇದರಲ್ಲಿರುವ ವಿಟಮಿನ್ E ಮತ್ತು ಕಡಿಮೆ ಸ್ಯಾಚುರೇಟೆಡ್ ಫ್ಯಾಟ್ ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ.
ಆದರೆ, ಆಲಿವ್ ಎಣ್ಣೆಯಲ್ಲಿ ಹೊಗೆ ಬಿಂದು ಕಡಿಮೆ ಇದ್ದು, ಅತಿಯಾಗಿ ಕಾಯಿಸಿದಾಗ ಇದು ತನ್ನ ಪೌಷ್ಟಿಕಾಂಶಗಳನ್ನು ಕಳೆದುಕೊಂಡು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇದು ಕೇವಲ ಸಲಾಡ್​ಗಳಲ್ಲಿ ಬಳಸಲು ಸಾಧ್ಯವಾಗಿರುತ್ತದೆ.

ಸಂಸ್ಕರಿಸಿದ ಎಣ್ಣೆಯನ್ನು ತಪ್ಪಿಸಿ

ಮನೆಯಲ್ಲಿ ಸಂಸ್ಕರಿಸಿದ ಅಡುಗೆ ಎಣ್ಣೆಗಳನ್ನು ತಪ್ಪಿಸುವುದು ಉತ್ತಮ. ಏಕೆಂದರೆ, ಈ ಎಣ್ಣೆಗಳು ಹೆಚ್ಚಿನ ತಾಪಮಾನ ಮತ್ತು ರಾಸಾಯನಿಕ ಸಂಸ್ಕರಣೆಗೆ ಒಳಗಾಗುತ್ತವೆ. ಇವು ವಿಷಕಾರಿ ಸಂಯುಕ್ತಗಳ ರಚನೆಗೆ ಕಾರಣವಾಗಬಹುದು. ದೀರ್ಘಕಾಲದವರೆಗೆ ಇವುಗಳನ್ನು ಬಳಸುವುದರಿಂದ ಕೊಲೆಸ್ಟ್ರಾಲ್​ ಹೆಚ್ಚಿಸಿ ಹೃದಯದ ಆರೋಗ್ಯವನ್ನು ಹದಗೆಡಿಸುತ್ತದೆ.

ಹೆಚ್ಚು ಎಣ್ಣೆ ಸೇವಿಸುವುದರಿಂದಾಗುವ ಅಪಾಯಗಳೇನು?

ಸಾಂದರ್ಭಿಕವಾಗಿ ಹುರಿದ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೃದಯಕ್ಕೆ ತಕ್ಷಣದ ಹಾನಿಯಾಗದೆ ಇರಬಹುದು. ಆದರೆ, ನೀವು ಪ್ರತಿದಿನ ಡೀಪ್​ ಫ್ರೈ ಮಾಡಿ ಆಹಾರವನ್ನು ಸೇವಿಸುವುದರಿಂದ ನಿಮ್ಮ ಅಪಧಮನಿಗಳಲ್ಲಿ ಕೊಬ್ಬಿನ ಶೇಖರಣೆ, ದೀರ್ಘಕಾಲದ ಉರಿಯೂತ, ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗಬಹುದು. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ದುಪ್ಪಟ್ಟಾಗುತ್ತದೆ.
ಆರೋಗ್ಯವಂತ ವ್ಯಕ್ತಿಯು ಸುರಕ್ಷಿತ ಪ್ರಮಾಣದಲ್ಲಿ ಎಣ್ಣೆಯನ್ನು ಬಳಕೆ ಮಾಡದಿದ್ದರೆ, ನಿಮ್ಮ ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಹೃದಯ ಕಾಯಿಲೆ ತುತ್ತಾಗುತ್ತಾರೆ. ಹಾಗಾಗಿ ನೀವೇನಾದರೂ ಈ ಸಮಸ್ಯೆಯಿಂದ ಹೊರ ಬರಬೇಕೆಂದು ಪ್ರಯತ್ನಿಸುತ್ತಿದ್ದರೆ, ಸರಿಯಾದ ಪ್ರಮಾಣದಲ್ಲಿ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಿ.

ಹೃದಯ ರೋಗಿಗಳಿಗೆ ನಿಯಮಗಳು

ಡಾ. ಗೋಯಲ್ ಅವರ ಪ್ರಕಾರ, ಯಾವ ವ್ಯಕ್ತಿ ಹೃದಯದ ಸಮಸ್ಯೆಯಿಂದ ಬಳಲುತ್ತಿರುತ್ತಾರೋ, ಅವರು ತಿಂಗಳಿಗೆ 750 ಮಿಲಿಗಿಂತ ಹೆಚ್ಚು ಎಣ್ಣೆಯನ್ನು ಸೇವಿಸಬಾರದು. ರುಚಿ ಮತ್ತು ಪೋಷಣೆಯನ್ನು ಸಮತೋಲನಗೊಳಿಸಲು, ಅವರು ಶೇ. 80 ರಷ್ಟು ಸಾಸಿವೆ ಎಣ್ಣೆ ಮತ್ತು ಶೇ. 20 ರಷ್ಟು ತುಪ್ಪ ಮತ್ತು ಬೆಣ್ಣೆ ಸೇವಿಸಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net