ಮಲಗುವ ಮುನ್ನ ಹಾಲು-ತುಪ್ಪ ಸೇವಿಸುತ್ತೀರಾ? ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ನೋಡಿ..ghee

ghee
ghee
Published on
ಬೆಂಗಳೂರು: ತುಪ್ಪವು ( ghee) ನಮ್ಮ ಭಾರತೀಯ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಸಾವಿರಾರು ವರ್ಷಗಳಿಂದ ಅಡುಗೆ ಮತ್ತು ಔಷಧದಲ್ಲಿ ತುಪ್ಪವನ್ನು ಬಳಸಲಾಗುತ್ತಿದೆ. ನಾವು ಆಹಾರದೊಂದಿಗೆ ತುಪ್ಪವನ್ನು ತಿನ್ನುತ್ತೇವೆ. ಆದಾಗ್ಯೂ, ಆಯುರ್ವೇದ ವೈದ್ಯರು ಬೆಚ್ಚಗಿನ ಹಾಲಿನೊಂದಿಗೆ ತುಪ್ಪವನ್ನು ಬೆರೆಸಿದರೆ ಇನ್ನೂ ಉತ್ತಮ ಎಂದು ಹೇಳುತ್ತಾರೆ.

ರಾತ್ರಿ ಹಾಲು-ತುಪ್ಪ ಕುಡಿಯುವುದರ ಪ್ರಯೋಜನಗಳು:

ಜೀರ್ಣಕ್ರಿಯೆ ಸುಧಾರಣೆ: ತುಪ್ಪವು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ರಾತ್ರಿ ಇದನ್ನು ಕುಡಿಯುವುದರಿಂದ ಬೆಳಿಗ್ಗೆ ಮಲವಿಸರ್ಜನೆ ಸುಲಭವಾಗಿ ಆಗುತ್ತದೆ.
ಗಾಢ ನಿದ್ರೆ: ಹಾಲು ಮತ್ತು ತುಪ್ಪದ ಮಿಶ್ರಣವು ನರಮಂಡಲವನ್ನು ಶಾಂತಗೊಳಿಸುತ್ತದೆ, ಇದು ಒತ್ತಡವನ್ನು ಕಡಿಮೆ ಮಾಡಿ ಆಳವಾದ ನಿದ್ರೆ ಬರಲು ಸಹಾಯ ಮಾಡುತ್ತದೆ.
ಚರ್ಮದ ಕಾಂತಿ: ಇದು ದೇಹವನ್ನು ಒಳಗಿನಿಂದ ಹೈಡ್ರೇಟ್ ಮಾಡುತ್ತದೆ, ಇದರಿಂದ ಚರ್ಮವು ಮೃದುವಾಗುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ಪಡೆಯುತ್ತದೆ.
ಮೂಳೆಗಳ ಬಲವರ್ಧನೆ: ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ತುಪ್ಪದಲ್ಲಿರುವ ವಿಟಮಿನ್ K2 ಸೇರಿ ಮೂಳೆಗಳನ್ನು ಬಲಪಡಿಸುತ್ತವೆ ಮತ್ತು ಕೀಲು ನೋವನ್ನು ಕಡಿಮೆ ಮಾಡುತ್ತವೆ.
ರೋಗನಿರೋಧಕ ಶಕ್ತಿ: ಈ ಮಿಶ್ರಣವು ದೇಹದ ಮೆಟಬಾಲಿಸಂ ಹೆಚ್ಚಿಸಿ, ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.

ಹೇಗೆ ಸೇವಿಸಬೇಕು?

ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ 1 ಚಮಚ ಶುದ್ಧ ಹಸುವಿನ ತುಪ್ಪವನ್ನು ಬೆರೆಸಿ, ಮಲಗುವ 30 ನಿಮಿಷಗಳ ಮೊದಲು ಕುಡಿಯುವುದು ಉತ್ತಮ.
ಮನಿಸಿ: ನಿಮಗೆ ಡೈರಿ ಉತ್ಪನ್ನಗಳು ಅಲರ್ಜಿ ಇದ್ದರೆ ಅಥವಾ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net