ಆಹಾರ ಪ್ರಿಯರೇ ಎಚ್ಚರ! ನೀವು ಇಷ್ಟಪಟ್ಟು ತಿನ್ನುವಂತಹ ಈ ಆಹಾರಗಳು ಮದ್ಯಪಾನದಷ್ಟೇ ಅಪಾಯಕಾರಿ...Dangerous food

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Dangerous food: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿರುವಂತಹ ಮಾಹಿತಿ. ಆದರೆ, ನಾವು ಪ್ರತಿನಿತ್ಯ ಸೇವಿಸುವಂತಹ ಕೆಟ್ಟ ಆಹಾರ ಪದ್ಧತಿಗಳು ಕೆಲವೊಮ್ಮೆ ಮದ್ಯಪಾನದಿಂದ ಸಂಭವಿಸಬಹುದಂತಹ ಆರೋಗ್ಯ ಸಮಸ್ಯೆಗಳನ್ನು ನಮಗೆ ನೀಡಬಹುದು. ಹಾಗಿದ್ದರೆ, ಅಂತಹ ಆಹಾರ ಪದಾರ್ಥಗಳು ಯಾವುದು ಎಂದು ನೋಡೋಣ ಬನ್ನಿ...
ಪ್ರತಿನಿತ್ಯ ಸೇವಿಸುವಂತಹ ಸಕ್ಕರೆ ಮಿಶ್ರಿತ ಆಹಾರಗಳು, ಪಾನೀಯಗಳು, ಹೆಚ್ಚಿನ ಕೊಬ್ಬಿನ ಮತ್ತು ಹುರಿದ ಆಹಾರಗಳು ಮತ್ತು ಕೆಂಪು ಮಾಂಸವು ಯಕೃತ್ತಿಗೆ ಹಾನಿಕಾರಕವಾಗಿದೆ. ಈ ಆಹಾರವನ್ನು ಸೇವಿಸುವುದರಿಂದ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗಿ, ಉರಿಯೂತವನ್ನು ಹೆಚ್ಚಿಸುತ್ತದೆ. ಇದರಿಂದ ಯಕೃತ್ತಿಗೆ ಹಾನಿಯಾಗುತ್ತದೆ.

ಸಿಹಿತಿಂಡಿಗಳ ಅತಿಯಾದ ಸೇವನೆಯು ಯಕೃತ್ತಿಗೆ ಅಪಾಯಕಾರಿ

ಸಕ್ಕರೆ ಬಳಸಿದ ಆಹಾರ ಪದಾರ್ಥಗಳಾದ , ಕುಕೀಸ್, ಸಿಹಿ ಪಾನೀಯಗಳು, ಸೋಡಾ, ಸಕ್ಕರೆ ಹಣ್ಣಿನ ರಸಗಳು, ಕ್ಯಾಂಡಿ ಮತ್ತು ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಇದು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಉತ್ಪತ್ತಿಯಾಗುತ್ತದೆ. ಇದರಿಂದ ಆದಷ್ಟು ಜನರು ಪಿತ್ತಜನಕಾಂಗದ ಕಾಯಿಲೆಗೆ ಒಳಗಾಗುತ್ತಾರೆ.

ಹುರಿದ ಆಹಾರಗಳನ್ನು ತಪ್ಪಿಸಿ

ಇಂದಿನ ದಿನಗಳಲ್ಲಿ ಆದಷ್ಟು ಜನರು ಹೊರಗಿನ ತಿಂಡಿಯನ್ನು ಸೇವಿಸಲು ಬಯಸುತ್ತಾರೆ. ಅದರಲ್ಲಿ ಹೆಚ್ಚಾಗಿ, ಪಿಜ್ಜಾ, ಬರ್ಗರ್ ಮತ್ತು ಫ್ರೆಂಚ್ ಫ್ರೈಗಳಂತಹ ಫಾಸ್ಟ್ ಫುಡ್‌ಗಳನ್ನು ಅಗತ್ಯಕ್ಕೂ ಮೀರಿ ಸೇವಿಸುವುದರಿಂದ ಯಕೃತ್ತಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೆಯೇ ಇದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಿ, ಆಹಾರವು ಉರಿಯೂತವನ್ನು ಹೆಚ್ಚಿಸುತ್ತದೆ.

ಸಂಸ್ಕರಿಸಿದ ಮಾಂಸ

ಮಾರುಕಟ್ಟೆಯಲ್ಲಿ ಸಿಗುವಂತಹ ಕೆಂಪು ಮಾಂಸದಲ್ಲಿ ಸ್ಯಾಚುರೇಟೆಡ್​ ಕೊಬ್ಬು ಅಧಿಕವಾಗಿದ್ದು, ಇದರ ಅತಿಯಾದ ಸೇವನೆಯು ಯಕೃತ್ತಿಗೆ ಉರಿಯೂತವನ್ನು ಉಂಟುಮಾಡಿ, ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ಕಾರಣವಾಗುತ್ತದೆ. ಹಾಗಾಗಿ ಇವುಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದರಿಂದ ಯಕೃತ್ತಿಗೆ ಹಾನಿಯಾಗದಂತೆ ತಡೆಯಬಹುದು.

ಉಪ್ಪು ಅಧಿಕವಾಗಿರುವ ಆಹಾರಗಳು

ನೀವು ಸೇವಿಸುವ ಯಾವುದೇ ಆಹಾರಗಳಲ್ಲಿ ಅಧಿಕವಾದ ಉಪ್ಪು ಕಂಡರೆ, ಅದನ್ನು ಸೇವಿಸುವುದನ್ನು ಕಡಿಮೆ ಮಾಡಿ. ಇದರಿಂದ ನಿಮ್ಮ ಯಕೃತ್ತಿಗೆ ತೊಂದರೆಯಾಗಬಹುದು. ಹಾಗಾಗಿ ಪ್ಯಾಕ್ ಮಾಡಿದ ಆಹಾರ, ಸಂಸ್ಕರಿಸಿದ ಮಾಂಸಗಳ ಸೇವನೆಯನ್ನು ಕಡಿಮೆ ಮಾಡಿ ಇಲ್ಲದಿದ್ದರೆ, ಇದು ನಿಮ್ಮ ಯಕೃತ್ತನ್ನು ಹಾನಿಗೊಳಿಸುತ್ತದೆ.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು

ಬಿಳಿ ಬ್ರೆಡ್, ಬಿಳಿ ಅನ್ನ ಮತ್ತು ಪೇಸ್ಟ್ರಿಗಳು ಕಡಿಮೆ ಫೈಬರ್ ಅನ್ನು ಹೊಂದಿರುತ್ತವೆ. ಇವು ರಕ್ತದಲ್ಲಿ ಸಕ್ಕರೆಯನ್ನು ಹೆಚ್ಚಿಸಬಹುದು. ಹಾಗಾಗಿ ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ ಇಲ್ಲದಿದ್ದರೆ, ಕೊಬ್ಬಿನ ಶೇಖರಣೆಗೆ ಕಾರಣವಾಗಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net