ಮಟನ್ಗಿಂತ ಕೋಳಿ ಮಾಂಸ ಒಳ್ಳೆಯದು, ಆದರೆ, ಎಣ್ಣೆಯಲ್ಲಿ ಕರಿದ ಚಿಕನ್ ಮತ್ತು ಮಸಾಲೆಯುಕ್ತ ಕರಿಗಳಿಂದ ಕೂಡಿರುವ ಚಿಕನ್ ತಿನ್ನುವುದು ತೊಂದರೆಯೇ. ಕೋಳಿ ಮಾಂಸದಲ್ಲಿ ಪ್ರೋಟೀನ್ ಅಧಿಕವಾಗಿದ್ದು, ಕೊಬ್ಬು ಕಡಿಮೆ ಇರುತ್ತದೆ. ಇದನ್ನು ತಿಂದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುವುದಿಲ್ಲ ಮತ್ತು ಹೊಟ್ಟೆ ತುಂಬಿದ ಅನುಭವ ಕಾಡುತ್ತದೆ. ವಾಸ್ತವವಾಗಿ, ಬೇಯಿಸಿದ ಕೋಳಿ ಮಾಂಸ, ಗ್ರಿಲ್ಡ್ ಕೋಳಿ ಮಾಂಸ ಅಥವಾ ಕಡಿಮೆ ಎಣ್ಣೆಯಿಂದ ಬೇಯಿಸಿದ ಚರ್ಮರಹಿತ ಕೋಳಿ ಮಾಂಸವು ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ,(ಏಜೆನ್ಸೀಸ್).