ಬೇಯಿಸಿದ ಮೊಟ್ಟೆ ಫ್ರಿಜ್‌ನಲ್ಲಿಟ್ಟರೆ ಎಷ್ಟು ದಿನ ಬಾಳಿಕೆ ಬರುತ್ತೆ? ಈ ಸತ್ಯ ತಿಳಿಯದಿದ್ದರೆ ಅಪಾಯ ಗ್ಯಾರಂಟಿ! Boiled eggs

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮೊಟ್ಟೆಗಳು ಪ್ರೊಟೀನ್​​ನ ಅತ್ಯುತ್ತಮ ಮೂಲವಾಗಿವೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ಮಾಹಿತಿ
  • ಚಳಿಗಾಲದಲ್ಲಿ ಬೇಯಿಸದ ಮೊಟ್ಟೆಗಳು ಸಾಮಾನ್ಯ ಆಹಾರವಾಗಿದ್ದರು ಸುರಕ್ಷತೆ ಮುಖ್ಯ
  • ಬಿಡುವಿಲ್ಲದ ಜೀವನಶೈಲಿ, ಜನರು ಬೇಯಿಸದ ಮೊಟ್ಟೆಗಳನ್ನು ಫ್ರಿಜ್​ನಲ್ಲಿ ಸಂಗ್ರಹಿಸುತ್ತಾರೆ
  • ಬೇಯಿಸದ ಮೊಟ್ಟೆ ರೆಫ್ರಿಜರೇಟರ್​ನಲ್ಲಿ ಇಟ್ಟರೆ, ಎಷ್ಟು ಕಾಲ ತಾಜಾವಾಗುತ್ತವೆ?
Boiled eggs: ಮೊಟ್ಟೆಗಳು ಪ್ರೊಟೀನ್​​ನ ಅತ್ಯುತ್ತಮ ಮೂಲವಾಗಿವೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ಮಾಹಿತಿ. ಈ ಕಾರಣಕ್ಕಾಗಿ ಅನೇಕರು ಈ ಆಹಾರವನ್ನು ಇಷ್ಟಪಟ್ಟು ಸೇವಿಸುತ್ತಾರೆ. ಅಂದಹಾಗೇ, ಚಳಿಗಾಲದಲ್ಲಿ ಬೇಯಿಸದ ಮೊಟ್ಟೆಗಳು ಸಾಮಾನ್ಯ ಆಹಾರವಾಗಿದ್ದರು, ಅವುಗಳ ಸುರಕ್ಷತೆ ಇಂದು ಬಹಳ ಮುಖ್ಯವಾಗಿದೆ.
ಬಿಡುವಿಲ್ಲದ ಜೀವನಶೈಲಿ, ಒತ್ತಡದಿಂದಾಗಿ ಜನರು ಬೇಯಿಸದ ಮೊಟ್ಟೆಗಳನ್ನು ಫ್ರಿಜ್​ನಲ್ಲಿ ಸಂಗ್ರಹಿಸುತ್ತಾರೆ. ಆದರೆ, ಬೇಯಿಸದ ಮೊಟ್ಟೆ ರೆಫ್ರಿಜರೇಟರ್​ನಲ್ಲಿ ಇಟ್ಟರೆ, ಎಷ್ಟು ಕಾಲ ತಾಜಾವಾಗುತ್ತವೆ. ಅವು ಕೆಡುತ್ತವೆಯೋ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿರುತ್ತದೆ. ಅವೆಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಸಂಪೂರ್ಣ ಮಾಹಿತಿ.
ನೀವು ಮಾಡುವ ಒಂದು ತಪ್ಪು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅಂದಹಾಗೇ, ನೀವೇನಾದರೂ, ಮೊಟ್ಟೆಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ, ಕೆಟ್ಟ ಬ್ಯಾಕ್ಟೀರಿಯಾಗಳು ನಿಮ್ಮ ದೇಹದೊಳಗೆ ಮನೆಮಾಡಲು ಪ್ರಾರಂಭಿಸುತ್ತವೆ. ಆದಾಗ್ಯೂ, ನಿಮ್ಮ ಮೊಟ್ಟೆಯ ಆಹಾರವನ್ನು ಒಂದು ವಾರ ಪೂರ್ತಿ ತಾಜಾವಾಗಿಡಲು ನೀವು ಬಳಸಬಹುದಾದ ಕೆಲವು ತಂತ್ರಗಳಿವೆ.

ಬೇಯಿಸಿದ ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿ ಎಷ್ಟು ಹೊತ್ತು ಇಡಬಹುದು?

ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (USDA) ಪ್ರಕಾರ, ಸಿಪ್ಪೆ ತೆಗೆದ ಅಥವಾ ಸಿಪ್ಪೆ ಸಹಿತ ಬೇಯಿಸಿದ ಮೊಟ್ಟೆಗಳನ್ನು ಫ್ರಿಜ್ಡ್​ನಲ್ಲಿ ಇಟ್ಟು 7 ದಿನಗಳವರೆಗೆ ಸಂಗ್ರಹಿಸಬಹುದು. ಹಾಗೆಯೇ ಮೊಟ್ಟೆಯನ್ನು ಬೇಯಿಸಿ 2 ಗಂಟೆಯೊಳಗೆ ಗಾಳಿ ಆಡುವ ಪ್ರದೇಶದಲ್ಲಿ ಇಡಬಾರದು ಎಂದು ವರದಿ ಮಾಡಿದೆ.

ಬೇಯಿಸಿದ ಮೊಟ್ಟೆಗಳು ಹೇಗೆ ಕೆಟ್ಟದಾಗುತ್ತವೆ?

ಕುದಿಸಿದ ನಂತರ, ಮೊಟ್ಟೆಯ ಹೊರಭಾಗದಲ್ಲಿರುವ ಸಿಪ್ಪೆಯನ್ನು ತೆಗೆಯಲಾಗುತ್ತದೆ. ಇದು ಬ್ಯಾಕ್ಟೀರಿಯಾಗಳು ಮೊಟ್ಟೆಗಳ ಒಳಗೆ ಪ್ರವೇಶಿಸುವಂತೆ ಮಾಡುತ್ತದೆ. ಹಾಗಾಗಿ ಕೋಣೆಯ ಉಷ್ಣಾಂಶದಲ್ಲಿ ಮೊಟ್ಟೆಗಳನ್ನು ಹೆಚ್ಚು ಹೊತ್ತು ಬಿಟ್ಟರೆ, ಅವು ಬೇಗನೆ ಹಾಳಾಗುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ಈ ಅಪಾಯ ಕಡಿಮೆಯಾಗಿರುತ್ತದೆ. ಅರ್ಧ ಬೇಯಿಸಿದ ಮೊಟ್ಟೆಗಳು ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಅವುಗಳನ್ನು ಬೇಗನೇ ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
ಮೊಟ್ಟೆಗಳನ್ನು ಕುದಿಸಿದ ನಂತರ ಹೆಚ್ಚು ಸಮಯ ಹೊರಗೆ ತೆರೆದಿಡಿರುವುದು ತಪ್ಪು ಮಾರ್ಗ ಎಂದು ಪರಿಗಣಿಸಲಾಗುತ್ತದೆ. ಮೊಟ್ಟೆಗಳನ್ನು ಕುದಿಸಿದ ತಕ್ಷಣ ಅವುಗಳನ್ನು ತಣ್ಣೀರಿನಲ್ಲಿ ಮುಳುಗಿಸಿ. ನಂತರ ಎರಡು ಗಂಟೆಗಳ ಒಳಗೆ ರೆಫ್ರಿಜರೇಟರ್‌ನಲ್ಲಿ ಇಡಬೇಕು. ಹೊರಗಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದರೆ, ಮೊಟ್ಟೆಗಳನ್ನು ಒಂದು ಗಂಟೆ ಒಳಗೆ ಫ್ರಿಜ್ಡ್​ನಲ್ಲಿ ಇಡಬೇಕು. ಇಲ್ಲದಿದ್ದರೆ, ಮೊಟ್ಟೆಗಳ ಒಳಗೆ ಬ್ಯಾಕ್ಟೀರಿಯಾಗಳು ಸೇರ್ಪಡೆಗೊಳ್ಳಬಹುದು.

ಬೇಯಿಸಿದ ಮೊಟ್ಟೆಗಳನ್ನು ಸಂಗ್ರಹಿಸಲು ಸರಿಯಾದ ಮಾರ್ಗ

1. ಮೊಟ್ಟೆಗಳನ್ನು ಕುದಿಸಿದ ನಂತರ, ಅವುಗಳನ್ನು ತಣ್ಣೀರಿನಲ್ಲಿ ಮುಳುಗಿಸಿ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ
2. ನೀವು ತಿನ್ನಲು ಸಿದ್ಧವಾಗುವವರೆಗೆ ಚಿಪ್ಪನ್ನು ತೆಗೆಯಬೇಡಿ. ಚಿಪ್ಪು ಮೊಟ್ಟೆಗೆ ನೈಸರ್ಗಿಕ ರಕ್ಷಣೆ ನೀಡುತ್ತದೆ. ಇದನ್ನು ಬೇರ್ಪಡಿಸಿದರೆ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ
3. ಬೇಯಿಸಿದ ಮೊಟ್ಟೆಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸುವುದರಿಂದ ಮೊಟ್ಟೆಗಳೊಳಗೆ ತೇವಾಂಶ ಕಳೆದುಕೊಳ್ಲುವುದಿಲ್ಲ
4. ತಾಪಮಾನದಲ್ಲಿ ಆಗಾಗ್ಗೆ ಏರಿಳಿತಗಳಿರುವುದರಿಂದ ರೆಫ್ರಿಜರೇಟರ್ ಬಾಗಿಲಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಬೇಡಿ
5. ಮೊಟ್ಟೆಗಳು ಎಷ್ಟು ಹಳೆಯವು ಎಂದು ತಿಳಿದುಕೊಳ್ಳಲು ಒಂದು ಕಡೆ ಬರೆದುಕೊಳ್ಳಿ

ಹಾಳಾದ ಬೇಯಿಸಿದ ಮೊಟ್ಟೆಗಳನ್ನು ಹೇಗೆ ಗುರುತಿಸುವುದು?

ಬೇಯಿಸಿದ ಮೊಟ್ಟೆ ಹಾಳಾಗಿದೆಯೇ ಎಂದು ಗುರುತಿಸುವಾಗ ಜನರು ಸಾಮಾನ್ಯವಾಗಿ ತಪ್ಪು ಮಾಡುತ್ತಾರೆ. ಮೊಟ್ಟೆಯು ವಾಸನೆ ಬಂದರೆ, ಬಣ್ಣ ಬದಲಾವಣೆ, ಮೊಟ್ಟೆಯ ಹೊರ ಪದರ ಲೋಳೆಯಾಗಿದ್ದರೆ, ಮೊಟ್ಟೆ ಹಾಳಾಗಿದೆ ಎಂದು ತಿಳಿದುಬರುತ್ತದೆ. ಈ ರೀತಿಯ ಮೊಟ್ಟೆಯನ್ನು ತಿನ್ನುವುದರಿಂದ ದೇಹಕ್ಕೆ ಹಾನಿಯಾಗಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net